ಕರ್ನಾಟಕದಲ್ಲಿ ಕೊರೋನಾ ಕೊಂಚ ಹೆಚ್ಚಳ: ಇಲ್ಲಿದೆ ಆ.17ರ ಅಂಕಿ-ಸಂಖ್ಯೆ

* ಕರ್ನಾಕದಲ್ಲಿ ಕೊಂಚ ಕೊರೋನಾ ಏರಿಕೆ
* ಪಾಸಿಟಿವ್ ಕೇಸ್ ಹಾಗೂ ಸಾವಿನ ಸಂಖ್ಯೆಯಲ್ಲೂ ಹೆಚ್ಚಳ
* 1298 ಜನರಿಗೆ ಸೋಂಕು, 32 ಮಂದಿ ಬಲಿ

1298 New Coronavirus Cases and 32 deaths In Karnataka On August 17th rbj

ಬೆಂಗಳೂರು, (ಆ.17): ಕೊರೋನಾ ಎರಡನೇ ಅಲೆ ನಂತರ ರಾಜ್ಯದಲ್ಲಿ ಪ್ರಕರಣಗಳ ಸಂಖ್ಯೆ ಅಲ್ಪ ಏರಿಕೆಯಾಗಿದ್ದು ಇಂದು (ಆ.17) 1298 ಕೊರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ.

ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 29,31,827ಕ್ಕೆ ಏರಿಕೆಯಾಗಿದೆ. ಒಂದೇ ದಿನದಲ್ಲಿ ಮಹಾಮಾರಿಗೆ 32 ಮಂದಿ ಬಲಿಯಾಗಿದ್ದು, ಇದರೊಂದಿಗೆ ಸಾವಿನ ಸಂಖ್ಯೆ 37039ಕ್ಕೆ ಏರಿಕೆಯಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಕೋವಿಡ್ ಗುಣಮುಖರಿಗೆಲ್ಲಾ ಕ್ಷಯ ರೋಗ ಪತ್ತೆ ಕಾರ್ಯ : ಸುಧಾಕರ್

ಬೆಂಗಳೂರಿನಲ್ಲಿ ಮಂಗಳವಾರ) 340 ಮಂದಿಗೆ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ನಗರದಲ್ಲಿ ಸೋಂಕಿತರ ಸಂಖ್ಯೆ 1233512ಕ್ಕೆ ಏರಿಕೆಯಾಗಿದೆ. ಸೋಂಕು ಹೆಚ್ಚಳವಾದರೂ ಮರಣ ಪ್ರಮಾಣ ಇಳಿಕೆಯಾಗಿದ್ದು, ಇಂದು ನಗರದಲ್ಲಿ ಒಬ್ಬರು ಸೋಂಕಿತರು ಮಾತ್ರ ಸಾವನ್ನಪ್ಪಿದ್ದಾರೆ.

ಇನ್ನು ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 1833 ಸೋಂಕಿತರು ಗುಣಮುಖರಾಗಿದ್ದು, ಇದರೊಂದಿಗೆ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 28,73,281ಕ್ಕೆ ಏರಿಕೆಯಾಗಿದೆ. ಇನ್ನು 21481 ಸಕ್ರಿಯ ಪ್ರಕರಣಗಳಿವೆ. ಈ ಮೂಲಕ ಸದ್ಯ ಕೊರೋನಾ ಪಾಸಿಟಿವಿಟಿ ದರ ಶೇ. 1.01 ಇದೆ.

Latest Videos
Follow Us:
Download App:
  • android
  • ios