ಕರ್ನಾಟಕದಲ್ಲಿ ಹಂತ-ಹಂತವಾಗಿ ಕೊರೋನಾ ಸೋಂಕು ತಗ್ಗುತ್ತಿದೆ. ಇನ್ನು ಶುಕ್ರವಾರ ಅಂಕಿ೦ಸಂಖ್ಯೆ ಈ ಕೆಳಗಿನಂತಿದೆ.

ಬೆಂಗಳೂರು, (ಡಿ.11): ರಾಜ್ಯದಲ್ಲಿ ಕೊರೋನಾ ಅಬ್ಬರ ಕಡಿಮೆಯಾಗುತ್ತಿದ್ದು, ಇಂದು (ಶುಕ್ರವಾರ) 1,210 ಪಾಸಿಟಿವ್ ಕೇಸ್ ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 8,99,011ಕ್ಕೆ ಏರಿಕೆಯಾಗಿದೆ.

ಇನ್ನು ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ ಕೊರೋನಾ ಸೋಂಕಿನಿಂದ 16 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟಾರೆ ರಾಜ್ಯದಲ್ಲಿ ಸೋಂಕಿನಿಂದ 11,928 ಮಂದಿ ಬಲಿಯಾಗಿದ್ದಾರೆ.

ಹೊಸ ವರ್ಷಾಚರಣೆ ಮಾಡುವವರಿಗೆ ಇದು ಎಚ್ಚರಿಕೆ ಸಂದೇಶ

ರಾಜ್ಯದಲ್ಲಿ ಶುಕ್ರವಾರ 1,807 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 8,68,471 ಏರಿಕೆಯಾಗಿದೆ. ಇನ್ನು18,593 ಸಕ್ರೀಯ ಪ್ರಕರಣಗಳಿವೆ.

ಬೆಂಗಳೂರಿನಲ್ಲಿ ಕಳೆದ 24 ಗಂಟೆಗಳಲ್ಲಿ 659 ಮಂದಿಗೆ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ 3,77,251ಕ್ಕೆ ಏರಿಕೆಯಾಗಿದೆ. ಇನ್ನು ಸೋಂಕಿಗೆ 6 ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ನಗರದಲ್ಲಿ ಒಟ್ಟಾರೆ 4,224 ಮಂದಿ ಬಲಿಯಾಗಿದ್ದಾರೆ.