Corona Update ಕರ್ನಾಟಕದಲ್ಲಿ ತಗ್ಗಿದ ಕೊರೋನಾ, ಇಲ್ಲಿದೆ ಫೆ.05ರ ಅಂಕಿ-ಸಂಖ್ಯೆ
* ಕರ್ನಾಟಕದಲ್ಲಿ ತಗ್ಗಿದ ಕೊರೋನಾ ವೈರಸ್
* ರಾಜ್ಯದಲ್ಲಿನ ಪಾಸಿಟಿವಿಟಿ ದರವೂ ಒಂದಂಕಿಗೆ ಇಳಿಕೆ
* ಮಾಹಿತಿ ನೀಡಿದ ರಾಜ್ಯ ಆರೋಗ್ಯ ಇಲಾಖೆ
ಬೆಂಗಳೂರು, (ಫೆ.05): ಕರ್ನಾಟಕದಲ್ಲಿ ಕೊರೋನಾ ಸೋಂಕಿನ (Coronavirus) ಸಂಖ್ಯೆ ಗಣನೀಯವಾಗಿ ಇಳಿಯುತ್ತಿದ್ದು, ಇಂದು(ಶನಿವಾರ) 12,009 ಜನರಿಗೆ ಪಾಸಿಟಿವ್ ಕೇಸ್ ಪತ್ತೆಯಾಗಿವೆ.
50 ಜನ ಸೋಂಕಿತರು ಮೃತಪಟ್ಟಿದ್ದಾರೆ. 25,854 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 38,87,733 ಕ್ಕೆ ಏರಿಕೆಯಾಗಿದ್ದು, 39,300 ಸೋಂಕಿತರು ಮೃತಪಟ್ಟಿದ್ದಾರೆ.
Covid 19 Deaths: ವಿಶ್ವದಲ್ಲೇ ಭಾರತ ನಂ.3: 5 ಲಕ್ಷ ಗಡಿ ದಾಟಿದ ಕೊರೋನಾ ಸಾವು!
ಇದುವರೆಗೆ 37,39,197 ಜನ ಗುಣಮುಖರಾಗಿದ್ದಾರೆ.ಇದರೊಂದಿಗೆ ರಾಜ್ಯದಲ್ಲಿ 1,09,203 ಸಕ್ರಿಯ ಪ್ರಕರಣಗಳಿವೆ. ಈ ಮೂಲಕ ಪಾಸಿಟಿವಿಟಿ ದರ ಶೇಕಡ 9.04 ರಷ್ಟು ಇದೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಶನಿವಾರ 4532 ಜನರಿಗೆ ಕೊರೋನಾ ಸೋಂಕು ತಗುಲಿದ್ದು, 15 ಜನ ಸೋಂಕಿತರು ಮೃತಪಟ್ಟಿದ್ದಾರೆ. 10,420 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 45,742 ಸಕ್ರಿಯ ಪ್ರಕರಣಗಳಿವೆ.
ಬೆಳಗಾವಿ 1028, ಚಿತ್ರದುರ್ಗ 436, ಹಾಸನ 413, ಮೈಸೂರು 763, ಶಿವಮೊಗ್ಗ 419 ಜನರಿಗೆ ಹೊಸದಾಗಿ ಸೋಂಕು ತಗುಲಿದೆ. ಬೆಂಗಳೂರು ನಗರದಲ್ಲಿ 15, ದಕ್ಷಿಣಕನ್ನಡ 5, ಕಲಬುರಗಿ 3, ಮೈಸೂರು 4 ಸೇರಿದಂತೆ ರಾಜ್ಯದಲ್ಲಿ 50 ಜನ ಸೋಂಕಿತರು ಮೃತಪಟ್ಟಿದ್ದಾರೆ.
ವಿಶ್ವದಲ್ಲೇ ಭಾರತ ನಂ.3: 5 ಲಕ್ಷ ಗಡಿ ದಾಟಿದ ಕೊರೋನಾ ಸಾವು!
ಭಾರತದಲ್ಲಿ ಕೊರೋನಾ ಸಾಂಕ್ರಾಮಿಕಕ್ಕೆ ಬಲಿಯಾದವರ ಸಂಖ್ಯೆ ಶುಕ್ರವಾರಕ್ಕೆ 5 ಲಕ್ಷ ಗಡಿ ದಾಟಿದೆ. ಈ ಮೂಲಕ ಅಮೆರಿಕ, ಬ್ರೆಜಿಲ್ ಬಳಿಕ ಕೋವಿಡ್ ಸೋಂಕಿಗೆ ಅತಿ ಹೆಚ್ಚು ಜನರು ಮೃತಪಟ್ಟಮೂರನೇ ದೇಶವಾಗಿ ಭಾರತ ಮಾರ್ಪಟ್ಟಿದೆ. ಅಮೆರಿಕದಲ್ಲಿ ಈವರೆಗೆ 9.2 ಲಕ್ಷ ಮತ್ತು ಬ್ರೆಜಿಲ್‌ನಲ್ಲಿ 6.3 ಲಕ್ಷ ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಭಾರತದಲ್ಲಿ ಶುಕ್ರವಾರ 1072 ಸಾವು ವರದಿ ಆಗುವ ಮೂಲಕ ಒಟ್ಟು ಸಾವಿನ ಸಂಖ್ಯೆ 5,00,055ಕ್ಕೆ ಏರಿಕೆ ಆಗಿದೆ.
ಭಾರತದಲ್ಲಿ ಮೊದಲ ಕೊರೋನಾ ಸಾವು 2020ರ ಮಾಚ್‌ರ್ 10ರಂದು ಕರ್ನಾಟಕದ ಕಲಬುರಗಿಯಲ್ಲಿ ಸಂಭವಿಸಿತ್ತು. ಕಳೆದ ಜು.1ರಂದು ಸಾವಿಗೀಡಾದವರ ಸಂಖ್ಯೆ 4 ಲಕ್ಷ ಗಡಿ ದಾಟಿತ್ತು. ಅನಂತರ 217 ದಿನಗಳ ಬಳಿಕ 4ರಿಂದ 5 ಲಕ್ಷ ಗಡಿ ದಾಟಿದೆ.
ಕಳೆದ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಕೊರೊನಾ 2ನೇ ಅಲೆಗೆ ಭಾರತ ತತ್ತರಿಸಿತ್ತು. ಸಾವಿನ ಪ್ರಮಾಣ ಕಳೆದ ಮೇ 23ರಂದು 3 ಲಕ್ಷ ಗಡಿದಾಟಿತ್ತು. ಮತ್ತು ಏ.27ರಂದು 2 ಲಕ್ಷ ಗಡಿ ದಾಟಿತ್ತು. ಇದಕ್ಕೆ ಹೋಲಿಸಿದರೆ 4ರಿಂದ 5 ಲಕ್ಷಕ್ಕೆ ತಲುಪಲು ಅತ್ಯಂತ ಸುದೀರ್ಘ ಕಾಲ ಹಿಡಿದಿದೆ.
1.49 ಲಕ್ಷ ಹೊಸ ಕೇಸ್: 4 ವಾರದ ಕನಿಷ್ಠ
ದೇಶದಲ್ಲಿ ಕೊರೋನಾ ಸೋಂಕು ಮತ್ತಷ್ಟುಇಳಿಮುಖವಾಗಿದೆ. ಶುಕ್ರವಾರ ಬೆಳಗ್ಗೆ 8 ಗಂಟೆಗೆ ಕೊನೆಗೊಂಡ 24 ತಾಸುಗಳ ಅವಧಿಯಲ್ಲಿ ದೇಶದಲ್ಲಿ 1.49 ಲಕ್ಷ ಹೊಸ ಕೊರೋನಾ ಪ್ರಕರಣಗಳು ದೃಢಪಟ್ಟಿವೆ. ಇದು 26 ದಿನಗಳ (4 ವಾರದ) ಕನಿಷ್ಠವಾಗಿದೆ.
ಇದೇ ವೇಳೆ 1072 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಕೇರಳವು ಪರಿಷ್ಕೃತ ಮಾರ್ಗಸೂಚಿ ಅನುಸಾರ 565 ಹಳೆಯ ಸಾವುಗಳನ್ನು ಕೋವಿಡ್ ಸಾವಿನ ಲೆಕ್ಕಕ್ಕೆ ಸೇರಿಸಿದ್ದೇ ಸಾವಿನ ಸಂಖ್ಯೆ ಏರಿಕೆಗೆ ಕಾರಣ.ಹೊಸ ಸೋಂಕಿತರೂ ಸೇರಿ ಸಕ್ರಿಯ ಸೋಂಕಿನ ಪ್ರಮಾಣ 14.35 ಲಕ್ಷಕ್ಕೆ ಇಳಿಕೆಯಾಗಿದೆ. ಚೇತರಿಕೆ ಪ್ರಮಾಣ ಶೇ.95.39ಕ್ಕೆ ಸುಧಾರಿಸಿದೆ. ದೈನಂದಿನ ಪಾಸಿಟಿವಿಟಿ ದರ ಶೇ.9.27ಕ್ಕೆ ತಗ್ಗಿದೆ.
ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 4.19 ಕೋಟಿಗೆ ಏರಿಕೆಯಾಗಿದೆ. ಒಟ್ಟು ಸಾವಿಗೀಡಾದವರ ಸಂಖ್ಯೆ 5 ಲಕ್ಷಕ್ಕೆ ತಲುಪಿದೆ. ಒಟ್ಟು ಸೋಂಕಿತರ ಪೈಕಿ 4 ಕೋಟಿ ಮಂದಿ ಗುಣಮುಖರಾಗಿದ್ದಾರೆ. ಈ ನಡುವೆ ದೇಶದಲ್ಲಿ 168.47 ಕೋಟಿ ಡೋಸ್ ಲಸಿಕೆ ವಿತರಣೆ ಮಾಡಲಾಗಿದೆ.