ಯಾಸ್’ ಚಂಡಮಾರುತ ಹಿನ್ನೆಲೆ: 12 ರೈಲುಗಳು ರದ್ದು
- ಕರಾವಳಿಗೆ ‘ಯಾಸ್’ ಚಂಡಮಾರುತ ಅಪ್ಪಳಿಸಲಿರುವ ಹಿನ್ನೆಲೆ
- ನೈಋುತ್ಯ ರೈಲ್ವೆ ಮೇ 24ರಿಂದ 27ರವರೆಗೆ ಬೆಂಗಳೂರಿನಿಂದ ಆ ಭಾಗಕ್ಕೆ ಸಂಚರಿಸುವ 12 ರೈಲುಗಳ ಸಂಚಾರ ಸ್ಥಗಿತ
- ಬೆಂಗಳೂರಿನಿಂದ ಪಶ್ಚಿಮ ಬಂಗಾಳ, ಅಸ್ಸಾಂ, ಒಡಿಶಾ, ಬಿಹಾರ ರಾಜ್ಯಗಳು ಹಾಗೂ ಈ ರಾಜ್ಯಗಳಿಂದ ಬೆಂಗಳೂರಿಗೆ ಬರುವ ರೈಲುಗಳ ಸಂಚಾರ ಸಂಚಾರವನ್ನು ಸ್ಥಗಿತ
ಬೆಂಗಳೂರು (ಮೇ.23): ದೇಶದ ಪೂರ್ವ ಕರಾವಳಿಗೆ ‘ಯಾಸ್’ ಚಂಡಮಾರುತ ಅಪ್ಪಳಿಸಲಿರುವ ಹಿನ್ನೆಲೆಯಲ್ಲಿ ನೈಋುತ್ಯ ರೈಲ್ವೆ ಮೇ 24ರಿಂದ 27ರವರೆಗೆ ಬೆಂಗಳೂರಿನಿಂದ ಆ ಭಾಗಕ್ಕೆ ಸಂಚರಿಸುವ 12 ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಿದೆ.
ಬೆಂಗಳೂರಿನಿಂದ ಪಶ್ಚಿಮ ಬಂಗಾಳ, ಅಸ್ಸಾಂ, ಒಡಿಶಾ, ಬಿಹಾರ ರಾಜ್ಯಗಳು ಹಾಗೂ ಈ ರಾಜ್ಯಗಳಿಂದ ಬೆಂಗಳೂರಿಗೆ ಬರುವ ರೈಲುಗಳ ಸಂಚಾರ ಸಂಚಾರವನ್ನು ಸ್ಥಗಿತಗೊಳಿಸಿದೆ.
ಭೀಕರವಾಗಿ ಅಪ್ಪಳಿಸೋ ಸೈಕ್ಲೋನ್ ಯಾಸ್ ಹೆಸರಿನ ಅರ್ಥ ಮಾತ್ರ ಸುಂದರ..! ..
ಹೌರಾ-ಯಶವಂತಪುರ ಎಕ್ಸ್‌ಪ್ರೆಸ್, ಯಶವಂತಪುರ-ಹೌರಾ ಎಕ್ಸ್‌ಪ್ರೆಸ್, ಗುವಾಹಟಿ-ಬೆಂಗಳೂರು ಕಂಟೋನ್ಮೆಂಟ್ ಸ್ಪೆಷಲ್ ಎಕ್ಸ್‌ಪ್ರೆಸ್, ಹೌರಾ-ಯಶವಂತಪುರ ಸ್ಪೆಷಲ್ ಎಕ್ಸ್‌ಪ್ರೆಸ್, ಯಶವಂತಪುರ- ಹೌರಾ ಸ್ಪೆಷಲ್ ಎಕ್ಸ್‌ಪ್ರೆಸ್, ಮುಜಾಫರ್ ಪುರ-ಯಶವಂತಪುರ ಸ್ಪೆಷಲ್ ಎಕ್ಸ್‌ಪ್ರೆಸ್, ಭುವನೇಶ್ವರ-ಕೆಎಸ್‌ಆರ್ ಸ್ಪೆಷಲ್ ಎಕ್ಸ್‌ಪ್ರೆಸ್ ರೈಲು, ಕೆಎಸ್‌ಆರ್ ಬೆಂಗಳೂರು- ಭುವನೇಶ್ವರ ಸ್ಪೆಷಲ್ ಎಕ್ಸ್‌ಪ್ರೆಸ್, ಕೆಎಸ್‌ಆರ್ ಬೆಂಗಳೂರು- ನ್ಯೂ ತಿನ್ಸುಖಿಯಾ ಸ್ಪೆಷಲ್ ಎಕ್ಸ್‌ಪ್ರೆಸ್, ಭಾಗಲ್ಪುರ್-ಯಶವಂತಪುರ ಸ್ಪೆಷಲ್ ಎಕ್ಸ್‌ಪ್ರೆಸ್, ಕಾಮಾಕ್ಯ-ಯಶವಂತಪುರ ಸ್ಪೆಷಲ್ ಎಕ್ಸ್‌ಪ್ರೆಸ್ ಹಾಗೂ ಯಶವಂತಪುರ-ಹೌರಾ ಸ್ಪೆಷಲ್ ಎಕ್ಸ್‌ಪ್ರೆಸ್ ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ನೈಋುತ್ಯ ರೈಲ್ವೆ ತಿಳಿಸಿದೆ.