ಕರ್ನಾಟಕ ಸರ್ಕಾರದಿಂದ 12 ಅಧಿಕಾರಿಗಳ ಸ್ಥಾನಪಲ್ಲಟ ಮಾಡಲಾಗಿದೆ. ಅಲ್ಲದೇ ಎಲ್ಲರಿಗೂ ಕೂಡ ಸ್ಥಾನ ನಿಗಧಿ ಮಾಡಲಾಗಿದೆ.
ಬೆಂಗಳೂರು: ಇತ್ತೀಚೆಗೆ ಸ್ಥಾನಪಲ್ಲಟಗೊಂಡ ಬಳಿಕ ಹುದ್ದೆ ನಿರೀಕ್ಷೆಯಲ್ಲಿದ್ದ 12 ಮಂದಿ ಡಿವೈಎಸ್ಪಿಗಳಿಗೆ ಸೋಮವಾರ ಡಿಜಿಪಿ ಹೊಸ ಸ್ಥಾನ ಕಲ್ಪಿಸಿದ್ದಾರೆ. ಓ.ಬಿ.ಕಲ್ಲೇಶಪ್ಪ- ಗುಪ್ತವಾರ್ತೆ, ಎಸ್.ಜೆ.ಕುಮಾರಸ್ವಾಮಿ- ಪಶ್ಚಿಮ ವಲಯ ಐಜಿಪಿ ಕಚೇರಿ, ಸುಧಾಮ ಬೊಮ್ಮಾಯ ನಾಯಕ್- ಸಿಐಡಿ.
ಎಸ್.ಪ್ರಕಾಶ್- ಕೇಂದ್ರ ವಲಯ ಐಜಿಪಿ ಕಚೇರಿ, ಎಸ್.ಕೆ.ಮಾರಿಹಾಳ್- ಗುಪ್ತವಾರ್ತೆ, ರಮಣಗೌಡ ಎ.ಹಟ್ಟಿ- ಡಿಸಿಆರ್‌ಇ ಬಾಗಲಕೋಟೆ, ಟಿ.ವೆಂಕಟೇಶ್- ಗುಪ್ತಚರ, ಗುರುನಾಥ.ಬ.ಮಟ್ಟೂರು- ಸಿಸಿಆರ್‌ಬಿ, ಹುಬ್ಬಳ್ಳಿ- ಧಾರವಾಡ, ಕೆ.ಬಿ.ವಿಶ್ವನಾಥ್- ದಕ್ಷಿಣ ವಲಯ ಐಜಿಪಿ, ಎಸ್.ಕೆ.ಉಮೇಶ್ -ಗುಪ್ತವಾರ್ತೆ, ವಿದ್ಯಾನಂದ ಎಲ್.ತೇಜಸ್ವಿ-ಐಎಸ್‌ಡಿ ಹಾಗೂ ಎಂ.ಎಲ್.ಪುರುಷೋತ್ತಮ- ಎಸಿಬಿ.
