ಇಂದು (ಶುಕ್ರವಾರ) ಕರ್ನಾಟಕಕ್ಕೆ ಕೊರೋನಾಘಾತ: ಎಷ್ಟು ಕೇಸ್? ಸಾವು? ಫುಲ್ ಡಿಟೇಲ್ಸ್
ಶುಕ್ರವಾರವೂ ಸಹ ಕರುನಾಡಲ್ಲಿ ಕೊರೋನಾ ಮಹಾಸ್ಫೋಟವಾಗಿದ್ದು, ಮರಣ ಮೃದಂಗ ಮುಂದುವರೆದಿದೆ. ಹಾಗಾದ್ರೆ ಕಳೆದ 24 ಗಂಟೆಗಳಲ್ಲಿ ಎಷ್ಟು ಕೇಸ್?ಎಷ್ಟು ಸಾವು? ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.
ಬೆಂಗಳೂರು (ಜುಲೈ.17): ರಾಜ್ಯದಲ್ಲಿ ಕೊರೋನಾ ವೈರಸ್ ಮರಣ ಮೃದಂಗ ಮುಂದುವರೆದಿದ್ದು, ಶುಕ್ರವಾರ ಒಂದೇ ದಿನ ಬರೋಬ್ಬರಿ 115 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 1,147ಕ್ಕೆ ಏರಿಕೆಯಾಗಿದೆ.
ಕೊರೋನಾ ವೈರಸ್ ನಿಂದಾಗಿ ಕಳೆದ 24 ಗಂಟೆಯಲ್ಲಿ ಬೆಂಗಳೂರಿನಲ್ಲಿ 75 ಸೋಂಕಿತರು ಸೇರಿದಂತೆ ರಾಜ್ಯದಲ್ಲಿ ಒಟ್ಟು 115 ಮಂದಿ ಸಾವನ್ನಪ್ಪಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ತಿಳಿಸಿದ್ದಾರೆ.
ಕೊರೋನಾ ಆತಂಕ, ಬಾಲಿವುಡ್ ಕರ್ಮಕಾಂಡ ಸೇರಿದಂತೆ ಜು.17ರ ಟಾಪ್ 10 ಸುದ್ದಿ!
ಇಂದು (ಶುಕ್ರವಾರ) ಬೆಂಗಳೂರು ನಗರವೊಂದರಲ್ಲೆ ಅತಿ ಹೆಚ್ಚು ಅಂದರೆ 2,208 ಪ್ರಕರಣಗಳು ವರದಿಯಾಗಿದ್ದು, ರಾಜ್ಯದಲ್ಲಿ ಒಟ್ಟು 3,693 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ. ಇದರಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 55,115ಕ್ಕೇರಿಕೆಯಾಗಿದೆ.
ರಾಜ್ಯದಲ್ಲಿ 24,700 ಮಂದಿಗೆ ಕೊರೋನಾ ಪರಿಕ್ಷೆ ನಡೆಸಲಾಗಿತ್ತು. ಈ ಪೈಕಿ 3693 ಮಂದಿಗೆ ಸೋಂಕು ಹೊಸದಾಗಿ ಪತ್ತೆಯಾಗಿದೆ. ಈ ಪೈಕಿ 33,205 ಸಕ್ರಿಯ ಪ್ರಕರಣಗಳಿವೆ.
ಇನ್ನು ರಾಜ್ಯದಲ್ಲಿ ಚೇತರಿಕೆಯ ಪ್ರಮಾಣ ಶೇಕಡಾ 37.66 ರಷ್ಟಿದ್ದು. ಮರಣ ಪ್ರಮಾಣ ಶೇ. 2.05 ರಷ್ಟು ಇದೆ.