6 ತಿಂಗಳಲ್ಲಿ ಕರ್ನಾಟಕದಲ್ಲಿ 11 ಹುಲಿಗಳು ಸಾವು: ದೇಶದಲ್ಲೇ ಮೂರನೇ ಸ್ಥಾನ

ಕಳೆದ ವರ್ಷಕ್ಕಿಂತ ಈ ವರ್ಷ ಕರ್ನಾಟಕದಲ್ಲಿ ಹುಲಿಗಳ ಸಾವಿನ ಸಂಖ್ಯೆ ಒಂದು ಕಡಿಮೆಯಾಗಿದೆ. ಇತ್ತೀಚಿಗೆ ಬಿಡುಗಡೆಯಾದ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ (ಎನ್‌ಟಿಸಿಎ) ಅಂಕಿ-ಅಂಶಗಳ ಪ್ರಕಾರ, ಮಧ್ಯ ಪ್ರದೇಶದಲ್ಲಿ 23, ಮಹಾರಾಷ್ಟ್ರದಲ್ಲಿ 14 ಹುಲಿಗಳು ಸಾವನ್ನಪ್ಪಿವೆ.

11 tigers died in karnataka in 6 months grg

ಭೋಪಾಲ್‌(ಜು.13):  ಈ ವರ್ಷದ ಮೊದಲ 6 ತಿಂಗಳಲ್ಲಿ 12 ರಾಜ್ಯಗಳಲ್ಲಿ 75 ಹುಲಿಗಳು ಸಾವನ್ನಪಿವೆ. ಕರ್ನಾಟಕದಲ್ಲಿ 11 ಹುಲಿಗಳು ಸಾವನ್ನಪ್ಪಿದ್ದು, ದೇಶದಲ್ಲೇ ಮೂರನೇ ಸ್ಥಾನದಲ್ಲಿದೆ. 

ಕಳೆದ ವರ್ಷಕ್ಕಿಂತ ಈ ವರ್ಷ ಕರ್ನಾಟಕದಲ್ಲಿ ಹುಲಿಗಳ ಸಾವಿನ ಸಂಖ್ಯೆ ಒಂದು ಕಡಿಮೆಯಾಗಿದೆ. ಇತ್ತೀಚಿಗೆ ಬಿಡುಗಡೆಯಾದ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ (ಎನ್‌ಟಿಸಿಎ) ಅಂಕಿ-ಅಂಶಗಳ ಪ್ರಕಾರ, ಮಧ್ಯ ಪ್ರದೇಶದಲ್ಲಿ 23, ಮಹಾರಾಷ್ಟ್ರದಲ್ಲಿ 14 ಹುಲಿಗಳು ಸಾವನ್ನಪ್ಪಿವೆ.

ರಾಜ್ಯದಲ್ಲಿ ಮುಂದುವರಿದ ಕಾಡಾನೆ ಸಾವು; ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್‌ನಲ್ಲಿ ಬೃಹತ್ ಹೆಣ್ಣಾನೆ ಕಳೇಬರ ಪತ್ತೆ!

ಅರಣ್ಯ ಇಲಾಖೆಗೆ ಹೆಚ್ಚುವರಿ ಅನುದಾನಕ್ಕೆ ಖಂಡ್ರೆ ಬೇಡಿಕೆ

ಬೆಂಗಳೂರು: ಅರಣೀಕರಣ, ವನ್ಯಜೀವಿ ಆವಾಸತಾಣ ನಿರ್ವಹಣೆ, ಮಾನವ- ವನ್ಯಜೀವಿ ಸಂಘರ್ಷ ತಡೆಯುವುದು ಸೇರಿದಂತೆ ಅರಣ್ಯ ಇಲಾಖೆಗೆ ಅಗತ್ಯವಿರುವ ಹೆಚ್ಚುವರಿ ಹಣಕಾಸು ಬೇಡಿಕೆ ಸಂಬಂಧ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಹಣಕಾಸು ಇಲಾಖೆ ಅಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ. 

ವಿಕಾಸಸೌಧದ ಕಚೇರಿಯಲ್ಲಿ ಹಣಕಾಸು ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಅರಣ್ಯತರ ಪ್ರದೇಶಗಳಲ್ಲಿ ಅರಣೀಕರಣದ ಪ್ರಮುಖ ಕಾಮಗಾರಿಗಳು, ಮಾನವ-ವನ್ಯಜೀವಿ ಸಂಘರ್ಷ ತಡೆ ಸಂಬಂಧಿಸಿದಂತೆ ಹಲವು ವಿಸ್ತ್ರತ ಪ್ರಸ್ತಾವನೆಗಳನ್ನು ಈಗಾಗಲೇ ಸಲ್ಲಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆಗೆ ಹೆಚ್ಚಿನ ಹಣ ಒದಗಿಸುವ ಅಗತ್ಯವಿದೆ ಎಂದು ಮನವರಿಕೆ ಮಾಡಿಕೊಟ್ಟರು.

Latest Videos
Follow Us:
Download App:
  • android
  • ios