Asianet Suvarna News Asianet Suvarna News

100 ನವೋದ್ಯಮಗಳಿಗೆ ಭಾರತೀಯ ಬಾಹ್ಯಾಕಾಶ ಸಂಸ್ಥೆ ನೆರವು: ಇಸ್ರೋ ಅಧ್ಯಕ್ಷ ಎಸ್‌ ಸೋಮನಾಥ್‌

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಯೊಂದಿಗೆ 100 ನವೋದ್ಯಮಗಳು ನೋಂದಾಯಿಸಿಕೊಂಡಿದ್ದು, ಬಾಹ್ಯಾಕಾಶ ಸಂಶೋಧನೆಯ ಹಲವು ವಲಯಗಳಲ್ಲಿ ನೆರವನ್ನು ಒದಗಿಸಲಾಗುತ್ತಿದೆ ಎಂದು ಸಂಸ್ಥೆಯ ಅಧ್ಯಕ್ಷ ಎಸ್‌ ಸೋಮನಾಥ್‌ ಹೇಳಿದ್ದಾರೆ.

100 startups registered with Indian Space Research Organisation  says ISRO chief Dr S Somanath gow
Author
First Published Nov 17, 2022, 4:38 PM IST

ಬೆಂಗಳೂರು (ನ.17): ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ಯೊಂದಿಗೆ 100 ನವೋದ್ಯಮಗಳು ನೋಂದಾಯಿಸಿಕೊಂಡಿದ್ದು, ಬಾಹ್ಯಾಕಾಶ ಸಂಶೋಧನೆಯ ಹಲವು ವಲಯಗಳಲ್ಲಿ ನೆರವನ್ನು ಒದಗಿಸಲಾಗುತ್ತಿದೆ ಎಂದು ಸಂಸ್ಥೆಯ ಅಧ್ಯಕ್ಷ ಎಸ್‌ ಸೋಮನಾಥ್‌ ಹೇಳಿದ್ದಾರೆ. ಬೆಂಗಳೂರು ತಂತ್ರಜ್ಞಾನ ಸಮಾವೇಶದ ಎರಡನೇ ದಿನವಾದ ಗುರುವಾರ ಅವರು 'ಭಾರತದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ: ಜಾಗತಿಕ ಒಳಿತಿಗಾಗಿ ನಾವೀನ್ಯತೆ' ವಿಚಾರ ಕುರಿತು ಉಪನ್ಯಾಸ ನೀಡಿದರು. ಭಾರತದ ಹಲವು ಕಂಪನಿಗಳಿಗೆ ಬಾಹ್ಯಾಕಾಶ ವಲಯದಲ್ಲಿ ಮಹತ್ತ್ವದ ಪಾತ್ರ ವಹಿಸುವ ಶಕ್ತಿ ಇದೆ. ಇಸ್ರೋ ಇವುಗಳಿಗೆ ಆರಂಭದಿಂದ ಹಿಡಿದು ಅಂತ್ಯದವರೆಗೂ ಪರಿಪೋಷಣೆ ಮಾಡಲಿದೆ. ಸದ್ಯಕ್ಕೆ 10 ಕಂಪನಿಗಳು ಉಪಗ್ರಹ ಮತ್ತು ರಾಕೆಟ್‌ ನಿರ್ಮಾಣದಲ್ಲಿ ತೊಡಗಿಕೊಂಡಿವೆ ಎಂದು ಅವರು ತಿಳಿಸಿದರು.

ಸಂಸ್ಥೆಯ ಮಹತ್ತ್ವಾಕಾಂಕ್ಷಿ ಯೋಜನೆಯಾದ ಚಂದ್ರಯಾನ-3 ಇನ್ನು ಕೆಲವೇ ತಿಂಗಳಲ್ಲಿ ಕಕ್ಷೆಯನ್ನು ಸೇರಲಿದೆ. ಈ ನಿಟ್ಟಿನಲ್ಲಿ ಇಸ್ರೋ, ಅಮೆರಿಕದ ನಾಸಾ ಸಂಸ್ಥೆಯೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದೆ. ಈ ಯೋಜನೆಯ ರಾಕೆಟ್‌ನಲ್ಲಿ ಬಳಸಲ್ಪಟ್ಟ ಕಂಪ್ಯೂಟರನ್ನು ಭಾರತದಲ್ಲೇ ತಯಾರಿಸಲಾಗಿತ್ತು ಎಂದು ಅವರು ನುಡಿದರು.

ಜಗತ್ತಿನ ಎಲ್ಲೆಡೆಗಳಲ್ಲೂ ಈಗ ಬಾಹ್ಯಾಕಾಶ ಪ್ರವಾಸೋದ್ಯಮ ಜನಪ್ರಿಯವಾಗುತ್ತಿದೆ. ಇಸ್ರೋ ಸಂಸ್ಥೆಯು ದೇಶದಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಮತ್ತು ಆಧುನಿಕ ತಯಾರಿಕೆ ವ್ಯವಸ್ಥೆಗಳಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತಿದೆ. ಮಿಕ್ಕಂತೆ ಉಪಗ್ರಹ ತಂತ್ರಜ್ಞಾನವನ್ನು ಮತ್ತೆ ಮುಂಚೂಣಿಗೆ ತರುವ ಪ್ರಯತ್ನಗಳು ನಡೆದಿವೆ. ಅಲ್ಲದೆ, ಪರಿಸರ ಸ್ನೇಹಿ ಮತ್ತು ಹೈಬ್ರಿಡ್‌ ಪ್ರೊಪಲ್ಶನ್‌, ಸಣ್ಣ ರಾಕೆಟ್‌ಗಳ ಉಡಾವಣೆ, ಕಾರ್ಬನ್‌ ಫೈಬರ್‍‌ ತಂತ್ರಜ್ಞಾನ, ರೋಬೋಟಿಕ್ಸ್‌, ಡ್ರೋನ್‌, ಕ್ವಾಂಟ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಇಸ್ರೋ ಛಾಪು ಮೂಡಿಸುತ್ತಿದೆ ಎಂದು ಸೋಮನಾಥ್‌ ವಿವರಿಸಿದರು.

ಎಲ್‌ವಿಎಂ 3 ರಾಕೆಟ್‌ನ ಹೊರುವ ಸಾಮರ್ಥ್ಯ ಹೆಚ್ಚಳ
ಬೆಂಗಳೂರು: ಅತ್ಯಂತ ತೂಕದ ಉಪಗ್ರಹಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿರುವ, ದೇಶದ ಅತ್ಯಂತ ಭಾರದ ರಾಕೆಟ್‌ ‘ಎಲ್‌ವಿಎಂ3’ನ ಹೊರುವ ಸಾಮರ್ಥ್ಯವನ್ನು ಇನ್ನೂ 450 ಕೆ.ಜಿ.ಯಷ್ಟುಹೆಚ್ಚಿಸಲಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ) ಮಾಹಿತಿ ನೀಡಿದೆ.

ಚಿತ್ರದುರ್ಗದಲ್ಲಿ ಸ್ಪೇಸ್‌ಶಿಪ್‌ ಇಳಿಸಲು ಇಸ್ರೋ ಸಿದ್ಧತೆ!

ಎಲ್‌ವಿಎಂ 3 ರಾಕೆಟ್‌, ಕೆಳಹಂತದ ಭೂ ಕಕ್ಷೆಗೆ 8000 ಕೆಜಿ ತೂಕದ ಉಪಗ್ರಹ ಹೊತ್ತೊಯ್ಯಬಲ್ಲ ಮತ್ತು ಭೂಸ್ಥಿರ ಕಕ್ಷೆಗೆ 4000 ಕೆಜಿ ತೂಕದ ಉಪಗ್ರಹಗಳನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯ ಹೊಂದಿದೆ. ಇದೀಗ ಎಂಜಿನ್‌ನ ಸಾಮರ್ಥ್ಯ ಹೆಚ್ಚಿರುವ ಕಾರಣ ಇವುಗಳ ಹೊರುವ ಸಾಮರ್ಥ್ಯ ಕ್ರಮವಾಗಿ 8450 ಮತ್ತು 4450 ಕೆ.ಜಿ.ಗೆ ಹೆಚ್ಚಳವಾಗಿದೆ.

ಮರುಬಳಸಬಳಸುವ ಲಾಂಚ್ ವೆಹಿಕಲ್ ರನ್‌ವೇ ಲ್ಯಾಂಡಿಂಗ್‌ಗೆ ಇಸ್ರೋ ಸಜ್ಜು

ಎಲ್‌ವಿಎಂ3ಗೆಂದೇ ದೇಶೀಯವಾಗಿ ಅಭಿವೃದ್ಧಿಪಡಿಸಲಾದ ಸಿಇ20 ಕ್ರಯೋಜೆನಿಕ್‌ ಎಂಜಿನ್‌ ಅನ್ನು ನ.9ರಂದು ಹಾಟ್‌ಟೆಸ್ಟ್‌ಗೆ ಒಳಪಡಿಸುವ ಮೂಲಕ 21.8 ಟನ್‌ಗಳಷ್ಟುಹೊರುವ ಸಾಮರ್ಥ್ಯವನ್ನು ಯಶಸ್ವಿಯಾಗಿ ಪ್ರಯೋಗಿಸಲಾಗಿದೆ. ಇದು ಎಂಜಿನ್‌ಗೆ ಹೆಚ್ಚುವರಿಯಾಗಿ 450 ಕೆ.ಜಿ. ತೂಕ ಹೊರಬಲ್ಲದು ಎಂಬುದನ್ನು ಸಾಬೀತುಪಡಿಸಿದೆ. ಹಿಂದಿನ ಎಂಜಿನ್‌ಗೆ ಹೋಲಿಸಿದರೆ ಈ ಹೊಸ ಎಂಜಿನ್‌ನಲ್ಲಿ ಥ್ರಸ್ಟ್‌ ಕಂಟ್ರೋಲ್‌ ವಾಲ್‌್ವ ಬಳಸಿದ್ದು ಅದರ ಸಾಮರ್ಥ್ಯ ಹೆಚ್ಚಳಕ್ಕೆ ನೆರವಾಗಿದೆ. ಪರೀಕ್ಷೆ ವೇಳೆ ಎಂಜಿನ್‌ ಮತ್ತು ಅದರ ಎಲ್ಲಾ ಸಾಧನೆಗಳು ಸಾಮಾನ್ಯವಾಗಿದ್ದು, ನಿಗದಿತ ಮಾನದಂಡಗಳನ್ನು ಪೂರೈಸಿದವು ಎಂದು ಇಸ್ರೋ ಹೇಳಿದೆ.

Follow Us:
Download App:
  • android
  • ios