Asianet Suvarna News Asianet Suvarna News

ಮದ್ಯಪ್ರಿಯರಿಗೆ ಶಾಕಿಂಗ್ ನ್ಯೂಸ್: ಬಿಯರ್ ದರ ಶೇ.10 ರಷ್ಟು ಹೆಚ್ಚಳಕ್ಕೆ ಮುಂದಾದ ಸರ್ಕಾರ!

ರಾಜ್ಯ ಸರ್ಕಾರ ಮದ್ಯ ಪ್ರಿಯರಿಗೆ ಶಾಕಿಂಗ್‌ ನ್ಯೂಸ್‌ ಒಂದನ್ನು ನೀಡಿದ್ದು, ಬಜೆಟ್‌ಗೂ ಮುನ್ನವೇ ಬಿಯರ್ ದರವನ್ನು ಶೇ.10ರಷ್ಟು ಹೆಚ್ಚಿಸಲು ಮುಂದಾಗಿದೆ.

10 percent increase in beer price just before the Karnataka budget at bengaluru rav
Author
First Published Jan 23, 2024, 10:27 PM IST

ಬೆಂಗಳೂರು (ಜ.23): ರಾಜ್ಯ ಸರ್ಕಾರ ಮದ್ಯ ಪ್ರಿಯರಿಗೆ ಶಾಕಿಂಗ್‌ ನ್ಯೂಸ್‌ ಒಂದನ್ನು ನೀಡಿದ್ದು, ಬಜೆಟ್‌ಗೂ ಮುನ್ನವೇ ಬಿಯರ್ ದರವನ್ನು ಶೇ.10ರಷ್ಟು ಹೆಚ್ಚಿಸಲು ಮುಂದಾಗಿದೆ.

ಅಬಕಾರಿ ಇಲಾಖೆಯ ಮಾಹಿತಿ ಪ್ರಕಾರ, ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ತೆರಿಗೆ(ಎಇಡಿ)ಯನ್ನು ಶೇಕಡ 10 ರಷ್ಟು ಹೆಚ್ಚಿಸ ಸರ್ಕಾರ ಮುಂದಾಗಿದೆ. 650 ಎಂಎಲ್ ಬಿಯರ್ ಬಾಟಲಿಗೆ 8 ರಿಂದ 10 ರೂಪಾಯಿ ವರೆಗೆ ಹೆಚ್ಚಳವಾಗಲಿದೆ. ಬಿಯರ್‌ ಮೇಲಿನ ಅಬಕಾರಿ ತೆರಿಗೆಯನ್ನು ಹೆಚ್ಚಿಸಿದರೆ ಗ್ರಾಹಕರ ಜೇಬಿಗೆ ಹೊರೆ ಬೀಳಲಿದೆ.

ರಾಮ ಮಂದಿರ ಉದ್ಘಾಟನೆ ದಿನ ಮದ್ಯ, ಮಾಂಸ ಮಾರಾಟ ನಿಷೇಧಿಸಿ; ಶ್ರೀರಾಮ ಸೇನೆ ವಿಶೇಷ ಅಭಿಯಾನ

ಈ ಸಂಬಂಧ ರಾಜ್ಯ ಸರ್ಕಾರ ಜನವರಿ 20, 2024 ರಂದು ಅಧಿಸೂಚನೆ ಹೊರಡಿಸಿದ್ದು, ಹೆಚ್ಚುವರಿ ಅಬಕಾರಿ ತೆರಿಗೆ ಏರಿಕೆಗೆ ಅವಕಾಶ ಕಲ್ಪಿಸುವ ಕರಡು ನಿಯಮಗಳಿಗೆ ಆಕ್ಷೇಪಣೆ ಸಲ್ಲಿಸಲು ಶನಿವಾರದಿಂದ ಏಳು ದಿನಗಳ ಕಾಲಾವಕಾಶ ನೀಡಲಾಗಿದೆ. ಆಸಕ್ತರು ಹಣಕಾಸು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರಿಗೆ ಮನವಿ ಸಲ್ಲಿಸಲು ಅವಕಾಶವಿದೆ.

ರಾಜ್ಯ ಸರ್ಕಾರ ಜನವರಿ ಕೊನೆಯ ವಾರ ಅಥವಾ ಫೆಬ್ರುವರಿ ಮೊದಲ ವಾರ ಹೊಸ ನಿಯಮಗಳನ್ನು ಜಾರಿಗೊಳಿಸುವ ಸಾಧ್ಯತೆ ಇದೆ.ಕಾಂಗ್ರೆಸ್ ಸರ್ಕಾರ ರಚನೆಯಾದ ನಂತರ ಐದು ಗ್ಯಾರಂಟಿ ಯೋಜನೆಗಳಿಗೆ 50,000 ಕೋಟಿ ರೂಪಾಯಿ ಅನ್ನು ಬಜೆಟ್ ನಲ್ಲಿ ಮೀಸಲಿಟ್ಟಿರುವುದರಿಂದ ಈ ಕ್ರಮವನ್ನು ನಿರೀಕ್ಷಿಸಲಾಗಿತ್ತು ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ.

ಮದ್ಯಪಾನ ಜೀವನ, ಜೀವವನ್ನು ಹಾಳು ಮಾಡುತ್ತದೆ : ರಾಜಣ್ಣ ಕೊರವಿ

ಬಿಯರ್ ದರದಲ್ಲಿ ಸಂಭವನೀಯ ಹೆಚ್ಚಳದ ಬಗ್ಗೆ ಪ್ರತಿಕ್ರಿಯಿಸಿದ ಅಬಕಾರಿ ಸಚಿವ ಆರ್‌ಬಿ ತಿಮ್ಮಾಪುರ ಅವರು,"ನಾನು ಈ ಬಗ್ಗೆ ತಕ್ಷಣ ಪ್ರತಿಕ್ರಿಯಿಸಲು ಸಾಧ್ಯವಿಲ್ಲ. ಇದು (ಬಿಯರ್ ದರವನ್ನು ಹೆಚ್ಚಿಸುವ ನಿರ್ಧಾರದ ಬಗ್ಗೆ) ಚರ್ಚೆಯಲ್ಲಿದೆ. ಬಜೆಟ್ ಇರುವುದರಿಂದ, ನಾನು ಏನನ್ನೂ ಹೇಳಲಾರೆ ಎಂದಿದ್ದಾರೆ.

Follow Us:
Download App:
  • android
  • ios