ಗುವಾಹಟಿ[ಜ.27]: ಸರ್ಕಾರಿ ನೌಕರಿ ಗಿಟ್ಟಿಸಬೇಕಾದರೆ ಹತ್ತನೇ ತರಗತಿವರೆಗೆ ಅಸ್ಸಾಮಿಯನ್ನು ಭಾಷೆಯಾಗಿ ಕಲಿತಿರಬೇಕು ಎನ್ನುವ ಕಾನೂನು ಜಾರಿಗೆ ತರಲು ಅಸ್ಸಾಂ ಸರ್ಕಾರ ಮುಂದಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಅಸ್ಸಾಂ ಸಚಿವ ಹಿಮವಂತ ಬಿಸ್ವಾ ಶರ್ಮಾ, ಶಾಲೆಗಳಲ್ಲಿ ಅಸ್ಸಾಮಿ ಭಾಷೆ ಕಡ್ಡಾಯಗೊಳಿಸಲಾಗುವುದು. ಅಲ್ಲದೇ ಹತ್ತನೇ ತರಗತಿವರೆಗೆ ಅಸ್ಸಾಮಿಯನ್ನು ಒಂದು ಭಾಷೆಯಾಗಿ ಕಲಿತವರಿಗೆ ಮಾತ್ರ ಸರ್ಕಾರಿ ಉದ್ಯೋಗ ಪಡೆಯಲು ಅವಕಾಶ ಕಲ್ಪಿಸುವ ಮಸೂದೆ ಮುಂದಿನ ಬಜೆಟ್‌ ಅಧಿವೇಶನದಲ್ಲಿ ಮಂಡಿಸಲಾಗುವುದು. ಈಗಾಗಲೇ ಸಚಿವ ಸಂಪುಟ ಇದಕ್ಕೆ ಒಪ್ಪಿಗೆ ನೀಡಿದೆ ಎಂದು ಅವರು ಹೇಳಿದ್ದಾರೆ.

ಈ ಮಸೂದೆ ಬ್ಯಾರಕ್‌ ವ್ಯಾಲಿ ಜಿಲ್ಲೆಗಳು ಹಾಗೂ ಬೋಡೋಲ್ಯಾಂಡ್‌ ಪ್ರಾದೇಶಿಕ ಸ್ವಾಯತ್ತ ಜಿಲ್ಲೆಗಳಿಗೆ ಅನ್ವಯವಾಗುವುದಿಲ್ಲ. ಆ ಜಿಲ್ಲೆಗಳಲ್ಲಿ ಬೆಂಗಾಳಿ ಹಾಗೂ ಬೋಡೋ ಭಾಷೆ ಕಡ್ಡಾಯಗೊಳಿಸಲಾಗುವುದು ಎಂದು ಹೇಳಿದ್ದಾರೆ.