KAS ನೇಮಕಾತಿ: ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಗುಡ್‌ ನ್ಯೂಸ್...!

 ದಿನಾಂಕ 24-08-2020ರಂದು ರಾಜ್ಯದ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ KAS ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಗುಡ್‌ ನ್ಯೂಸ್ ಇಲ್ಲಿದೆ.

KSRTC Exta Buses to Who will be Write KAS Exam On August 24

ಬೆಂಗಳೂರು, (ಆ.21): ದಿನಾಂಕ 24-08-2020ರಂದು ರಾಜ್ಯದ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ಕರ್ನಾಟಕ ಲೋಕಸೇವಾ ಆಯೋಗದಿಂದ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಿಗೆ ಪೂರ್ವಭಾವಿ ಪರೀಕ್ಷೆ ನಡೆಯಲಿದೆ. 

ಈ ಪರೀಕ್ಷೆಗೆ ಪರೀಕ್ಷಾ ಕೇಂದ್ರಗಳಿಗೆ ಹಾಜರಾಗಲು ಯಾವುದೇ ತೊಂದರೆ ಆಗದಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಅಭ್ಯರ್ಥಿಗಳ ಅನುಕೂಲಕ್ಕಾಗಿ ಹೆಚ್ಚುವರಿ ಬಸ್ ಸೌಲಭ್ಯ ಒದಗಿಸಿದೆ. ಈ ಕುರಿತಂತೆ ಕೆಎಸ್‌ಆರ್‌ಟಿಸಿ ಇಂದು (ಶುಕ್ರವಾರ) ಪ್ರಕಟಣೆ ಹೊರಡಿಸಿದೆ.

ನಿಗದಿಯಂತೆ KAS ಪೂರ್ವಭಾವಿ ಪರೀಕ್ಷೆ: ಕೆಪಿಎಸ್‌ಸಿ ಸ್ಪಷ್ಟನೆ...!

 ಕರ್ನಾಟಕ ಲೋಕಸೇವಾ ಆಯೋಗವು ದಿನಾಂಕ 24-08-2020ರಂದು ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗಳ ಪೂರ್ವಭಾವಿ ಪರೀಕ್ಷೆಗಳನ್ನು ನಡೆಸುತ್ತಿದ್ದು, ಸದರಿ ಪರೀಕ್ಷೆಗೆ ಹಾಜರಾಗಲು ಅಭ್ಯರ್ಥಿಗಳ ಅನುಕೂಲಕ್ಕಾಗಿ ನಿಗಮದಿಂದ ಪರೀಕ್ಷೆಯ ಹಿಂದಿನ ದಿನ ಅಂದರೆ, ದಿನಾಂಕ 23-08-2020 ಮತ್ತು ಪರೀಕ್ಷೆ ದಿನ ದಿನಾಂಕ 24-08-2020ರಂದು ಪ್ರಮುಖ ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಿಂದ ಪರೀಕ್ಷೆ ನಡೆಯುವ ಕೇಂದ್ರ ಸ್ಥಾನಗಳಿಗೆ ಕೆಳಕಂಡಂತೆ ಅವಶ್ಯಕತೆಗೆ ಅನುಗುಣವಾಗಿ ಹೆಚ್ಚುವರಿ ಸಾರಿ ಸೌಲಭ್ಯವನ್ನು ಕಲ್ಪಿಸಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಸಂಸ್ಥೆ ತಿಳಿಸಿದೆ.

ಬೆಂಗಳೂರು - ಬೆಂಗಳೂರು, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ ಮತ್ತು ತುಮಕೂರು
ದಾವಣಗೆರೆ - ದಾವಣಗೆರೆ ಮತ್ತು ಚಿತ್ರದುರ್ಗ
ಮಂಗಳೂರು - ಮಂಗಳೂರು ಮತ್ತು ಉಡುಪಿ
ಮೈಸೂರು - ಚಾಮರಾಜನಗರ, ಹಾಸನ, ಕೊಡಗು, ಮಂಡ್ಯ ಮತ್ತು ಮೈಸೂರು
ಶಿವಮೊಗ್ಗ - ಚಿಕ್ಕಮಗಳೂರು ಮತ್ತು ಶಿವಮೊಗ್ಗ

ಈ ಮೇಲಿನ ಮುಖ್ಯ ಪರೀಕ್ಷಾ ಕೇಂದ್ರಗಳಿಂದ ಹೆಚ್ಚುವರಿಯಾಗಿ ಬಸ್ ಸೌಲಭ್ಯವನ್ನು ಜಿಲ್ಲೆಗಳ ಕೇಂದ್ರದಿಂದ ಮತ್ತು ಪ್ರಮುಖ ತಾಲೂಕುಗಳಿಂದ ಕಲ್ಪಿಸಲಾಗಿದೆ. ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಸೌಲಭ್ಯ ಬಳಿಸಿಕೊಳ್ಳುವಂತೆ ಸಂಸ್ಥೆ ಮನವಿ ಮಾಡಿದೆ.

Latest Videos
Follow Us:
Download App:
  • android
  • ios