Asianet Suvarna News Asianet Suvarna News

ಉದ್ಯೋಗದ ನಿರೀಕ್ಷೆಯಲ್ಲಿದ್ದ ಪದವೀಧರರಿಗೆ ಸಿಹಿ ಸುದ್ದಿ

ಪೊಲೀಸ್ ಇಲಾಖೆಯಲ್ಲಿ ಖಾಲಿ ಸಿವಿಲ್ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

ksp recruitment 2020 Apply for 556 sub inspector posts
Author
Bengaluru, First Published May 16, 2020, 8:08 PM IST

ಬೆಂಗಳೂರು, (ಮೇ.16): ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್ ಸಬ್ ಇನ್ಸ್​ಪೆಕ್ಟರ್ (ಸಿವಿಲ್) (ಪುರುಷ ಮತ್ತು ಮಹಿಳಾ) ಹಾಗೂ ಸೇವೆಯಲ್ಲಿರುವವರು ಒಳಗೊಂಡಂತೆ ಹುದ್ದೆಗಳ ನೇರ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಆನ್​ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

 ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ 125 ಹುದ್ದೆಗಳು, ಕರ್ನಾಟಕಕ್ಕೆ 431 ಹುದ್ದೆಗಳ ಮೀಸಲಾಗಿದ್ದು, ಒಟ್ಟು 556 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಲಾಕ್‌ಡೌನ್‌ ಮಧ್ಯೆ ನಿರುದ್ಯೋಗಿಗಳಿಗೆ ಗುಡ್‌ನ್ಯೂಸ್ ಕೊಟ್ಟ ಸರ್ಕಾರ..!

ಇದೇ ಜೂನ್ 1 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದ್ದು ಅರ್ಜಿಸಲ್ಲಿಸಲು ಜೂನ್ 31 ಕೊನೆಯ ದಿನವಾಗಿದೆ. ಸೇವಾ ನಿರತ ಪೊಲೀಸರು ಹಾಗೂ ಹೊಸ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಬಹುದು.

ವಯೋಮಿತಿ: 2020ರ ಜೂನ್ 30 ಕ್ಕೆ ಅನ್ವಯಿಸುವಂತೆ ಕನಿಷ್ಠ 21 ವರ್ಷ ವಯೋಮಿತಿ ನಿಗದಿಪಡಿಸಲಾಗಿದ್ದು, ಗರಿಷ್ಠ ವಯೋಮಿತಿ ಎಸ್​ಸಿ, ಎಸ್​ಟಿ, ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 30 ವರ್ಷ ಹಾಗೂ ಇತರ ಅಭ್ಯರ್ಥಿಗಳಿಗೆ 28 ವರ್ಷ ಹಾಗೂ ಸೇವಾ ನಿರತ ಎಸ್​ಸಿ, ಎಸ್​ಟಿ, ಒಬಿಸಿ ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ ಹಾಗೂ ಇತರ ಅಭ್ಯರ್ಥಿಗಳಿಗೆ 35 ವರ್ಷ ನಿಗದಿಪಡಿಸಲಾಗಿದೆ.

ಕರ್ನಾಟಕ ಪೊಲೀಸ್ ಇಲಾಖೆಯ ಖಾಲಿ ಹುದ್ದೆಗೆ ಅರ್ಜಿ ಆಹ್ವಾನ; ಆಸಕ್ತರಿಗೆ ಸುವರ್ಣವಕಾಶ! 

ನೇಮಕಾತಿ ಪ್ರಕ್ರಿಯೆ: ಸಹಿಷ್ಣುತೆ ಪರೀಕ್ಷೆ, ದೇಹದಾರ್ಢ್ಯತೆ ಪರೀಕ್ಷೆ, ಲಿಖಿತ ಪರೀಕ್ಷೆ, ವೈದ್ಯಕೀಯ ಪರೀಕ್ಷೆ ಇರುತ್ತದೆ. 

ವೇತನಶ್ರೇಣಿ: 37900 ರೂ. ದಿಂದ 70850 ರೂ.ತಿಂಗಳಿಗೆ

ಜೂನ್ 1 ರಿಂದ ಜೂನ್ 30ರ ಸಂಜೆ 6 ಗಂಟೆ ವರೆಗೆ www.ksp.gov.in ನಲ್ಲಿ ಆನ್​ಲೈನ್ ಅರ್ಜಿ ಸಲ್ಲಿಸಲು ಅವಕಾಶವಿದೆ. ಜುಲೈ 2ರ ವರೆಗೆ ಶುಲ್ಕ ಪಾವತಿಸಬಹುದು.

ಈ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

Follow Us:
Download App:
  • android
  • ios