Asianet Suvarna News Asianet Suvarna News

ಕೆಪಿಎಸ್‌ಸಿ ಪೂರ್ವಭಾವಿ ಫಲಿತಾಂಶ ಪ್ರಕಟ: 2120 ಮಂದಿ ಆಯ್ಕೆ

ಗ್ರೂಪ್‌ ಎ ಮತ್ತು ಬಿ ವೃಂದ ಹುದ್ದೆಗಳ ಭರ್ತಿಗೆ ನಡೆದಿದ್ದ ಪೂರ್ವಭಾವಿ ಪರೀಕ್ಷೆಯ ಫಲಿತಾಂಶ ಪ್ರಕಟ| ಒಟ್ಟು 106 ಹುದ್ದೆಗಳಿಗೆ 1:20ರಂತೆ ಒಟ್ಟು 2,120 ಮಂದಿ ಅಭ್ಯರ್ಥಿಗಳು ಮುಖ್ಯ ಪರೀಕ್ಷೆಗೆ ಆಯ್ಕೆ| 

KPSC Preliminary Results Announced grg
Author
Bengaluru, First Published Oct 24, 2020, 9:11 AM IST

ಬೆಂಗಳೂರು(ಅ.24): 2017-18ನೇ ಸಾಲಿನ ಗೆಜೆಟೆಡ್‌ ಪ್ರೊಬೆಷನರಿ (ಗ್ರೂಪ್‌ ಎ ಮತ್ತು ಬಿ ವೃಂದ) ಹುದ್ದೆಗಳ ಭರ್ತಿಗೆ ನಡೆದಿದ್ದ ಪೂರ್ವಭಾವಿ ಪರೀಕ್ಷೆಯ ಫಲಿತಾಂಶವನ್ನು ಕರ್ನಾಟಕ ಲೋಕಸೇವಾ ಆಯೋಗದ ಶುಕ್ರವಾರ ಪ್ರಕಟಿಸಿದೆ.

ಒಟ್ಟು 106 ಹುದ್ದೆಗಳಿಗೆ 1:20ರಂತೆ ಫಲಿತಾಂಶ ಪ್ರಕಟಿಸಿದ್ದು, ಒಟ್ಟು 2,120 ಮಂದಿ ಅಭ್ಯರ್ಥಿಗಳು ಮುಖ್ಯ ಪರೀಕ್ಷೆಗೆ ಆಯ್ಕೆಯಾಗಿದ್ದಾರೆ ಎಂದು ಕೆಪಿಎಸ್‌ಸಿ ಕಾರ್ಯದರ್ಶಿ ಜಿ.ಸತ್ಯವತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಕೆಪಿಎಸ್‌ಸಿ ವೆಬ್‌ಸೈಟ್‌ http://www.kpsc.kar.nic.in ಭೇಟಿ ನೀಡಬಹುದು.

ಅರಣ್ಯ ಇಲಾಖೆಯಲ್ಲಿ ಖಾಲಿ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಹೈದರಾಬಾದ್‌ ಕರ್ನಾಟದ 12 ಹುದ್ದೆಗಳು ಸೇರಿದಂತೆ 106 ಹುದ್ದೆಗಳ ಭರ್ತಿಗೆ ಕಳೆದ ಆಗಸ್ಟ್‌ 24 ರಂದು ಪೂರ್ವಭಾವಿ ಪರೀಕ್ಷೆ ನಡೆದಿತ್ತು.

Follow Us:
Download App:
  • android
  • ios