ಕೆಪಿಎಸ್‌ಸಿ ಪರೀಕ್ಷೆ: ಈ ಅಭ್ಯರ್ಥಿಗಳಿಗೆ ಹೆಚ್ಚುವರಿ ಸಮಯವಕಾಶ...!
ಪರೀಕ್ಷೆ ಬರೆಯಲಿರುವ ಅಂಧ ಅಭ್ಯರ್ಥಿಗಳಿಗೆ ಕರ್ನಾಟಕ ಲೋಕಸೇವಾ ಆಯೋಗ ಮಹತ್ವದ ಮಾಹಿತಿಯೊಂದನ್ನು ನೀಡಿದೆ.
ಬೆಂಗಳೂರು, (ಆ.21): ಗೆಜೆಟೆಡ್ ಪ್ರೊಬೆಷನರ್ 106 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಆಗಸ್ಟ್ 24 ರಂದು ಪೂರ್ವಭಾವಿ ಪರೀಕ್ಷೆ ನಡೆಯಲಿದೆ.
ಹೈಕೋರ್ಟ್ ನ್ಯಾಯಾಲಯದ ಆದೇಶದ ಮೇರೆಗೆ ಈ ಪರೀಕ್ಷೆಗೆ ಅಂಧ / ದೃಷ್ಟಿಮಾಂದ್ಯ ಮೀಸಲಾತಿ ಕೋರಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಪ್ರತಿ ಒಂದು ಗಂಟೆಗೆ 20 ನಿಮಿಷ ಹೆಚ್ಚುವರಿ ಸಮಯವನ್ನು ನೀಡಲಾಗುತ್ತಿದೆ ಕೆಪಿಎಸ್‌ಸಿ ಪ್ರಕಟಣೆಯಲ್ಲಿ ತಿಳಿಸಿದೆ.
ನಿಗದಿಯಂತೆ KAS ಪೂರ್ವಭಾವಿ ಪರೀಕ್ಷೆ: ಕೆಪಿಎಸ್‌ಸಿ ಸ್ಪಷ್ಟನೆ...!
ಅಂಧ ಅಭ್ಯರ್ಥಿಗಳು ಲಿಪಿಕಾರರನ್ನು ತಾವೇ ಕರೆದುಕೊಂಡು ಬರಬೇಕೆಂದು ತಿಳಿಸಲಾಗಿದೆ. ಒಂದು ವೇಳೆ ಯಾವುದೇ ಅಭ್ಯರ್ಥಿ ಲಿಪಿಕಾರರನ್ನು ಕರೆದುಕೊಂಡು ಬರಲು ಸಾಧ್ಯವಾಗದಿದ್ದಲ್ಲಿ ಅಂತವರು ಆಯೋಗಕ್ಕೆ ಎಸ್ಎಂಎಸ್ ಮೂಲಕ ತಿಳಿಸಿದಲ್ಲಿ ಲಿಪಿಕಾರರನ್ನು ಒದಗಿಸಲು ಸೂಕ್ತ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಕೆಪಿಎಸ್‌ಸಿ ಹೇಳಿದೆ.