KEA Assistant Professor Exam Schedule 2022: ಸ್ಪರ್ಧಾತ್ಮಕ ಪರೀಕ್ಷೆಗೆ ಪ್ರಸ್ತಾವಿತ ವೇಳಾಪಟ್ಟಿ ಬಿಡುಗಡೆ
ಕರ್ನಾಟಕದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ವಿವಿಧ ವಿಷಯಗಳ 1242 ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಸಂಬಂಧಿಸಿದಂತೆ, ಸ್ಪರ್ಧಾತ್ಮಕ ಪರೀಕ್ಷೆಯ ವಿಷಯಗಳನ್ನು ವಿಂಗಡಿಸಿ ಪ್ರಸ್ತಾವಿತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
ಬೆಂಗಳೂರು(ಫೆ.4): ಕರ್ನಾಟಕದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ವಿವಿಧ ವಿಷಯಗಳ 1242 ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಸಂಬಂಧಿಸಿದಂತೆ, ಸ್ಪರ್ಧಾತ್ಮಕ ಪರೀಕ್ಷೆಯ ವಿಷಯಗಳನ್ನು ವಿಂಗಡಿಸಿದ ಪ್ರಸ್ತಾವಿತ ವೇಳಾಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು ಕೆಇಎ ( Karnataka Examinations Authority - KEA) ವೆಬ್‌ಸೈಟ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಬಹುದು.
ಪ್ರಸ್ತಾವಿತ ವೇಳಾಪಟ್ಟಿಯಲ್ಲಿ ಯಾವುದೇ ಅಭ್ಯರ್ಥಿಗೆ ಒಂದೇ ಅವಧಿಯಲ್ಲಿ ಹೆಚ್ಚು ಐಚ್ಛಿಕ ವಿಷಯಗಳು ವಿಂಗಡಣೆ ಆಗಿದ್ದಲ್ಲಿ, ಅಂತಹ ಅಭ್ಯರ್ಥಿಗಳು ದಿನಾಂಕ ಫೆಬ್ರವರಿ 10ರಂದು ಸಂಜೆ 05-30 ಗಂಟೆಯೊಳಗಾಗಿ ಆಕ್ಷೇಪಣೆಗಳನ್ನು 'EXAM SUBJECT - OBJECTIONS' ಎಂದು ಇ-ಮೇಲ್ ಸಬ್ಜೆಕ್ಟ್‌ನಲ್ಲಿ ಬರೆದು recruitment2021kea@gmail.com ಗೆ ಈ ಮೇಲ್ ಕಳುಹಿಸಲು ಸೂಚನೆ ನೀಡಲಾಗಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ( KEA) ಪ್ರಸ್ತುತ ಸ್ಪರ್ಧಾತ್ಮಕ ಪರೀಕ್ಷೆ ಯಾವಾಗಿನಿಂದ ಆರಂಭವಾಗುತ್ತದೆ ಎಂದು ತಿಳಿಸಿಲ್ಲ. ಆದರೆ ಪರೀಕ್ಷೆ ಆರಂಭದ ಮೊದಲನೇ ದಿನ ಮತ್ತು ಎರಡನೇ ದಿನ ಕಡ್ಡಾಯ ಪತ್ರಿಕೆ ಕನ್ನಡ, ಇಂಗ್ಲಿಷ್, ಸಾಮಾನ್ಯ ಜ್ಞಾನ ಪತ್ರಿಕೆಗಳನ್ನು ನಡೆಸಲಾಗುತ್ತದೆ. ನಂತರ ಐಚ್ಛಿಕ ವಿಷಯಗಳನ್ನು 3 ದಿನಗಳ ಕಾಲ ನಡೆಸಲಾಗುತ್ತದೆ ಎಂದು ವಿಷಯಗಳನ್ನು ವಿಂಗಡಿಸಿ ಪ್ರಸ್ತಾವಿತ ವೇಳಾಪಟ್ಟಿ ಬಿಡುಗಡೆ ಮಾಡಿದೆ.
ಕಡ್ಡಾಯ ಪತ್ರಿಕೆಗಳ ಪೈಕಿ ಕನ್ನಡ, ಇಂಗ್ಲಿಷ್ ಗೆ 100 ಅಂಕಗಳಿಗೆ ಪರೀಕ್ಷೆ, ಸಾಮಾನ್ಯ ಜ್ಞಾನ ಪತ್ರಿಕೆಯು 50 ಅಂಕಗಳಿಗೆ ಪರೀಕ್ಷೆ ಹೊಂದಿರುತ್ತದೆ. ಪ್ರತಿ ಐಚ್ಛಿಕ ವಿಷಯಗಳಿಗೆ 250 ಅಂಕಗಳಿಗೆ ಪರೀಕ್ಷೆ ನಡೆಸಲಾಗುತ್ತದೆ.
AAAL RECRUITMENT 2022: ಕಮಾಂಡರ್ ಸೇರಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ, ನೇರ ಸಂದರ್ಶನ
ಮಾರ್ಚ್ 12ಕ್ಕೆ ನಿಗದಿಯಾಗಿದ್ದ ನೀಟ್–ಪಿಜಿ ಪರೀಕ್ಷೆ ಮುಂದೂಡಿದ ಆರೋಗ್ಯ ಸಚಿವಾಲಯ: ಕೇಂದ್ರ ಆರೋಗ್ಯ ಸಚಿವಾಲಯ (Union Health Ministry) ನೀಟ್ ಪಿಜಿ (NEET PG) ಪರೀಕ್ಷೆಯನ್ನು ಮುಂದೂಡಿದೆ. ಮಾರ್ಚ್ 12ಕ್ಕೆ ನಿಗದಿಯಾಗಿದ್ದ ನೀಟ್ ಪಿಜಿ ಪರೀಕ್ಷೆಯನ್ನು 6 ರಿಂದ 8 ವಾರಗಳ ಕಾಲ ಮುಂದೂಡಿದೆ. 2022ರ ನೀಟ್ ಪರೀಕ್ಷೆಯ ( National Eligibility Entrance Test) ದಿನಾಂಕವನ್ನು ಮುಂದೂಡುವಂತೆ ಕೋರಿ ಎಂಬಿಬಿಎಸ್ ವಿದ್ಯಾರ್ಥಿಗಳು ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದು, ಇದರ ಬೆನ್ನಲ್ಲೇ ಸರ್ಕಾರ ಪರೀಕ್ಷೆಯನ್ನು ಮುಂದೂಡಿದೆ. ಫೆ. 4ರಂದು ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ಸೂರ್ಯಕಾಂತ್ ಅವರ ಪೀಠ ಅರ್ಜಿಯ ವಿಚಾರಣೆ ನಡೆಸಲಿದೆ.
ವಾಸ್ತವದಲ್ಲಿ, ಈ ಪರೀಕ್ಷೆಯನ್ನು ಮುಂದೂಡಬೇಕೆಂದು ವಿದ್ಯಾರ್ಥಿಗಳು ಬಹಳ ದಿನಗಳಿಂದ ಒತ್ತಾಯಿಸುತ್ತಿದ್ದರು. ಕಳೆದ ವರ್ಷ ಅಂದರೆ 2021ರ NEET ಪಿಜಿ ಕೌನ್ಸೆಲಿಂಗ್‌ನ ದಿನಾಂಕಗಳು ಮತ್ತು ಈ ವರ್ಷದ ಪರೀಕ್ಷೆಯ ದಿನಾಂಕಗಳು ಪರಸ್ಪರ ಘರ್ಷಣೆಯಾಗುತ್ತಿವೆ ಹೀಗಾಗಿ ಪರೀಕ್ಷೆಗಳನ್ನು ಮುಂದೂಡಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದರು.
ವಿದ್ಯಾರ್ಥಿಗಳ ಬೇಡಿಕೆಗಳನ್ನು ನ್ಯಾಯಯುತವೆಂದು ಪರಿಗಣಿಸಿ ಆರೋಗ್ಯ ಸಚಿವಾಲಯ ಇದೀಗ ಪರೀಕ್ಷೆಯನ್ನು 6-8 ವಾರಗಳ ಕಾಲ ಮುಂದೂಡಿದೆ. ಆದರೆ, ಪರೀಕ್ಷೆಯ ಮುಂದಿನ ದಿನಾಂಕವನ್ನು ಇನ್ನೂ ಪ್ರಕಟಿಸಿಲ್ಲ. ಈ ಬಗ್ಗೆ ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಚಿವಾಲಯ ತಿಳಿಸಿದೆ.
Free Online Coaching: ಕೇವಲ 1. ರು.ಗೆ ಲಾಡ್‌ರಿಂದ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ..!
ಕೋವಿಡ್ ಸೂಕ್ತ ನಡವಳಿಕೆ ಕಾಪಾಡುವುದು ಸೇರಿದಂತೆ ಎಲ್ಲಾ ಶಿಷ್ಟಾಚಾರಗಳನ್ನು ಅನುಸರಿಸಿ ಮತ್ತು ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು, ಪರೀಕ್ಷೆ ಆಯೋಜಿಸಲಾಗುವುದು. ಜತೆಗೆ, ಅಭ್ಯರ್ಥಿಗಳು ಮತ್ತು ಪರೀಕ್ಷಾ ಸಿಬ್ಬಂದಿಗೆ ಹೆಚ್ಚುವರಿ ಸಂರಕ್ಷಣಾ ಕ್ರಮಗಳನ್ನು ಕೈಗೊಂಡು ಸುರಕ್ಷಿತವಾಗಿ ಪರೀಕ್ಷೆಗಳನ್ನು ನಡೆಸಲು ಉದ್ದೇಶಿಸಲಾಗಿದೆ ಎಂದು ಈ ಹಿಂದೆ ಕೇಂದ್ರ ಸರಕಾರ ಹೇಳಿತ್ತು.