Asianet Suvarna News Asianet Suvarna News

ಕೆಪಿಎಸ್‌ಸಿ ನೇಮಕಾತಿ ಪರೀಕ್ಷೆ: ಮಾರ್ಗಸೂಚಿ ಪ್ರಕಟ

ವಿವಿಧ ಹುದ್ದೆಗಳ ನೇಮಕಾತಿಗೆ ಕೆಪಿಎಸ್‍ಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟಿಸಿದ್ದು, ಇದಕ್ಕೆ ಆರೋಗ್ಯ ಇಲಾಖೆ ಮಾರ್ಗಸೂಚಿ ಪ್ರಕಟಿಸಿದೆ,

Health Dept guidelines For KPSC recruitment Exams
Author
Bengaluru, First Published Aug 16, 2020, 6:25 PM IST

ಬೆಂಗಳೂರು., (ಆ.16): ಪರೀಕ್ಷಾ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ಕರ್ನಾಟಕ ಲೋಕಸೇವಾ ಆಯೋಗ ಸ್ಪಷ್ಟನೆ ನೀಡಿದ್ದು, ಆರೋಗ್ಯ ಇಲಾಖೆ ಕೆಪಿಎಸ್‍ಸಿ ಪರೀಕ್ಷೆ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

ಕೆಪಿಎಸ್‌ಸಿಯ ವಿವಿಧ ಹುದ್ದೆಗಳ ನೇಮಕಾತಿ ಪರೀಕ್ಷೆ ದಿನಾಂಕ ಪ್ರಕಟ

ಆರೋಗ್ಯ ಇಲಾಖೆಯಿಂದ ಬಿಡುಗಡೆಯಾದ ಈ ಮಾರ್ಗ ಸೂಚಿಗಳನ್ನ ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚಿಸಲಾಗಿದ್ದು, ಎಸ್‌ಎಸ್‌ಎಲ್‌ಸಿ. ಪಿಯುಸಿ ಪರೀಕ್ಷಾ ಮಾದರಿಯನ್ನ ಇಲ್ಲಿಯೂ ಮುಂದುವರೆಸಲಾಗಿದೆ.

1. ಪ್ರತಿ ವಿದ್ಯಾರ್ಥಿಗಳು ಎರಡು ಗಂಟೆ ಮುಂಚೆ ಕೊಠಡಿಯಲ್ಲಿ ಆಸೀನರಾಗಬೇಕು
2. ಪ್ರತಿ ಅಭ್ಯರ್ಥಿಗಳಿಗೆ ಥರ್ಮಲ್ ಸ್ಕ್ಯಾನಿಂಗ್, ಸ್ಯಾನಿಟೈಸ್, ಮಾಸ್ಕ್ ಕಡ್ಡಾಯ
3. ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು
4. ಪ್ರತಿ ಕೊಠಡಿಗೆ 24 ಅಭ್ಯರ್ಥಿಗಳು ಮಾತ್ರ ಕೂರಿಸತಕ್ಕದ್ದು
5. ಕೊಠಡಿಯಲ್ಲಿ ಅಭ್ಯರ್ಥಿಗಳ ಮಧ್ಯೆ ಸಾಮಾಜಿಕ ಅಂತರ ನಿಯಮ ಕಾಪಾಡಬೇಕು. 6. ಪರೀಕ್ಷಾ ಕೆಲಸಕ್ಕೆ ಹಾಜರಾಗುವ ಸಿಬ್ಬಂದಿಗೆ ಯಾವುದೇ ಆರೋಗ್ಯ ಸಮಸ್ಯೆ ಇರಬಾರದು
7. ಅನ್ಯ ಕಾಯಿಲೆ ಇರುವ ಅಭ್ಯರ್ಥಿಗಳಿಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ವ್ಯವಸ್ಥೆ ಮಾಡಬೇಕು
8. ಪರೀಕ್ಷೆ ಮುಗಿದ ಬಳಿಕ ಕೊಠಡಿ, ಡೆಸ್ಕ್, ಟೇಬಲ್ ಗಳನ್ನ ಸ್ಯಾನಿಟೈಸ್ ಮಾಡಬೇಕು
9. ಪರೀಕ್ಷಾ ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು
10. ಪ್ರತಿ ಕೇಂದ್ರದಲ್ಲಿ ಆರೋಗ್ಯ ಸಿಬ್ಬಂದಿ ಇರುವಂತೆ ನೋಡಿಕೊಳ್ಳಬೇಕು
11. ಪರೀಕ್ಷಾ ಕೇಂದ್ರದ ಶೌಚಾಯಲ ಶುಚಿತ್ವದಿಂದ ಇರುವಂತೆ ನೋಡಿಕೊಳ್ಳಬೇಕು
12. ಕೊರೊನಾ ಸೋಂಕು ಇರುವ ಅಭ್ಯರ್ಥಿಗಳಿಗೆ ವಿಶೇಷ ಕೊಠಡಿಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಪರೀಕ್ಷೆಯ ವ್ಯವಸ್ಥೆ ಮಾಡಬೇಕು.

Follow Us:
Download App:
  • android
  • ios