SDA ಪರೀಕ್ಷೆ ಮತ್ತೆ ಮುಂದೂಡಿದ ಕೆಪಿಎಸ್‌ಸಿ

ಮಾರ್ಚ್ 20 ಹಾಗೂ 21ರಂದು ನಡೆಯಬೇಕಿದ್ದ ಎಸ್​ಡಿಎ (ದ್ವಿತೀಯ ದರ್ಜೆ ಸಹಾಯಕರು/ಕಿರಿಯ ಸಹಾಯಕರ) ಪರೀಕ್ಷೆಯನ್ನು ಮೂಂದೂಡಲಾಗಿದೆ.

fda exams postponed by KPSC rbj

ಬೆಂಗಳೂರು, (ಮಾ.10): ಇದೇ ಮಾರ್ಚ್ 20 ಹಾಗೂ 21ರಂದು ನಡೆಯಬೇಕಿದ್ದ ಎಸ್​ಡಿಎ (ದ್ವಿತೀಯ ದರ್ಜೆ ಸಹಾಯಕರು/ಕಿರಿಯ ಸಹಾಯಕರ) ಪರೀಕ್ಷೆಯನ್ನು ಮೂಂದೂಡಿ ಕೆಪಿಎಸ್​ಸಿ ಆದೇಶ ಹೊರಡಿಸಿದೆ.

ಜ.24ರಂದು ನಡೆಯಬೇಕಿದ್ದ ಎಫ್​ಡಿಎ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಮುನ್ನಾದಿನವೇ ಸೋರಿಕೆ ಆಗಿತ್ತು. ಹಾಗಾಗಿ ಈ ಪರೀಕ್ಷೆಯನ್ನು ಮುಂದೂಡಿದ್ದ ಕೆಪಿಎಸ್​ಸಿ, ಫೆ.28ರಂದು ಪರೀಕ್ಷೆ ನಡೆಸಿತ್ತು. ಈ ಕಾರಣದಿಂದ ಮೊದಲೇ ನಿಗದಿ ಪಡಿಸಿದ್ದ ದಿನಾಂಕ(ಮಾ.20, 21)ದಲ್ಲಿ ಎಸ್​ಡಿಎ ಎಕ್ಸಾಂ ನಡೆಸಲು ಪೂರ್ವ ಸಿದ್ಧತೆ ಮಾಡಿಕೊಳ್ಳಲು ಆಯೋಗಕ್ಕೆ ಕಾಲಾವಕಶಾದ ಕೊರತೆ ಇದೆ. 

ಜಾಬ್ಸ್‌ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಈ ಹಿನ್ನೆಲೆಯಲ್ಲಿ ಎಸ್​ಡಿಎ ಎಕ್ಸಾಂ ಅನ್ನು ಮುಂದೂಡಲಾಗಿದೆ ಎಂದು ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿ ಜಿ.ಸತ್ಯವತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇನ್ನು ಹೊಸ ದಿನಾಂಕವನ್ನು ಶೀಘ್ರದಲ್ಲಿಯೇ ಪ್ರಕಟಿಸುವುದಾಗಿ ಹೇಳಿದ್ದಾರೆ. 

ದಿನಾಂಕ 14-05-2020 ರಂದು ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 2019ನೇ ಸಾಲಿನ ದ್ವಿತೀಯ ದರ್ಜೆ ಸಹಾಯಕ (ಎಸ್‌ಡಿಎ) ಹುದ್ದೆಗಳಿಗೆ ಅಧಿಸೂಚನೆ ಪ್ರಕಟಿಸಲಾಗಿತ್ತು. 

ಈ ಹುದ್ದೆಗಳ ನೇಮಕಾತಿಗೆ ದಿನಾಂಕ 06-06-2020 ರಂದು ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯನ್ನು ಮತ್ತು ದಿನಾಂಕ 07-06-2020 ರಂದು ಎರಡು ಅಧಿವೇಶನಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಲು ನಿಗದಿಪಡಿಸಲಾಗಿತ್ತು. 

ಆದರೆ ಕೊರೊನಾ ಕಾರಣ ಸದರಿ ಪರೀಕ್ಷೆ ಮುಂದೂಡಿ, ದಿನಾಂಕ 20-03-2021, 21-03-2021 ರಂದು ನಡೆಸಲು ದಿನಾಂಕ ಮರುನಿಗದಿಪಡಿಸಿ ತಾತ್ಕಾಲಿಕ ವೇಳಾಪಟ್ಟಿ ಬಿಡುಗಡೆ ಮಾಡಲಾಗಿತ್ತು. ಆದರೆ ಇದೀಗ ಮತ್ತೊಮ್ಮೆ ಪರೀಕ್ಷೆ ದಿನಾಂಕಗಳನ್ನು ಮುಂದೂಡಿದೆ.

Latest Videos
Follow Us:
Download App:
  • android
  • ios