Bangalore University Recruitment 2023: ಬೆಂಗಳೂರು ವಿಶ್ವವಿದ್ಯಾಲಯದ ವಿವಿಧ ಗ್ರಂಥಾಲಯಗಳಿಗೆ ನೇಮಕಾತಿ

ಬೆಂಗಳೂರು ವಿಶ್ವವಿದ್ಯಾಲಯದ ವಿವಿಧ ಗ್ರಂಥಾಲಯಗಳಿಗೆ 2022-23ನೇ ಸಾಲಿನಲ್ಲಿ ಒಂದು ವರ್ಷದ ಅವಧಿಗೆ ಅನ್ವಯಿಸುವಂತೆ 7 ಸಹಾಯಕ ಗ್ರಂಥಪಾಲಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅಫ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಜ.20 ಕೊನೆಯ ದಿನವಾಗಿದೆ.

Bangalore University Recruitment 2023 notification for  Assistant Librarian Posts gow

ಬೆಂಗಳೂರು (ಜ.9): ಬೆಂಗಳೂರು ವಿಶ್ವವಿದ್ಯಾಲಯದ ವಿವಿಧ ಗ್ರಂಥಾಲಯಗಳಿಗೆ 2022-23ನೇ ಸಾಲಿನಲ್ಲಿ ಒಂದು ವರ್ಷದ ಅವಧಿಗೆ ಅನ್ವಯಿಸುವಂತೆ 7 ಸಹಾಯಕ ಗ್ರಂಥಪಾಲಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಯಾವುದೇ ಅಂಗೀಕೃತ ವಿವಿಯಲ್ಲಿ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ/ಮಾಹಿತಿ ವಿಜ್ಞಾನ/ ಡಾಕ್ಯುಮೆಂಟೇಷನ್‌ ಸೈನ್ಸ್‌ ಅಥವಾ ತತ್ಸಾಮಾನ ವೃತ್ತಿಪರ ಪದವಿಯಲ್ಲಿ ಶೇ.55ರಷ್ಟುಅಂಕಗಳೊಂದಿಗೆ (ಎಸ್ಸಿ,ಎಸ್ಟಿವಿದ್ಯಾರ್ಥಿಗಳು ಶೇ.50ರಷ್ಟು) ಉತೀರ್ಣರಾಗಿರಬೇಕು. ಜತೆಗೆ ಎನ್‌ಇಟಿ ಅಥವಾ ಎಸ್‌ಎಲ್‌ಇಟಿ ಪರೀಕ್ಷೆ ಉತ್ತೀರ್ಣರಾಗಿರಬೇಕು. ಪಿಎಚ್‌ಡಿ ಪದವೀದರರಿಗೆ ಈ ಎರಡು ಪರೀಕ್ಷೆಗಳಿಂದ ವಿನಾಯಿತಿ ನೀಡಲಾಗಿದೆ. ಅರ್ಹ ಅಭ್ಯರ್ಥಿಗಳು ಜ.20ರೊಳಗೆ ಅರ್ಜಿಯನ್ನು ಭರ್ತಿ ಮಾಡಿ ಜತೆಗೆ ತಮ್ಮ ಎಲ್ಲ ವಿದ್ಯಾಭ್ಯಾಸದ ದಾಖಲೆಗಳೊಂದಿಗೆ ವಿವಿಯ ಸಹಾಯಕ ಕುಲಸಚಿವರು (ಸಿಬ್ಬಂದಿ ವಿಭಾಗ 1) ಇಲ್ಲಿಗೆ ಸಲ್ಲಿಸಬೇಕು ಎಂದು ವಿವಿಯ ಪ್ರಕಟಣೆ ತಿಳಿಸಿದೆ.

ವಯೋಮಿತಿ: ಬೆಂಗಳೂರು ವಿಶ್ವವಿದ್ಯಾಲಯದ ವಿವಿಧ ಗ್ರಂಥಾಲಯಗಳಲ್ಲಿ ಖಾಲಿ ಇರುವ ಸಹಾಯಕ ಗ್ರಂಥಪಾಲಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು 18 ರಿಂದ 32 ವರ್ಷದ ಒಳಗಿರಬೇಕು.

ಅರ್ಜಿ ಶುಲ್ಕ: ಬೆಂಗಳೂರು ವಿಶ್ವವಿದ್ಯಾಲಯದ ವಿವಿಧ ಗ್ರಂಥಾಲಯಗಳಲ್ಲಿ ಖಾಲಿ ಇರುವ ಸಹಾಯಕ ಗ್ರಂಥಪಾಲಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಸಾಮಾನ್ಯ, ಒಬಿಸಿ ಮತ್ತು  EWS ಅಭ್ಯರ್ಥಿಗಳು 500 ರೂ ಅರ್ಜಿ ಶುಲ್ಕ ಪಾವತಿಸಬೇಕು. ಇತರ ವರ್ಗದ ಅಭ್ಯರ್ಥಿಗಳು 150 ರೂ ಅರ್ಜಿ ಶುಲ್ಕ ಪಾವತಿಸಬೇಕು.

ಆಯ್ಕೆ ಪ್ರಕ್ರಿಯೆ: ಬೆಂಗಳೂರು ವಿಶ್ವವಿದ್ಯಾಲಯದ ವಿವಿಧ ಗ್ರಂಥಾಲಯಗಳಲ್ಲಿ ಖಾಲಿ ಇರುವ ಸಹಾಯಕ ಗ್ರಂಥಪಾಲಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತೆ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

SOUTH EASTERN RAILWAY RECRUITMENT 2023: ಬರೋಬ್ಬರಿ 1,785 ಹುದ್ದೆಗಳಿಗೆ ಅರ್ಜಿ ಆಹ್ವಾನ

ವೇತನ ವಿವರ: ಬೆಂಗಳೂರು ವಿಶ್ವವಿದ್ಯಾಲಯದ ವಿವಿಧ ಗ್ರಂಥಾಲಯಗಳಲ್ಲಿ ಖಾಲಿ ಇರುವ ಸಹಾಯಕ ಗ್ರಂಥಪಾಲಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ  26000  ರೂ ನಿಂದ 34000 ರೂ ವೇತನ ದೊರೆಯಲಿದೆ.

ಬೆಂಗಳೂರು ನಗರ ವಿವಿಗೆ ಶೀಘ್ರವೇ 280 ಕಾಯಂ ಸಿಬ್ಬಂದಿ ನೇಮಕ: ಕುಲಪತಿ ಗಾಂಧಿ

ಅರ್ಜಿ ಸಲ್ಲಿಸಬೇಕಾದ ವಿಳಾಸ
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಜನವರಿ 20, 2023 ಕ್ಕೆ ಮುನ್ನ ಕಳುಹಿಸಬೇಕು.

ಸಹಾಯಕ ರಿಜಿಸ್ಟ್ರಾರ್
ಸ್ಥಾಪನೆ ವಿಭಾಗ-I
ಆಡಳಿತಾತ್ಮಕ ಬ್ಲಾಕ್
ಬೆಂಗಳೂರು ವಿಶ್ವವಿದ್ಯಾಲಯ
ಜ್ಞಾನ ಭಾರತಿ ಕ್ಯಾಂಪಸ್
ಬೆಂಗಳೂರು-560056

Latest Videos
Follow Us:
Download App:
  • android
  • ios