ಜಿಂಬಾಬ್ವೆ ಪರ ಸೋಲೊಮನ್ ಮಿರ್ ಚೊಚ್ಚಲ ಶತಕ ಸಿಡಿಸುವ ಮೂಲಕ ತಂಡಕ್ಕೆ ಗೆಲುವನ್ನು ತಂದಿತ್ತರು.

ಗಾಲೆ(ಜೂ.30): ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಲೀಗ್ ಹಂತದಲ್ಲೇ ಹೊರಬಿದ್ದು ತೀವ್ರ ಟೀಕೆಗೆ ಗುರಿಯಾಗಿದ್ದ ಶ್ರೀಲಂಕಾ ತಂಡಕ್ಕೆ ಇದೀಗ ಮತ್ತೊಮ್ಮೆ ಮುಖಭಂಗ ಎದುರಾಗಿದೆ.

ಕಳಪೆ ಫಿಟ್ನೆಸ್‌ಗೆ ಸಂಬಂಧಿಸಿದಂತೆ ಕ್ರೀಡಾ ಸಚಿವರಿಂದ ಟೀಕೆಗೆ ಗುರಿಯಾಗಿರುವ ಶ್ರೀಲಂಕಾ ಕ್ರಿಕೆಟ್ ತಂಡವು ಜಿಂಬಾಬ್ವೆ ವಿರುದ್ಧ ಹೀನಾಯ ಸೋಲುಂಡಿದೆ. ಇಲ್ಲಿ ಜಿಂಬಾಬ್ವೆ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಆತಿಥೇಯ ತಂಡ 6 ವಿಕೆಟ್‌'ಗಳ ಹೀನಾಯ ಸೋಲು ಕಂಡಿದೆ.

ಶ್ರೀಲಂಕಾ ನೀಡಿದ 317ರನ್'ಗಳ ಗುರಿಯನ್ನು ನಿರಾಯಾಸವಾಗಿ ಬೆನ್ನತ್ತಿದ ಜಿಂಬಾಬ್ವೆ ತಂಡ ಇನ್ನೂ 14 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿತು. ಜಿಂಬಾಬ್ವೆ ಪರ ಸೋಲೊಮನ್ ಮಿರ್ ಚೊಚ್ಚಲ ಶತಕ ಸಿಡಿಸುವ ಮೂಲಕ ತಂಡಕ್ಕೆ ಗೆಲುವನ್ನು ತಂದಿತ್ತರು. ಈ ಮೂಲಕ 5 ಪಂದ್ಯಗಳ ಸರಣಿಯಲ್ಲಿ ಜಿಂಬಾಬ್ವೆ ತಂಡವು 1-0 ಮುನ್ನಡೆ ಸಾಧಿಸಿತು.

ಸಂಕ್ಷಿಪ್ತ ಸ್ಕೋರ್:

ಶ್ರೀಲಂಕಾ : 316/5

(ಮೆಂಡಿಸ್ 86, ತರಂಗಾ 79, ಚತಾರ 49/2)

ಜಿಂಬಾಬ್ವೆ : 322/4 (ಮಿರೆ 112, ರಾಜಾ 67, ಗುಣರತ್ನೆ 45/2)