ಮುಂಬೈ(ನ.04): ಮುಂಬೈ ಇಂಡಿಯನ್ಸ್ ತಂಡದ ಬೌಲಿಂಗ್ ಮೆಂಟರ್ ಆಗಿ ಟೀಂ ಇಂಡಿಯಾ ಮಾಜಿ ವೇಗಿ ಜಹೀರ್ ಖಾನ್ ನೇಮಕ ಮಾಡೋ ಸಾಧ್ಯತೆ ಇದೆ. ಸದ್ಯ ಬೌಲಿಂಗ್ ಮೆಂಟರ್ ಆಗಿರೋ ಶ್ರೀಲಂಕಾದ ಲಸಿತ್ ಮಲಿಂಗ ಬದಲು ಜಹೀರ್ ಆಯ್ಕೆಯಾಗೋ ಸಾಧ್ಯತೆ ಹೆಚ್ಚಿದೆ.

2018ರ ಐಪಿಎಲ್ ಟೂರ್ನಿಯಲ್ಲಿ ಲಸಿತ್ ಮಲಿಂಗ ಮುಂಬೈ ತಂಡದ ಬೌಲಿಂಗ್ ಮೆಂಟರ್ ಜವಾಬ್ದಾರಿ ನಿರ್ವಹಿಸಿದ್ದರು. ಮಲಿಂಗ 110 ಐಪಿಎಲ್ ಪಂದ್ಯದಳಿಂದ 154 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಐಪಿಎಲ್ ಟೂರ್ನಿಯ ಯಶಸ್ವಿ ಬೌಲರ್ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 

2019ರ ವಿಶ್ವಕಪ್ ಟೂರ್ನಿ ಆಡೋ ತಯಾರಿಯಲ್ಲಿರುವ ಲಸಿತ್ ಮಲಿಂಗ, ಐಪಿಎಲ್ ಟೂರ್ನಿಯಿಂದ ದೂರ ಉಳಿಯೋ ಸಾಧ್ಯತೆ ಇದೆ. ಈ ಮೂಲಕ ಫಿಟ್ನೆಸ್ ಕಾಪಾಡಿಕೊಳ್ಳೋ ಲೆಕ್ಕಾಚಾರದಲ್ಲಿದ್ದಾರೆ. ಇತ್ತೀಚೆಗೆ ನಡೆದ ಏಷ್ಯಾಕಪ್ ಟೂರ್ನಿಯಲ್ಲಿ ಮಲಿಂಗ ಪಾಲ್ಗೊಂಡಿದ್ದರು.

ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಮೆಂಟರ್ ಕಮ್ ನಾಯಕನಾಗಿದ್ದ ಜಹೀರ್ ಖಾನ್ 2019ರಲ್ಲಿ ಸಂಪೂರ್ಣ ಬೌಲಿಂಗ್ ಮೆಂಟರ್ ಆಗೋ ಸಾಧ್ಯತೆ ಇದೆ. 2015ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ವಿದಾಯ ಹೇಳಿದ ಜಹೀರ್ ಬಳಿಕ ಐಪಿಎಲ್ ಟೂರ್ನಿಯಲ್ಲಿ ಸಕ್ರೀಯರಾಗಿದ್ದರು.