ಕೋಲ್ಕತಾ ವಿರುದ್ಧ ಪಂದ್ಯದಲ್ಲಿ ಗಾಯ ಮಾಡಿಕೊಂಡಿದ್ದ ಜಹೀರ್‌, ಇಂದು  ಹೈದ್ರಾಬಾದ್‌ ಪಂದ್ಯದಲ್ಲಿ  ಆಡಿಲ್ಲ.

ನವದೆಹಲಿ(ಮೇ.02): ಭುಜದ ನೋವಿನಿಂದ ಬಳಲುತ್ತಿರುವ ಡೆಲ್ಲಿ ಡೇರ್‌ಡೆವಿಲ್ಸ್‌ ತಂಡದ ನಾಯಕ ಜಹೀರ್‌ ಖಾನ್‌, ಪ್ರಸಕ್ತ ಸಾಲಿನ ಉಳಿದ ಐಪಿಎಲ್‌ ಆಡುವ ಸಾಧ್ಯತೆ ಕಡಿಮೆ ಇದೆ. ಕೋಲ್ಕತಾ ವಿರುದ್ಧ ಪಂದ್ಯದಲ್ಲಿ ಗಾಯ ಮಾಡಿಕೊಂಡಿದ್ದ ಜಹೀರ್‌, ಇಂದು ಹೈದ್ರಾಬಾದ್‌ ಪಂದ್ಯದಲ್ಲಿ ಆಡಿಲ್ಲ. ಆದರೆ ಮುಂದಿನ ಪಂದ್ಯಗಳು ಕಡಿಮೆ ಅಂತರದಲ್ಲೇ ಇದ್ದು, ಅವರ ವಯಸ್ಸನ್ನು ಗಮನದಲ್ಲಿಟ್ಟುಕೊಂಡು, ಉಳಿದ ಪಂದ್ಯಗಳಿಗೂ ಆಡಲು ವೈದ್ಯರು ಅನುಮತಿ ನೀಡುವುದು ಕಷ್ಟಎನ್ನಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred