ಕ್ರಿಕೆಟಿಗರು ನಟಿಯರೊಂದಿಗೆ ಡೇಟಿಂಗ್ ನಡೆಸೋದು ಸರ್ವೇ ಸಾಮಾನ್ಯ. ಇತ್ತೀಚೆಗಷ್ಟೇ ಅಂತಹದ್ದೇ ವಿಚಾರಕ್ಕೆ ಸಂಬಂಧಿಸಿದಂತೆ ಆರ್'ಸಿಬಿ ಕ್ರಿಕೆಟಿಗ ಯುಜುವೇಂದ್ರ ಚಾಹಲ್ ಹಾಗೂ ಸ್ಯಾಂಡಲ್'ವುಡ್ ನಟಿ ತನಿಷ್ಕಾ ಕಪೂರ್ ಹೆಸರು ತಳುಕು ಹಾಕಿಕೊಂಡಿತ್ತು. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಈ ವಿಚಾರದ ಕುರಿತಂತೆ ತುಟಿಬಿಚ್ಚಿರುವ ಚಾಹಲ್ ತಮ್ಮ ಮನದಾಳದ ಮಾತುಗಳನ್ನು ಅಭಿಮಾನಿಗಳಿಗೆ ಹಾಗೂ ಮಾಧ್ಯಮಗಳಿಗೆ ಟ್ವಿಟರ್ ಮೂಲಕ ಹಂಚಿಕೊಂಡಿದ್ದಾರೆ.

ನಾನು ಮದುವೆಯಾಗುತ್ತಿಲ್ಲ. ನಾನು ಹಾಗೂ ತನಿಷ್ಕಾ ಉತ್ತಮ ಸ್ನೇಹಿತರಷ್ಟೇ. ಮಾಧ್ಯಮದವರಿಗೆ ಹಾಗೂ ನನ್ನ ಅಭಿಮಾನಿಗಳಿಗೆ ಈ ಮೂಲಕ ಮನವಿ ಮಾಡಿಕೊಳ್ಳುತ್ತಿದ್ದೇನೆ. ದಯವಿಟ್ಟು ಈ ವಿಚಾರವನ್ನು ವೈರಲ್ ಮಾಡಬೇಡಿ. ನನ್ನ ಖಾಸಗಿ ವಿಚಾರವನ್ನು ನೀವು ಗೌರವಿಸುತ್ತೀರ ಎಂದು ಭಾವಿಸಿದ್ದೇನೆ. ನನ್ನ ವಿವಾಹದ ಕುರಿತಂತೆ ಆಧಾರರಹಿತ ಸುದ್ದಿಗಳನ್ನು ಪ್ರಕಟಿಸಬೇಡಿ. ಇಂತಹ ಸುದ್ದಿ ಪ್ರಕಟಿಸುವ ಮುನ್ನ ದಯವಿಟ್ಟು ಸ್ಪಷ್ಟನೆ ಪಡೆದುಕೊಳ್ಳಿ. ಧನ್ಯವಾದಗಳು. ಲವ್ ಯು ಆಲ್ ಎಂದು ಟ್ವೀಟ್ ಮಾಡಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚಾಹಲ್ ಅವರನ್ನು 6 ಕೋಟಿ ನೀಡಿ ಆರ್'ಟಿಎಂ(ರೈಟ್ ಟು ಮ್ಯಾಚ್) ಕಾರ್ಡ್ ಬಳಸಿ ಉಳಿಸಿಕೊಂಡಿತ್ತು. ಈ ಆವೃತ್ತಿಯಲ್ಲಿ ಚಾಹಲ್ 5 ಪಂದ್ಯಗಳನ್ನಾಡಿ 5 ವಿಕೆಟ್'ಗಳನ್ನು ಕಿತ್ತಿದ್ದಾರೆ.