ಈ ಬಾರಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡಲಿರುವ ಯುವಿ ಈಗಾಗಲೇ ಅಭ್ಯಾಸದಲ್ಲಿ ನಿರತರಾಗಿದ್ದಾರೆ.

ಸ್ಟೈಲೀಶ್ ಆಟಗಾರ ಎಂದೇ ಖ್ಯಾತರಾಗಿರುವ ಯುವರಾಜ್ ಸಿಂಗ್ ಹೊಸ ಹೇರ್‌ಸ್ಟೈಲ್ ಮಾಡಿಸಿಕೊಂಡಿದ್ದು, ಎಲ್ಲರ ಗಮನ ಸೆಳೆದಿದ್ದಾರೆ. ಈ ಬಾರಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡಲಿರುವ ಯುವಿ ಈಗಾಗಲೇ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಇತ್ತೀಚಿಗಷ್ಟೇ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹೊಸ ಹೇರ್‌ಸ್ಟೈಲ್ ಮಾಡಿಸಿಕೊಳ್ಳುವ ಮೂಲಕ ಸುದ್ದಿಯಾಗಿದ್ದರು.

ಹೇರ್'ಕಟ್ ಮಾಡಿಸಿದ ನಂತರ ಇನ್'ಸ್ಟಾಗ್ರಾಮ್'ನಲ್ಲಿ ಫೋಟೊ ಪ್ಲಬಿಷ್ ಮಾಡಿ ಮತ್ತೊಬ್ಬ ಆಟಗಾರ ಕೆ.ಎಲ್.ರಾಹುಲ್ ಅವರನ್ನು ತಮಾಷೆಯಾಗಿ ಕ್ಷಮೆ ಕೋರಿದ್ದಾರೆ. ರಾಹುಲ್ ಶೈಲಿಯ ಹೇರ್ ಕಟ್ ಮಾಡಿರುವುದೆ ಇದಕ್ಕೆ ಪ್ರಮುಖ ಕಾರಣ.

View post on Instagram