ಈಗ ಹೊಸ ವಿಷ್ಯಾ ಏನಪ್ಪಾ ಅಂದ್ರೆ, ಯುವರಾಜ್ ಸಿಂಗ್ ಹೋಲುವ ಅವರ ಅಭಿಮಾನಿಯೊಬ್ಬ ಕ್ರೀಡಾಂಗಣದ ಹೊರಗೆ ಕಾಣಿಸಿಕೊಳ್ಳುವ ಮೂಲಕ ಸಾಕಷ್ಟು ಅಚ್ಚರಿ ಮೂಡಿಸಿದ್ದಾರೆ.

ಬರ್ಮಿಂಗ್'ಹ್ಯಾಮ್(ಜೂ.16): ಯುವರಾಜ್ ಸಿಂಗ್ ಬಾಂಗ್ಲಾದೇಶದ ವಿರುದ್ಧ 300ನೇ ಪಂದ್ಯವನ್ನಾಡುವ ಮೂಲಕ ಮತ್ತೊಂದು ಮೈಲಿಗಲ್ಲು ಸಾಧಿಸಿದರು.

ಚಾಂಪಿಯನ್ಸ್ ಟ್ರೋಫಿ ಮೂಲಕ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ ಯುವಿ, ಟೀಂ ಇಂಡಿಯಾಗೆ ಹಲವಾರು ಸ್ಮರಣೀಯ ಗೆಲುವು ತಂದಿತ್ತಿರುವುದು ಎಲ್ಲರಿಗೂ ತಿಳಿದೇ ಇದೆ.

ಈಗ ಹೊಸ ವಿಷ್ಯಾ ಏನಪ್ಪಾ ಅಂದ್ರೆ, ಯುವರಾಜ್ ಸಿಂಗ್ ಹೋಲುವ ಅವರ ಅಭಿಮಾನಿಯೊಬ್ಬ ಕ್ರೀಡಾಂಗಣದ ಹೊರಗೆ ಕಾಣಿಸಿಕೊಳ್ಳುವ ಮೂಲಕ ಸಾಕಷ್ಟು ಅಚ್ಚರಿ ಮೂಡಿಸಿದ್ದಾರೆ.

Scroll to load tweet…

ಈ ಚಿತ್ರವನ್ನು ಬಿಸಿಸಿಐ ಟ್ವಿಟರ್'ನಲ್ಲಿ ಪೋಸ್ಟ್ ಮಾಡಿದ್ದು ಸಾಕಷ್ಟು ವೈರಲ್ ಆಗಿತ್ತು. ಬಿಸಿಸಿಐ ಯುವರಾಜ್ ಸಿಂಗ್ X2 ಎಂದು ಟ್ವೀಟ್ ಮಾಡಿದ್ದರೆ, ನೋ ಚಾನ್ಸ್(ಸಾಧ್ಯವೇ ಇಲ್ಲ) ಎಂದು ಯುವಿ ರಿಟ್ವೀಟ್ ಮಾಡಿದ್ದಾರೆ.

Scroll to load tweet…

ಇದಕ್ಕೆ ಸೇಮ್ ಎಂದು ಸಾನಿಯಾ ಯುವಿ ಕಾಲೆಳೆದಿದ್ದಾರೆ.

ಅಷ್ಟಕ್ಕೂ ಇದ್ರಲ್ಲಿ ನಿಜವಾದ ಯುವಿ ಯಾರು ಅಂತ ನೀವೇ ಪತ್ತೆ ಮಾಡಿ..