ರಣಜಿಯಲ್ಲಿ ದ್ವಿಶತಕ ಸಿಡಿಸಿದರೂ ಯುವಿಗೆ ಸ್ಥಾನ ಕೊಡದೆ ಒಂದೂ ರಣಜಿ ಪಂದ್ಯವನ್ನ ಆಡದ ಹಾರ್ದಿಕ್​​​ ಪಾಂಡ್ಯಗೆ ಅವಕಾಶ ಕಲ್ಪಿಸಿರೋದು ಯುವಿ ಅಭಿಮಾನಿಗಳಲ್ಲಿ ಆಕ್ರೋಶ ಮನೆಮಾಡಿದೆ.

ಮುಂಬೈ(ನ.03): ನಿನ್ನೆ ಇಂಗ್ಲೆಂಡ್​​​​ ವಿರುದ್ಧದ ಸರಣಿಗೆ ಹಾರ್ದಿಕ್​​​​ ಪಾಂಡ್ಯರನ್ನ ಆಯ್ಕೆ ಮಾಡಿರುವುದಕ್ಕೆ ಯುವರಾಜ್​​​ ಸಿಂಗ್​​ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಣಜಿಯಲ್ಲಿ ದ್ವಿಶತಕ ಸಿಡಿಸಿದರೂ ಯುವಿಗೆ ಸ್ಥಾನ ಕೊಡದೆ ಒಂದೂ ರಣಜಿ ಪಂದ್ಯವನ್ನ ಆಡದ ಹಾರ್ದಿಕ್​​​ ಪಾಂಡ್ಯಗೆ ಅವಕಾಶ ಕಲ್ಪಿಸಿರೋದು ಯುವಿ ಅಭಿಮಾನಿಗಳಲ್ಲಿ ಆಕ್ರೋಶ ಮನೆಮಾಡಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ವ್ಯಕ್ತಪಡಿಸಿರುವ ಅಭಿಮಾನಿಗಳು ಆಯ್ಕೆ ಸಮಿತಿ ವಿರುದ್ಧ ಕಿಡಿ ಕಾರಿದ್ದಾರೆ. ಆದರೆ ಆಯ್ಕೆ ಸಮಿತಿ ಪಾಂಡ್ಯರ ಆಯ್ಕೆಯನ್ನ ಸಮರ್ಥಿಸಿಕೊಂಡಿದೆ.