ಯುವಿಗೆ ವಿಶ್ರಾಂತಿ ನೀಡಿದಾಕ್ಷಣ ಅವರಿಗೆ ರಾಷ್ಟ್ರೀಯ ತಂಡದ ಬಾಗಿಲು ಮುಚ್ಚಿದೆ ಎಂದರ್ಥವಲ್ಲ ಎಂದು ಪ್ರಸಾದ್ ಸ್ಪಷ್ಟಪಡಿಸಿದ್ದಾರೆ.

ಪಲ್ಲೆಕೆಲೆ(ಆ.15): ಹಿರಿಯ ಕ್ರಿಕೆಟಿಗ ಯುವರಾಜ್ ಸಿಂಗ್ ಅವರಿಗೆ ವಿಶ್ರಾಂತಿ ನೀಡಲಾಗಿದೆಯೇ ಹೊರತು, ತಂಡದಿಂದ ಕೋಕ್ ನೀಡಿಲ್ಲ ಎಂದು ರಾಷ್ಟ್ರೀಯ ತಂಡದ ಪ್ರಧಾನ ಆಯ್ಕೆದಾರ ಎಂ.ಎಸ್.ಕೆ ಪ್ರಸಾದ್ ಸ್ಪಷ್ಟಪಡಿಸಿದ್ದಾರೆ.

ಯುವಿಗೆ ವಿಶ್ರಾಂತಿ ನೀಡಿದಾಕ್ಷಣ ಅವರಿಗೆ ರಾಷ್ಟ್ರೀಯ ತಂಡದ ಬಾಗಿಲು ಮುಚ್ಚಿದೆ ಎಂದರ್ಥವಲ್ಲ ಎಂದು ಪ್ರಸಾದ್ ಸ್ಪಷ್ಟಪಡಿಸಿದ್ದಾರೆ.

ಮುಂಬರುವ ಶ್ರೀಲಂಕಾ ವಿರುದ್ಧದ ಏಕದಿನ ಹಾಗೂ ಟಿ20 ಸರಣಿಯಿಂದ ಯುವರಾಜ್ ಸಿಂಗ್ ಅವರನ್ನು ಕೈ ಬಿಡಲಾಗಿತ್ತು. ಈ ಹಿನ್ನೆಲೆಯಲ್ಲಿ ಯುವರಾಜ್ ವೃತ್ತಿಜೀವನ ಕೊನೆಘಟ್ಟ ತಲುಪಿದೆ. ಅವರ ಆಟ ಇನ್ನು ಮುಗಿಯಿತು ಎಂಬ ಸುದ್ದಿಗಳು ಹರಿದಾಡತೊಡಗಿತ್ತು.

ಈ ಹಿನ್ನೆಲೆಯಲ್ಲಿ ಸ್ಪಷ್ಟೀಕರಣ ನೀಡಿರುವ ಪ್ರಸಾದ್, ‘ಯುವರಾಜ್ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಯಾವ ಆಟಗಾರನಿಗೂ ತಂಡದ ಬಾಗಿಲು ಎಂದಿಗೂ ಮುಚ್ಚುವುದಿಲ್ಲ. ಯಾವ ಕ್ಷಣದಲ್ಲಿ ಬೇಕಾದರೂ ಆಡಲು ಅವಕಾಶ ಲಭ್ಯವಾಗಬಹುದು. ತಂಡದ ಆಯ್ಕೆ ಸಂದರ್ಭದಲ್ಲಿ ಪ್ರತಿಯೊಬ್ಬ ಆಟಗಾರನ ಕುರಿತು ಚರ್ಚೆ ನಡೆಸಲಾಗುವುದು ಎಂದಿದ್ದಾರೆ