ಎಟಿಪಿ ವಿಶ್ವ ಟೂರ್‌'ನಲ್ಲಿ ಭಾಂಬ್ರಿ ಇದೇ ಮೊದಲ ಬಾರಿಗೆ ಪ್ರಮುಖ ಟೂರ್ನಿಯಲ್ಲಿ 3 ಪಂದ್ಯಗಳನ್ನು ಗೆದ್ದಿದ್ದಾರೆ. ಎಟಿಪಿ ಟೆನಿಸ್ ಟೂರ್ನಿಯಲ್ಲಿ ಭಾಂಬ್ರಿ 2ನೇ ಬಾರಿ ಕ್ವಾರ್ಟರ್‌'ಫೈನಲ್‌'ಗೆ ಲಗ್ಗೆ ಇಟ್ಟಿದ್ದಾರೆ.

ನವದೆಹಲಿ(ಆ.04): ಭಾರತದ ಸ್ಟಾರ್ ಟೆನಿಸ್ ಆಟಗಾರ ಯೂಕಿ ಭಾಂಬ್ರಿ, ಎಟಿಪಿ ಸಿಟಿ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಕ್ವಾರ್ಟರ್‌'ಫೈನಲ್ ಹಂತ ಪ್ರವೇಶಿಸಿದ್ದಾರೆ.

ಇಂದು ನಡೆದ ಸಿಂಗಲ್ಸ್ ವಿಭಾಗದ ಪ್ರೀ ಕ್ವಾರ್ಟರ್‌'ಫೈನಲ್ ಪಂದ್ಯದಲ್ಲಿ ಯೂಕಿ ಭಾಂಬ್ರಿ 6-7(5), 6-3, 6-1 ಸೆಟ್‌'ಗಳಿಂದ ಅರ್ಜೇಂಟೀನಾದ ಗಿಡೊ ಪೆಲ್ಲಾ ಎದುರು ಗೆಲುವು ಪಡೆದರು. ಎಟಿಪಿ ಸಿಂಗಲ್ಸ್‌'ನ 200ನೇ ಶ್ರೇಯಾಂಕಿತ ಭಾಂಬ್ರಿ, 100ನೇ ಶ್ರೇಯಾಂಕದ ಆಟಗಾರನ ಎದುರು ಜಯ ದಾಖಲಿಸಿದರು.

ಎಟಿಪಿ ವಿಶ್ವ ಟೂರ್‌'ನಲ್ಲಿ ಭಾಂಬ್ರಿ ಇದೇ ಮೊದಲ ಬಾರಿಗೆ ಪ್ರಮುಖ ಟೂರ್ನಿಯಲ್ಲಿ 3 ಪಂದ್ಯಗಳನ್ನು ಗೆದ್ದಿದ್ದಾರೆ. ಎಟಿಪಿ ಟೆನಿಸ್ ಟೂರ್ನಿಯಲ್ಲಿ ಭಾಂಬ್ರಿ 2ನೇ ಬಾರಿ ಕ್ವಾರ್ಟರ್‌'ಫೈನಲ್‌'ಗೆ ಲಗ್ಗೆ ಇಟ್ಟಿದ್ದಾರೆ.

2014ರಲ್ಲಿ ಚೆನ್ನೈ ಓಪನ್‌'ನಲ್ಲಿ ಭಾಂಬ್ರಿ ಎಂಟರ ಘಟ್ಟಕ್ಕೇರಿದ್ದರು.