‘‘ಭಾರತದ ಯುವಜನತೆಯ ಐಕಾನ್‌ಗಳಂತಾಗಿರುವ ಸಚಿನ್, ಕೊಹ್ಲಿ ಮತ್ತು ಸಿದ್ಧಾರ್ಥ್ ಅವರು ಪ್ರಧಾನಿ ಮೋದಿಯವರ ಸ್ಕಿಲ್ ಇಂಡಿಯಾ ಕನಸನ್ನು ಯುವ ಜನತೆಯತ್ತ ಕೊಂಡೊಯ್ಯುವ ವಿಶ್ವಾಸವಿದೆ’’

ನವದೆಹಲಿ(ಡಿ.11): ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ ಅವರು, ‘ಸ್ಕಿಲ್ ಇಂಡಿಯಾ’ದ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈಗಾಗಲೇ ರಾಯಭಾರಿಯಾಗಿ ನೇಮಕವಾಗಿರುವ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಜತೆಗೆ ಕೊಹ್ಲಿ ಮತ್ತು ನಟ ಸಿದ್ಧಾರ್ಥ್ ಮಲ್ಹೋತ್ರಾ ರಾಯಭಾರಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಈ ಬಗ್ಗೆ ವಿವರಣೆ ನೀಡಿರುವ ಸ್ಕಿಲ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಮನೀಶ್ ಕುಮಾರ್, ‘‘ಭಾರತದ ಯುವಜನತೆಯ ಐಕಾನ್‌ಗಳಂತಾಗಿರುವ ಸಚಿನ್, ಕೊಹ್ಲಿ ಮತ್ತು ಸಿದ್ಧಾರ್ಥ್ ಅವರು ಪ್ರಧಾನಿ ಮೋದಿಯವರ ಸ್ಕಿಲ್ ಇಂಡಿಯಾ ಕನಸನ್ನು ಯುವ ಜನತೆಯತ್ತ ಕೊಂಡೊಯ್ಯುವ ವಿಶ್ವಾಸವಿದೆ’’ ಎಂದಿದ್ದಾರೆ.