ಮಾರ್ಚ್-ಏಪ್ರಿಲ್ ವೇಳೆ ನಡೆಯಲಿರುವ ವೆಸ್ಟ್‌ಇಂಡೀಸ್ ಸರಣಿ ನಡೆಯಲಿದ್ದು, ನಾಯಕನ ಸ್ಥಾನ ಆಗ ಖಚಿತವಾಗಲಿದೆ.

ಕರಾಚಿ(ಫೆ.25): ಪಾಕಿಸ್ತಾನ ತಂಡದ ಟೆಸ್ಟ್ ನಾಯಕ ಮಿಸ್ಬಾ ಉಲ್ ಹಕ್, ತಮ್ಮ ಭವಿಷ್ಯದ ಬಗ್ಗೆ ಯಾವುದೇ ನಿರ್ಧಾರ ತಳೆಯದ ಹಿನ್ನೆಲೆಯಲ್ಲಿ ಹಿರಿಯ ಆಟಗಾರ ಯೂನಿಸ್ ಖಾನ್‌ಗೆ ಟೆಸ್ಟ್ ನಾಯಕತ್ವ ಹೊರಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಚಿಂತಿಸಿದೆ ಎನ್ನಲಾಗಿದೆ.

ಮಾರ್ಚ್-ಏಪ್ರಿಲ್ ವೇಳೆ ನಡೆಯಲಿರುವ ವೆಸ್ಟ್‌ಇಂಡೀಸ್ ಸರಣಿ ನಡೆಯಲಿದ್ದು, ನಾಯಕನ ಸ್ಥಾನ ಆಗ ಖಚಿತವಾಗಲಿದೆ.

‘‘ವಿಂಡೀಸ್ ಸರಣಿಯಲ್ಲಿ ನಾನು ಆಡುವ ಸಂಭವವಿದೆ. ಆದರೆ, ನಾಯಕತ್ವದ ಕುರಿತು ಆಯ್ಕೆ ಸಮಿತಿ ಮತ್ತು ಕ್ರಿಕೆಟ್ ಮಂಡಳಿ ನಿರ್ಧರಿಸಲಿದೆ’’ ಎಂದು ಮಿಸ್ಬಾ ಹೇಳಿದ್ದಾರೆ.

39 ವರ್ಷ ವಯಸ್ಸಿನ ಯೂನಿಸ್ ಖಾನ್, ಟೆಸ್ಟ್ ಕ್ರಿಕೆಟ್‌ನಲ್ಲಿ 10 ಸಹಸ್ರ ರನ್ ಪೂರೈಸಲು ಇನ್ನು ಕೇವಲ 23 ರನ್‌'ಗಳನ್ನು ಗಳಿಸಬೇಕಿದೆ.