Asianet Suvarna News Asianet Suvarna News

ವಿಶ್ವಕಪ್ ಗಮನದಲ್ಲಿಟ್ಟುಕೊಂಡು ಯುವಕರಿಗೆ ಆದ್ಯತೆ

ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯ ಅನುಭವವನ್ನು ಮುಂದಿನ ದಿನಗಳಲ್ಲಿ ತಂಡವು ಇನ್ನಷ್ಟು ಬಳಸಿಕೊಳ್ಳಲಿದೆ ಎನ್ನುವ ಮೂಲಕ ಮುಂಬರುವ ವಿಶ್ವಕಪ್'ನಲ್ಲೂ ಮಾಹಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತುಗಳಿಗೆ ಪುಷ್ಠಿ ತುಂಬಿದ್ದಾರೆ.

Young players will get chance in run up to World Cup
  • Facebook
  • Twitter
  • Whatsapp

ತಿರುಪತಿ(ಜೂ.30): ಮುಂಬರುವ 2019ರ ಏಕದಿನ ವಿಶ್ವಕಪ್‌'ಗೆ ತಂಡವನ್ನು ಸಿದ್ಧಪಡಿಸುವ ದೃಷ್ಟಿಯಿಂದ ಯುವ ಆಟಗಾರರಿಗೆ ರಾಷ್ಟ್ರೀಯ ತಂಡದಲ್ಲಿ ಆಡಲು ಹೆಚ್ಚಿನ ಅವಕಾಶ ಕಲ್ಪಿಸಲಾಗುವುದು ಎಂದು ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್.ಕೆ. ಪ್ರಸಾದ್ ಹೇಳಿದ್ದಾರೆ.

ಈಗಿನಿಂದ ವಿಶ್ವಕಪ್ ಆರಂಭದವರೆಗೂ ಭಾರತ ತಂಡ ಒಟ್ಟು 55 ಏಕದಿನ ಪಂದ್ಯಗಳನ್ನು ಆಡಲಿದ್ದು, ಪ್ರತಿ ಸರಣಿಯಲ್ಲೂ ಯುವ ಆಟಗಾರರಿಗೆ ತಂಡದಲ್ಲಿ ಆಡಲು ಅವಕಾಶ ನೀಡಲಾಗುತ್ತದೆ ಎಂದು ಪ್ರಸಾದ್ ಹೇಳಿದರು.

‘ಈ ರೀತಿ ಅವಕಾಶ ನೀಡುವುದರಿಂದ ವಿಶ್ವಕಪ್ ವೇಳೆಗೆ ಯುವ ಆಟಗಾರರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡಿದ ಅನುಭವ ಒದಗಿಸಿದಂತಾಗುತ್ತದೆ. ಪ್ರತಿಷ್ಠಿತ ಪಂದ್ಯಾವಳಿಯಲ್ಲಿ ಆಡುವಾಗ ಒತ್ತಡ ನಿಭಾಯಿಸುವುದು ಮುಖ್ಯ’ ಎಂದು ಪ್ರಸಾದ್ ಹೇಳಿದರು.

ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯ ಅನುಭವವನ್ನು ಮುಂದಿನ ದಿನಗಳಲ್ಲಿ ತಂಡವು ಇನ್ನಷ್ಟು ಬಳಸಿಕೊಳ್ಳಲಿದೆ ಎನ್ನುವ ಮೂಲಕ ಮುಂಬರುವ ವಿಶ್ವಕಪ್'ನಲ್ಲೂ ಮಾಹಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತುಗಳಿಗೆ ಪುಷ್ಠಿ ತುಂಬಿದ್ದಾರೆ.

Follow Us:
Download App:
  • android
  • ios