ಮೃತ ಆಟಗಾರನನ್ನು ಪದ್ಮ ಜೋಡುಕಲ್ಲು ಎಂದು ಗುರುತಿಸಲಾಗಿದೆ. ಮೀಯಪದವು ಬಳಿಯ ಕ್ರೀಡಾಂಗಣದಲ್ಲಿ ಇಂದು ಮತ್ತು ನಾಳೆ ಹೊನಲು ಬೆಳಕಿನ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟವನ್ನ ಆಯೋಜಿಸಲಾಗಿದೆ. ಈ ಟೂರ್ನಿಯಲ್ಲಿ ದುರ್ಘಟನೆ ಸಂಭವಿಸಿದೆ.

ಮಂಗಳೂರು(ಡಿ.16): ಕ್ರಿಕೆಟ್ ಆಟದ ವೇಳೆ ಬೌಲಿಂಗ್ ಮಾಡುತ್ತಿದ್ದವ ಹೃದಯಘಾತಕ್ಕೆ ಒಳಗಾಗಿ ಕ್ರೀಡಾಂಗಣದಲ್ಲೇ ಸಾವನ್ನಪ್ಪಿದ ಘಟನೆ ಕಾಸರಗೋಡಿನ ಮೀಯಪದವು ಎಂಬಲ್ಲಿ ನಡೆದಿದೆ.

ಮೃತ ಆಟಗಾರನನ್ನು ಪದ್ಮ ಜೋಡುಕಲ್ಲು ಎಂದು ಗುರುತಿಸಲಾಗಿದೆ. ಮೀಯಪದವು ಬಳಿಯ ಕ್ರೀಡಾಂಗಣದಲ್ಲಿ ಇಂದು ಮತ್ತು ನಾಳೆ ಹೊನಲು ಬೆಳಕಿನ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟವನ್ನ ಆಯೋಜಿಸಲಾಗಿದೆ. ಈ ಟೂರ್ನಿಯಲ್ಲಿ ದುರ್ಘಟನೆ ಸಂಭವಿಸಿದೆ.

ಕ್ರಿಕೆಟ್ ಟೂರ್ನಿಯಲ್ಲಿ ಜೆಕೆವಿ ಜೋಡುಕಲ್ಲು ಎಂಬ ತಂಡ ಮತ್ತು ಸ್ಥಳೀಯ ಮತ್ತೊಂದು ತಂಡದ ನಡುವೆ ಪಂದ್ಯ ನಡೆಯುತ್ತಿತ್ತು. ಈ ವೇಳೆ ಜೆಕೆವಿ ತಂಡದ ಆಟಗಾರ ಪದ್ಮ ಜೋಡುಕಲ್ಲು ಬೌಲಿಂಗ್'ನಲ್ಲಿ ನಿರತರಾಗಿದ್ದು, ಬೌಲಿಂಗ್ ಆರಂಭಕ್ಕೆ ಅಣಿಯಾಗಿ ಓಡಿ ಬಂದ ವೇಳೆ ಕುಸಿದು ಬಿದ್ದಿದ್ದಾರೆ. ತಕ್ಷಣ ಅಲ್ಲಿದ್ದವರು ಅವರಿಗೆ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಸಾಗಿಸಲು ಸ್ಥಳೀಯರು ಮುಂದಾದರು. ಅದಾಗಲೇ ಆತನ ಪ್ರಾಣ ಪಕ್ಷಿ ಹಾರಿ ಹೋಗಿತ್ತು.