ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಸರ್ರೆ ತಂಡವನ್ನು ಪ್ರತಿನಿಧಿಸುತ್ತಿರುವುದರಿಂದ ಈ ಪಂದ್ಯಕ್ಕೆ ಹೆಚ್ಚು ಮಹತ್ವ ದೊರೆತಿದೆ. ಕೊಹ್ಲಿ ಆಟವನ್ನು ನೋಡಲು ಭಾರತೀಯರು ಹೆಚ್ಚು ಆಸಕ್ತಿ ತೋರಲಿದ್ದು, ಆನ್‌ಲೈನ್‌ನಲ್ಲಿ ಪಂದ್ಯ ಪ್ರಸಾರ ಮಾಡಲು ನಿರ್ಧರಿಸಿದ್ದಾಗಿ ತಂಡದ ಆಡಳಿತ ತಿಳಿಸಿದೆ. ಜೂ.25-28ರವರೆಗೂ ಪಂದ್ಯ ನಡೆಯಲಿದೆ.

ಲಂಡನ್(ಮೇ.14): ಮುಂದಿನ ತಿಂಗಳು ಸ್ಕೇರ್‌ಬೋರ್‌ನಲ್ಲಿ ಸರ್ರೆ ವಿರುದ್ಧದ ಕೌಂಟಿ ಪಂದ್ಯವನ್ನು ಯಾರ್ಕ್‌ಶೈರ್, ಮೊಟ್ಟಮೊದಲ ಬಾರಿಗೆ ಆನ್‌ಲೈನ್‌ನಲ್ಲಿ ನೇರ ಪ್ರಸಾರ ಮಾಡಿ ಇತಿಹಾಸ ಬರೆಯಲಿದೆ. ಕೌಂಟಿ ಪಂದ್ಯಗಳನ್ನು ಆನ್‌ಲೈನ್‌ನಲ್ಲಿ ನೇರ ಪ್ರಸಾರ ಮಾಡಲಿರುವ ಮೊದಲ ತಂಡ ಎನ್ನುವ ಹೆಗ್ಗಳಿಕೆಗೆ ಯಾರ್ಕ್‌ಶೈರ್ ಪಾತ್ರವಾಗಲಿದೆ. 