ನವದೆಹಲಿ(ಅ.11): 2012ರ ಲಂಡನ್ ಒಲಿಂಪಿಕ್ಸ್​ನಲ್ಲಿ  ಕಂಚಿನ ಪದಕ ಗೆದ್ದಿದ್ದ ಭಾರತದ ಭರವಸೆಯ ಕುಸ್ತಿ ಪಟು ಯೋಗೇಶ್ವರ್ ದತ್ ಅವರ ನಿಶ್ಚಿತಾರ್ಥ ಕಾಂಗ್ರೆಸ್ ನಾಯಕನ ಪುತ್ರಿಯೊಂದಿಗೆ ನೆರವೆರಿದೆ. 

ಕಾಂಗ್ರೆಸ್​ ನಾಯಕ  ಜೈ ಭಗವಾನ್ ಶರ್ಮಾ ಅವರ ಪುತ್ರಿ ಶೀತಲ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ದತ್ ಕುಟುಂಬದ ಆಪ್ತರು ಹಾಗೂ ಕೆಲವು ಕಾಂಗ್ರೆಸ್ ನಾಯಕರು ಭಾಗವಹಿಸಿದ್ದರು. 

ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜಿ ಭೂಷಣ್ ಶರಣ್ , ಎಎಪಿ ಹರಿಯಾಣ್ ರಾಜ್ಯ ಮುಖ್ಯಸ್ಥ ನವೀನ್ ಜೈಹಿಂದ್ ಸಹ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ಯುವ ಜೋಡಿ ಮುಂದಿನ ವರ್ಷ ಜನವರಿ 16ರಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದೆ.