Asianet Suvarna News Asianet Suvarna News

ಅಫ್ಘಾನಿಸ್ತಾನ ಟೆಸ್ಟ್‌ಗೂ ಮೊದಲು ಟೀಮ್ಇಂಡಿಯಾ ಕ್ರಿಕೆಟಿಗರಿಗೆ ಅಗ್ನಿಪರೀಕ್ಷೆ

ಅಫ್ಘಾನಿಸ್ತಾನ ವಿರುದ್ದಧ ಏಕೈಕ ಟೆಸ್ಟ್ ಪಂದ್ಯಕ್ಕೂ ಮೊದಲು ಟೀಮ್ಇಂಡಿಯಾ ಕ್ರಿಕೆಟಿಗರಿಗೆ ಯೋ-ಯೋ ಫಿಟ್ನೆಸ್ ಟೆಸ್ಟ್ ನಡೆಸಲು ಬಿಸಿಸಿಐ ಸೂಚಿಸಿದೆ. ಯೋ-ಯೋ ಟೆಸ್ಟ್‌ನಲ್ಲಿ ಪಾಸ್ ಆದ ಕ್ರಿಕೆಟಿಗರಿ ಮಾತ್ರ ಟೆಸ್ಟ್ ಪಂದ್ಯದಲ್ಲಿ ಆಡಲು ಅವಕಾಶ ಸಿಗಲಿದೆ.
 

Yo-yo Test for Indian cricketers before the Afghanistan Test

ಮುಂಬೈ(ಜೂನ್.2): ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕೆ ಆಯ್ಕೆಯಾಗಿರುವ ಟೀಮ್ಇಂಡಿಯಾ ಕ್ರಿಕೆಟಿಗರಿಗೆ ಯೋ-ಯೋ ಫಿಟ್ನೆಸ್ ಟೆಸ್ಟ್‌ಗೆ ಪಾಸ್ ಮಾಡುವಂತೆ ಬಿಸಿಸಿಐ ಸೂಚಿಸಿದೆ. ಜೂನ್ 14 ರಿಂದ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ಹಾಗೂ ಆಫ್ಘಾನಿಸ್ತಾನ ನಡುವೆ ಐತಿಹಾಸಿಕ ಟೆಸ್ಟ್ ಪಂದ್ಯ ನಡೆಯಲಿದೆ. ಇದಕ್ಕೂ ಮೊದಲು ಟೀಮ್ಇಂಡಿಯಾ ಕ್ರಿಕೆಟಿಗರು ಜೂನ್ 8 ರಂದು ಬೆಂಗಳೂರಿನ ನ್ಯಾಶನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಯೋ-ಯೋ ಅಗ್ನಪರೀಕ್ಷೆ ಎದುರಿಸಬೇಕಿದೆ.

ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದ ಬಳಿಕ , ಟೀಮ್ಇಂಡಿಯಾ 5 ಟೆಸ್ಟ್ ಪಂದ್ಯದ ಸರಣಿಗಾಗಿ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಹೀಗಾಗಿ ಯೋ-ಯೋ ಟೆಸ್ಟ್ ಅವಶ್ಯಕ ಎಂದು ಬಿಸಿಸಿಐ ಹೇಳಿದೆ. ಟೆಸ್ಟ್ ಕ್ರಿಕೆಟಿಗರ ಜೊತೆಗೆ ಇಂಗ್ಲೆಂಡ್ ಹಾಗೂ ವೆಸ್ಟ್ಇಂಡೀಸ್ ಎ ತಂಡದ ವಿರುದ್ಧದ ತ್ರಿಕೋನ ಸರಣಿಗೆ ಆಯ್ಕೆಯಾಗಿರುವ ಭಾರತ ಎ ತಂಡದ ಆಟಗಾರರಿಗೂ ಯೋ-ಯೋ ಫಿಟ್ನೆಸ್ ಟೆಸ್ಟ್ ಎದುರಿಸುವಂತೆ ಬಿಸಿಸಿಐ ಸೂಚಿಸಿದೆ. 

ಏನಿದು ಯೋ-ಯೋ ಟೆಸ್ಟ್: ಆಟಗಾರರ ದೈಹಿಕ ಕ್ಷಮತೆ ಅಳೆಯಲು ಯೋ-ಯೋ ಟೆಸ್ಟ್ ನಡೆಯಲಾಗುತ್ತೆ. ಕಳೆದ ವರ್ಷ ಬಿಸಿಸಿಐ ಎಲ್ಲಾ ಕ್ರಿಕೆಟಿಗರಿಗೆ ಯೋ-ಯೋ ಟೆಸ್ಟ್ ಕಡ್ಡಾಯಗೊಳಿಸಿದೆ. ಕೋಚ್ ಅನಿಲ್ ಕುಂಬ್ಳೆ ಅವಧಿಯಲ್ಲಿ ಯೋ -ಯೋ ಫಿಟ್ನೆಸ್ ಟೆಸ್ಟ್‌ನ್ನ ಟೀಮ್ಇಂಡಿಯಾದಲ್ಲಿ ಜಾರಿಗೊಳಿಸಲಾಯಿತು. ಇದು ಸಂಪೂರ್ಣವಾಗಿ ಆಟಗಾರರ ಫಿಟ್ನೆಸ್ ಕುರಿತ ಪರೀಕ್ಷೆಯಾಗಿರುತ್ತೆ. 

Follow Us:
Download App:
  • android
  • ios