2018-19ರ ಸಾಲಿನಲ್ಲಿ ನೂತನ ಕೋಚ್‌ಗಳು ತಂಡದೊಂದಿಗೆ ಕಾರ್ಯ ನಿರ್ವಹಿಸಲಿದ್ದಾರೆ. ಕಳೆದ ಸಾಲಿನಲ್ಲಿ ಕೋಚ್‌ಗಳಾಗಿದ್ದ ಪಿ.ವಿ.ಶಶಿಕಾಂತ್ ಹಾಗೂ ಜಿ.ಕೆ.ಅನಿಲ್ ಕುಮಾರ್‌ರನ್ನು ಮುಂದುವರಿಸದಿರಲು ರಾಜ್ಯ ಸಂಸ್ಥೆ ನಿರ್ಧರಿಸಿದೆ. ಕಳೆದ ಋತುವಿನಲ್ಲಿ ಕರ್ನಾಟಕ ತಂಡ ರಣಜಿ ಟ್ರೋಫಿಯಲ್ಲಿ ಸೆಮೀಸ್‌ಗೇರಿದ್ದರೆ, ವಿಜಯ್ ಹಜಾರೆ ಟ್ರೋಫಿ ಯಲ್ಲಿ ಪ್ರಶಸ್ತಿ ಎತ್ತಿಹಿಡಿದಿತ್ತು

ಬೆಂಗಳೂರು[ಜೂ.09]: ಕರ್ನಾಟಕ ರಾಜ್ಯ ಕ್ರಿಕೆಟ್ ತಂಡದ ನೂತನ ಕೋಚ್‌ಗಳಾಗಿ ಮಾಜಿ ಆಟಗಾರರಾದ ಯರ್ರೆಗೌಡ ಹಾಗೂ ಎಸ್. ಅರವಿಂದ್‌ರನ್ನು ರಾಜ್ಯ ಕ್ರಿಕೆಟ್ ಸಂಸ್ಥೆ ನೇಮಿಸಿದೆ.

2018-19ರ ಸಾಲಿನಲ್ಲಿ ನೂತನ ಕೋಚ್‌ಗಳು ತಂಡದೊಂದಿಗೆ ಕಾರ್ಯ ನಿರ್ವಹಿಸಲಿದ್ದಾರೆ. ಕಳೆದ ಸಾಲಿನಲ್ಲಿ ಕೋಚ್‌ಗಳಾಗಿದ್ದ ಪಿ.ವಿ.ಶಶಿಕಾಂತ್ ಹಾಗೂ ಜಿ.ಕೆ.ಅನಿಲ್ ಕುಮಾರ್‌ರನ್ನು ಮುಂದುವರಿಸದಿರಲು ರಾಜ್ಯ ಸಂಸ್ಥೆ ನಿರ್ಧರಿಸಿದೆ. ಕಳೆದ ಋತುವಿನಲ್ಲಿ ಕರ್ನಾಟಕ ತಂಡ ರಣಜಿ ಟ್ರೋಫಿಯಲ್ಲಿ ಸೆಮೀಸ್‌ಗೇರಿದ್ದರೆ, ವಿಜಯ್ ಹಜಾರೆ ಟ್ರೋಫಿ ಯಲ್ಲಿ ಪ್ರಶಸ್ತಿ ಎತ್ತಿಹಿಡಿದಿತ್ತು. ತಂಡದ ಉತ್ತಮ ಪ್ರದರ್ಶನದ ಹೊರತಾಗಿಯೂ ಕೋಚ್‌ಗಳನ್ನು ಮುಂದುವರಿಸದೆ ಇರುವುದು ಅಚ್ಚರಿಗೆ ಕಾರಣವಾಗಿದೆ. ಈ ಬಗ್ಗೆ ‘ಕನ್ನಡ ಪ್ರಭ’ಕ್ಕೆ ಪ್ರತಿಕ್ರಿಯೆ ನೀಡಿದ ಕೆಎಸ್‌ಸಿಎ ವಕ್ತಾರ ವಿನಯ್ ಮೃತ್ಯುಂಜಯ, ‘ಆಡಳಿತ ಸಮಿತಿ ಹಲವು ವಿಚಾರಗಳನ್ನು ಗಮನದಲ್ಲಿಟ್ಟುಕೊಂಡ ಕೋಚ್’ಗಳನ್ನು ಆಯ್ಕೆ ಮಾಡಿದೆ’ ಎಂದರು.

Scroll to load tweet…

ಯರ್ರೆ ಗೌಡ್, ಕರ್ನಾಟಕ ಹಾಗೂ ರೈಲ್ವೇಸ್ ಪರ ರಣಜಿ ಆಡಿದ್ದರು. ಕಿರಿಯ ತಂಡಗಳಿಗೆ ಕೋಚ್ ಆಗಿದ್ದರು. ಇದೇ ವೇಳೆ ಎಸ್.ಅರವಿಂದ್ 2017-18ರ ಋತು ಮುಕ್ತಾಯಗೊಂಡ ಬಳಿಕ ಕ್ರಿಕೆಟ್’ಗೆ ನಿವೃತ್ತಿ ಘೋಷಿಸಿದ್ದರು. ಇನ್ನು ಅಂಡರ್ 23 ರಾಜ್ಯ ತಂಡಕ್ಕೆ ಎನ್.ಸಿ ಅಯ್ಯಪ್ಪ ಮತ್ತು ಸುದೀರ್ ನಾಡೀಗ್ ಅಮೀತ್ ಹಾಗೆಯೇ ಅಂಡರ್ 19 ತಂಡಕ್ಕೆ ದೀಪಕ್ ಚೌಗ್ಲೆ ಮತ್ತು ಗೋಪಾಲಕೃಷ್ಣ ಚೈತ್ರ ಅವರನ್ನು ನೇಮಕ ಮಾಡಲಾಗಿದೆ.