ಪ್ರಸಕ್ತ ಸಾಲಿನ ಬಿಗ್ ಬ್ಯಾಶ್ ಲೀಗ್ ಟೂರ್ನಿಯು ಡಿಸೆಂಬರ್ 09ರಿಂದ ಆರಂಭವಾಗಲಿದೆ. ಇನ್ನು ಸೀನಾ ಹೊಸ ಚಿತ್ರ 'ಫರ್ಡಿನ್ಯಾಂಡ್' ಅಮೇರಿಕಾದಲ್ಲಿ ಡಿಸೆಂಬರ್ 15ರಂದು ತೆರೆಕಾಣಲಿದೆ.

ಸಿಡ್ನಿ(ನ.30): ಡಬ್ಲ್ಯೂಡಬ್ಲ್ಯೂಇ ಸೂಪರ್‌'ಸ್ಟಾರ್ ಜಾನ್ ಸೀನಾಗೆ, ಆಸ್ಟ್ರೇಲಿಯಾದ ದಿಗ್ಗಜ ಕ್ರಿಕೆಟಿಗ ಶೇನ್ ವಾಟ್ಸನ್ ಕ್ರಿಕೆಟ್ ಪಾಠ ಹೇಳಿಕೊಟ್ಟಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತಮ್ಮ ಮುಂಬರುವ ಚಿತ್ರ ‘ಫರ್ಡಿನ್ಯಾಂಡ್’ನ ಪ್ರಚಾರದ ಸಲುವಾಗಿ ಆಸ್ಟ್ರೇಲಿಯಾಗೆ ಆಗಮಿಸಿದ್ದ ಸೀನಾಗೆ ಕ್ರಿಕೆಟ್ ಆಡಿ ಎಲ್ಲರ ಗಮನ ಸೆಳೆದರು. ಜಾನ್ ಸೀನಾ ಆಸ್ಟ್ರೇಲಿಯಾದಲ್ಲಿ ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಂಡ ಅದ್ಭುತ ಅನುಭವಗಳನ್ನು ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Scroll to load tweet…

ಇನ್ನು 40 ವರ್ಷದ ಶೇನ್ ವ್ಯಾಟ್ಸನ್ ಕ್ರಿಕೆಟ್ ಆಡೋದು ಹೇಗೆ ಎಂದು ಜಾನ್ ಸೀನಾಗೆ ಹೇಳಿಕೊಟ್ಟಿದ್ದಾರೆ. ಬಿಗ್ ಬ್ಯಾಶ್ ಲೀಗ್'ನಲ್ಲಿ ಸಿಡ್ನಿ ಥಂಡರ್ಸ್ ತಂಡದ ಭಾಗವಾಗಿರುವ ವ್ಯಾಟ್ಸನ್ ಸಿಕ್ಸರ್ ಬಾರಿಸುವ ಬಗ್ಗೆ ಸೀನಾಗೆ ಕೆಲವೊಂದು ಉಪಯುಕ್ತ ಸಲಹೆಯನ್ನು ನೀಡಿದ್ದಾರೆ ಎನ್ನಲಾಗಿದೆ.

Scroll to load tweet…

ಪ್ರಸಕ್ತ ಸಾಲಿನ ಬಿಗ್ ಬ್ಯಾಶ್ ಲೀಗ್ ಟೂರ್ನಿಯು ಡಿಸೆಂಬರ್ 09ರಿಂದ ಆರಂಭವಾಗಲಿದೆ. ಇನ್ನು ಸೀನಾ ಹೊಸ ಚಿತ್ರ 'ಫರ್ಡಿನ್ಯಾಂಡ್' ಅಮೇರಿಕಾದಲ್ಲಿ ಡಿಸೆಂಬರ್ 15ರಂದು ತೆರೆಕಾಣಲಿದೆ.