ಏಷ್ಯನ್ ಗೇಮ್ಸ್‌ಗೆ ಜುಲೈ 22, 23ಕ್ಕೆ ಕುಸ್ತಿ ಟ್ರಯಲ್ಸ್ ನಿಗದಿ; ವಿನೇಶ್, ಭಜರಂಗ್‌ಗೆ ವಿನಾಯಿತಿ?
ಏಷ್ಯನ್ ಗೇಮ್ಸ್ ಕ್ರೀಡಾಕೂಟಕ್ಕೆ ಕುಸ್ತಿ ಟ್ರಯಲ್ಸ್‌ಗೆ ದಿನಾಂಕ ನಿಗದಿ
ಇದೇ ಜುಲೈ 22 ಹಾಗೂ 23ರಂದು ನಡೆಯಲಿದೆ ಆಯ್ಕೆ ಟ್ರಯಲ್ಸ್
ಭಜರಂಗ್ ಪೂನಿಯಾ, ವಿನೇಶ್ ಪೋಗಟ್‌ಗೆ ಟ್ರಯಲ್ಸ್‌ನಿಂದ ವಿನಾಯಿತಿ ಸಾಧ್ಯತೆ
ನವದೆಹಲಿ(ಜು.13): ಮುಂಬರುವ ಏಷ್ಯನ್ ಗೇಮ್ಸ್‌ಗೆ ಜು.22 ಮತ್ತು 23ರಂದು ಕುಸ್ತಿ ಆಯ್ಕೆ ಟ್ರಯಲ್ಸ್ ನಡೆಸಲು ಭಾರತೀಯ ಕುಸ್ತಿ ಫೆಡರೇಶನ್(ಡಬ್ಲ್ಯುಎಫ್‌ಐ)ಗೆ ಭಾರತೀಯ ಒಲಿಂಪಿಕ್ ಸಮಿತಿ(ಐಒಎ) ನೇಮಿಸಿರುವ ತಾತ್ಕಾಲಿಕ ಸಮಿತಿಯು ನಿರ್ಧರಿಸಿದೆ. ಆದರೆ ಟ್ರಯಲ್ಸ್‌ನ ಮಾನದಂಡ ಹಾಗೂ ಪ್ರತಿಭಟನಾ ನಿರತ ಕುಸ್ತಿಪಟುಗಳಿಗೆ ಆಯ್ಕೆ ಟ್ರಯಲ್ಸ್‌ನಿಂದ ವಿನಾಯಿತಿ ನೀಡುವ ಬಗ್ಗೆ ಸಮಿತಿ ಇನ್ನಷ್ಟೇ ಸ್ಪಷ್ಟ ಮಾಹಿತಿ ನೀಡಬೇಕಿದೆ.
ಈ ಮೊದಲು ಪ್ರತಿಭಟನೆಯಿಂದಾಗಿ ಆಯ್ಕೆ ಟ್ರಯಲ್ಸ್‌ನಲ್ಲಿ ಪಾಲ್ಗೊಳ್ಳಲು ಸಮಯಾವಕಾಶ ಬೇಕೆಂದು ಕುಸ್ತಿಪಟುಗಳು ವಿನಂತಿಸಿದ್ದರು. ಹೀಗಾಗಿ ಕುಸ್ತಿ ಪ್ರತಿಭಟನೆ ನೇತೃತ್ವ ಹೊತ್ತಿದ್ದ ವಿನೇಶ್ ಫೋಗಟ್, ಭಜರಂಗ್ ಪೂನಿಯಾ, ರವಿ ದಹಿಯಾ ಅವರಿಗೆ ಆಯ್ಕೆ ಟ್ರಯಲ್ಸ್‌ನಿಂದ ವಿನಾಯಿತಿ ದೊರೆಯುವ ಸಾಧ್ಯತೆಯಿದೆ. ಅದರಂತೆ ಏಷ್ಯನ್ ಗೇಮ್ಸ್ ಆಯೋಜಕರಿಗೆ ಪತ್ರ ಬರೆದಿದ್ದ ಐಒಎ, ಅಥ್ಲೀಟ್‌ಗಳ ಹೆಸರು ಸಲ್ಲಿಕೆ ಗಡುವು ವಿಸ್ತರಿಸುವಂತೆ ಕೋರಿತ್ತು. ಹೀಗಾಗಿ ಗಡುವನ್ನು ಜು.22ರ ವರೆಗೆ ವಿಸ್ತರಿಸಲಾಗಿತ್ತು.
ಏಷ್ಯನ್ ಅಥ್ಲೆಟಿಕ್ಸ್: ಕಂಚು ಗೆದ್ದ ಅಭಿಷೇಕ್ ಪಾಲ್
ಬ್ಯಾಂಕಾಕ್: ಇಲ್ಲಿ ಆರಂಭಗೊಂಡ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಮೊದಲ ದಿನವೇ ಪದಕ ಖಾತೆ ತೆರೆದಿದೆ. ಪುರುಷರ 10000 ಮೀ. ನಡಿಗೆ ಸ್ಪರ್ಧೆಯಲ್ಲಿ ಭಾರತದ ಅಭಿಷೇಕ್ ಪಾಲ್ ಕಂಚಿನ ಪದಕ ತಮ್ಮದಾಗಿಸಿಕೊಂಡರು.
ಬುಧವಾರ ನಡೆದ ಕೂಟದ ಸ್ಪರ್ಧೆಯಲ್ಲಿ 25 ವರ್ಷದ ಅಭಿಷೇಕ್ 29 ನಿಮಿಷ 33.26 ಸೆಕೆಂಡ್‌ಗಳಲ್ಲಿ ಗುರಿ ತಲುಪಿ 3ನೇ ಸ್ಥಾನ ಪಡೆದರು. ಜಪಾನ್‌ನ ರೆನ್ ತಜಾವ(29.18:44 ನಿ.) ಚಿನ್ನ, ಕಜಕಸ್ಥಾನದ ಕಿಮುಟಾಯಿ ಶಾದ್ರಕ್(29.31:63 ನಿ.) ಬೆಳ್ಳಿ ಪದಕ ಗೆದ್ದರು.
ರಿಟೈರ್ಡ್ ಆಗಿ 3 ವರ್ಷವಾದ್ರೂ ಕಮ್ಮಿಯಾಗಿಲ್ಲ ಧೋನಿ ಬ್ರ್ಯಾಂಡ್ ವ್ಯಾಲ್ಯೂ..! ಮಹಿ ಸಾವಿರ ಕೋಟಿ ಒಡೆಯ.!
ಇದೇ ವೇಳೆ ಮಹಿಳೆಯರ ಜಾವೆಲಿನ್ ಎಸೆತದಲ್ಲಿ ಅನ್ನು ರಾಣಿ 4ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. 2019ರ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಗೆದ್ದಿದ್ದ ಅವರು ಈ ಬಾರಿ ಕೇವಲ 59.10 ಮೀ. ದೂರಕ್ಕೆ ಜಾವೆಲಿನ್ ಎಸೆದು ನಿರಾಸೆ ಅನುಭವಿಸಿದರು. ಮಹಿಳೆಯರ 1500 ಮೀ. ಓಟದ ಸ್ಫರ್ಧೆಯಲ್ಲಿ ಲಿಲಿ ದಾಸ್ 4.27 ಸೆಕೆಂಡ್‌ಗಳಲ್ಲಿ ಕ್ರಮಿಸಿ 7ನೇ ಸ್ಥಾನಿಯಾದರು. ಮಹಿಳೆಯರ 400 ಮೀ. ರೇಸ್‌ನಲ್ಲಿ ಐಶ್ವರ್ಯಾ ಮಿಶ್ರ, ಪುರುಷರ ವಿಭಾಗದಲ್ಲಿ ರಾಜೇಶ್ ರಮೇಶ್, ಮೊಹಮದ್ ಅಜ್ಮಲ್ ಫೈನಲ್ ಪ್ರವೇಶಿಸಿದ್ದಾರೆ.
ಕುಬ್ಜ ಅಥ್ಲೀಟ್ಸ್‌ಗೆ ಬೀಳ್ಕೊಡುಗೆ
ಬೆಂಗಳೂರು: ಜು.28ರಿಂದ ಆ.5ರ ವರೆಗೆ ಜರ್ಮನಿಯಲ್ಲಿ ನಡೆಯಲಿರುವ 8ನೇ ವಿಶ್ವ ಕುಬ್ಜರ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ತೆರಳಲಿರುವ ಕರ್ನಾಟಕದ ಅಥ್ಲೀಟ್‌ಗಳಿಗೆ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿತ್ತು. ಸಮಾರಂಭದಲ್ಲಿ ಕರ್ನಾಟಕ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್, ರಾಜ್ಯ ಅಂಗವಿಕಲರ ಕ್ರೀಡಾ ಸಂಸ್ಥೆ ಉಪಾಧ್ಯಕ್ಷ, ಪದ್ಮಶ್ರೀ ಕೆ.ವೈ.ವೆಂಕಟೇಶ್, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎಂ.ಆರ್.ಮಹೇಶ್ ಹಾಗೂ ಅಥ್ಲೀಟ್‌ಗಳ ತಂಡದ ವ್ಯವಸ್ಥಾಪಕ ಶಿವಾನಂದ ಗುಂಜಾಳ್ ಉಪಸ್ಥಿತರಿದ್ದರು.
ODI World Cup 2023: ಈಡನ್ ಗಾರ್ಡನ್ಸ್ ಪಂದ್ಯಗಳ ಟಿಕೆಟ್ ಬೆಲೆ ಪ್ರಕಟ..! IPL ಗಿಂತ ವಿಶ್ವಕಪ್ ಟಿಕೆಟ್ ಚೀಪ್
ಡುರಾಂಡ್ ಕಪ್ ಫುಟ್ಬಾಲ್: ‘ಸಿ’ ಗುಂಪಿನಲ್ಲಿ ಬಿಎಫ್‌ಸಿ
ಕೋಲ್ಕತಾ: ಕೋಲ್ಕತಾ ಸೇರಿ ವಿವಿಧ ನಗರಗಳಲ್ಲಿ ಆ.3ರಿಂದ ಸೆ.13ರ ವರೆಗೆ ನಡೆಯಲಿರುವ ಪ್ರತಿಷ್ಠಿತ 132ನೇ ಆವೃತ್ತಿಯ ಡುರಾಂಡ್ ಕಪ್ ಫುಟ್ಬಾಲ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಬೆಂಗಳೂರು ಎಫ್‌ಸಿ ತಂಡ ‘ಸಿ’ ಗುಂಪಿನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ. ಸೋಮವಾರ ಟೂರ್ನಿಯ ಡ್ರಾ ಬಿಡುಗಡೆಗೊಂಡಿತು. ಟೂರ್ನಿಯಲ್ಲಿ 24 ತಂಡಗಳು ಪಾಲ್ಗೊಳ್ಳಲಿದ್ದು, ತಲಾ 4 ತಂಡಗಳ 6 ಗುಂಪುಗಳನ್ನಾಗಿ ವಿಂಗಡಿಸಲಾಗಿದೆ.
ನಾನು 10,000 ಮಹಿಳೆಯರ ಜತೆ ಮಲಗಿದ್ದೇನೆ ಎಂದ ಈ ಫುಟ್ಬಾಲ್ ತಾರೆ..! ಯಾರು ಈ ಭೂಪ?
‘ಸಿ’ ಗುಂಪಿನಲ್ಲಿ ಸುನಿಲ್ ಚೆಟ್ರಿ ನೇತೃತ್ವದ ಬಿಎಫ್‌ಸಿ ಜೊತೆ ಬದ್ಧವೈರಿ ಕೇರಳ ಬ್ಲಾಸ್ಟರ್ಸ್, 2019ರ ಚಾಂಪಿಯನ್ ಗೋಕುಲಂ ಕೇರಳ ಹಾಗೂ ಇಂಡಿಯನ್ ಏರ್‌ಫೋರ್ಸ್ ತಂಡಗಳಿವೆ. 27 ವರ್ಷಗಳ ಬಳಿಕ ಈ ಬಾರಿ ಟೂರ್ನಿಯಲ್ಲಿ ವಿದೇಶಿ ತಂಡಗಳೂ ಪಾಲ್ಗೊಳ್ಳಲಿದ್ದು, ಫೈನಲ್ ಸೇರಿ 43 ಪಂದ್ಯಗಳು ನಡೆಯಲಿವೆ.