Wrestler Protest: ಕುಸ್ತಿ​ಪ​ಟು​ಗಳ ಹೋರಾ​ಟಕ್ಕೆ ರಾಜ​ಕೀಯ ಬಣ್ಣ!


ಜಂತರ್ ಮಂತರ್‌ನಲ್ಲಿ ಮುಂದುವರೆದ ಕುಸ್ತಿಪಟುಗಳ ಪ್ರತಿಭಟನೆ
ಹಲವು ಪಕ್ಷ​ಗಳ ನಾಯ​ಕ​ರಿಂದ ಬೆಂಬಲ
ಬ್ರಿಜ್‌ ವಿರುದ್ಧ ಕೇಸ್‌ಗೆ ಸುಪ್ರೀಂ ಮೊರೆ
 

Wrestlers Protest At Delhi Jantar Mantar now become political touch kvn

ನವ​ದೆ​ಹ​ಲಿ(ಏ.26): ಭಾರ​ತೀಯ ಕುಸ್ತಿ ಫೆಡ​ರೇ​ಶ​ನ್‌(ಡ​ಬ್ಲ್ಯು​ಎ​ಫ್‌​ಐ) ಮಾಜಿ ಅಧ್ಯ​ಕ್ಷ ಬ್ರಿಜ್‌​ಭೂ​ಷಣ್‌ ವಿರು​ದ್ಧದ ಕುಸ್ತಿ​ಪ​ಟು​ಗಳ ಹೋರಾಟ ತೀವ್ರ​ಗೊಂಡಿದ್ದು, ರಾಜ​ಕೀಯ ಬಣ್ಣ ಪಡೆ​ದು​ಕೊಂಡಿ​ದೆ. ಪ್ರಕ​ರಣ ಈಗಾ​ಗಲೇ ಸುಪ್ರೀಂ ಕೋರ್ಚ್‌ ಮೆಟ್ಟಿ​ಲೇ​ರಿದ್ದು, ಈ ನಡುವೆ ಜಂತ​ರ್‌​ಮಂತ​ರ್‌​ನಲ್ಲಿ ಪ್ರತಿ​ಭ​ಟನೆ ನಡೆ​ಸು​ತ್ತಿ​ರುವ ಕುಸ್ತಿ ತಾರೆ​ಗ​ಳನ್ನು ಮಂಗ​ಳ​ವಾರ ಕೆಲ ರಾಜ​ಕೀಯ ನಾಯ​ಕರು ಭೇಟಿ ಮಾಡಿ ಬೆಂಬಲ ಸೂಚಿ​ಸಿ​ದ್ದಾ​ರೆ.

ಹರ್ಯಾಣ ಮಾಜಿ ಸಿಎಂ ಭೂಪಿಂದ​ರ್‌ ಸಿಂಗ್‌ ಹೂಡಾ, ಕಾಂಗ್ರೆಸ್‌ ನಾಯಕ ಉದಿ​ತ್‌ ರಾಜ್‌, ಸಿಪಿಐ ನಾಯಕಿ ಬೃಂದಾ ಕಾರಟ್‌, ಕೃಷಿ ಕಾಯ್ದೆ​ಗಳನ್ನು ವಿರೋ​ಧಿಸಿ ಬೃಹತ್‌ ಪ್ರತಿ​ಭ​ಟನೆ ಆಯೋ​ಜಿ​ಸಿದ್ದ ಭಾರ​ತೀಯ ಕಿಸಾನ್‌ ಯೂನಿ​ಯನ್‌ನ ಪ್ರತಿ​ನಿ​ಧಿ​ಗಳು, ಕಾಂಗ್ರೆಸ್‌, ಆಪ್‌ನ ಕೆಲ ನಾಯ​ಕರು ಕುಸ್ತಿ​ಪ​ಟು​ಗ​ಳನ್ನು ಭೇಟಿ​ಯಾಗಿ ಕೆಲ ಕಾಲ ಧರಣಿ ಸ್ಥಳ​ದಲ್ಲಿ ಕಾಣಿ​ಸಿ​ಕೊಂಡರು. ಜೊತೆಗೆ ಭೋಪಾ​ಲ್‌ನ ಕೆಲ ಮಕ್ಕಳು ತಾವೂ ಕೂಡಿ​ಟ್ಟಿದ್ದ ಹಣ​ವನ್ನು ಕುಸ್ತಿ​ಪ​ಟು​ಗ​ಳಿಗೆ ನೀಡಿದ್ದಾರೆ. ಜನ​ವ​ರಿ​ಯಲ್ಲಿ ಬ್ರಿಜ್‌ ವಿರುದ್ಧ ಗಂಭೀರ ಆರೋ​ಪ​ಗ​ಳನ್ನು ಹೊರಿಸಿ ಹೋರಾಟ ಆರಂಭಿ​ಸಿ​ದಾಗ ರಾಜ​ಕೀಯ ನಾಯ​ಕ​ರನ್ನು ದೂರ​ವಿ​ಟ್ಟಿ​ದ್ದ ಕುಸ್ತಿ​ಪ​ಟು​ಗಳು ಸೋಮ​ವಾರ ರಾಜ​ಕೀಯ ಪಕ್ಷ​ಗಳು ತಮ್ಮ ಹೋರಾಟ ಬೆಂಬ​ಲಿ​ಸು​ವಂತೆ ಕೋರಿ​ದ್ದ​ರು.

ಐಪಿಎಲ್‌ ಪಂದ್ಯದಿಂದ 2 ಕೋಟಿ ರೂ ಜಾಕ್‌ಪಾಟ್, ರಾತ್ರೋರಾತ್ರಿ ಕೋಟ್ಯಾಧೀಶನಾದ ಕೂಲಿ ಕಾರ್ಮಿಕ!

ಬಂಧ​ನಕ್ಕೆ ಪಟ್ಟು: ಬ್ರಿಜ್‌ ವಿರುದ್ಧ ಕೇವಲ ಎಫ್‌​ಐ​ಆರ್‌ ದಾಖ​ಲಿ​ಸಿ​ದರೆ ಸಾಲದು, ಅವ​ರನ್ನು ಬಂಧಿ​ಸ​ಬೇಕು. ಅಲ್ಲಿ ತನಕ ತಮ್ಮ ಹೋರಾಟ ಮುಂದು​ವ​ರಿ​ಯ​ಲಿದೆ ಎಂದು ಕುಸ್ತಿ​ಪ​ಟು​ಗಳು ಎಚ್ಚ​ರಿ​ಸಿ​ದ್ದಾರೆ. ‘ದೂರು ನೀಡಿ​ದ​ವರ ಹೆಸ​ರನ್ನು ಡೆಲ್ಲಿ ಪೊಲೀ​ಸರು ಬ್ರಿಜ್‌ಗೆ ನೀಡಿ​ದ್ದಾರೆ. ದೂರು​ದಾ​ರನ್ನು ಬೆದ​ರಿ​ಸ​ಲಾ​ಗು​ತ್ತಿದೆ. ಆದರೆ ಹೋರಾಟ ಕೈಬಿ​ಡ​ಲ್ಲ’ ಎಂದಿ​ದ್ದಾ​ರೆ.

ಸುಪ್ರೀಂಗೆ ಅರ್ಜಿ: ನಾಡಿದ್ದು ವಿಚಾ​ರ​ಣೆ

ಈಗಾ​ಗಲೇ ಪೊಲೀಸರಿಗೆ ದೂರು ನೀಡ​ಲಾ​ಗಿ​ದ್ದರೂ ಎಫ್‌​ಐ​ಆರ್‌ ದಾಖ​ಲಾ​ಗದ ಹಿನ್ನೆ​ಲೆ​ಯಲ್ಲಿ ಮಂಗ​ಳ​ವಾರ 7 ಕುಸ್ತಿ​ಪ​ಟು​ಗಳು ಸುಪ್ರೀಂ ಕೋರ್ಚ್‌ಗೆ ಅರ್ಜಿ ಸಲ್ಲಿ​ಸಿ​ದ್ದಾರೆ. ಮಂಗ​ಳ​ವಾರ ಅರ್ಜಿ​ದಾ​ರರ ಪರ ವಾದಿ​ಸಿದ ಹಿರಿಯ ವಕೀಲ ಕಪಿಲ್‌ ಸಿಬಲ್‌, ಬ್ರಿಜ್‌​ಭೂ​ಷಣ್‌ ವಿರುದ್ಧ ಪೊಲೀ​ಸರು ಕೂಡಾ ಯಾವುದೇ ಕ್ರಮ​ಕೈ​ಗೊ​ಳ್ಳು​ತ್ತಿಲ್ಲ ಎಂದರು. ಇದಕ್ಕೆ ಪ್ರತಿ​ಕ್ರಿ​ಯಿ​ಸಿದ ಮುಖ್ಯ ನ್ಯಾಯಾ​ಧೀಶ ಡಿ.ವೈ.​ಚಂದ್ರ​ಚೂಡ್‌, ಭಾರ​ತ​ವನ್ನು ಪ್ರತಿ​ನಿ​ಧಿಸಿದ ಅಥ್ಲೀ​ಟ್‌​ಗಳು ಈಗ ಹೋರಾ​ಟ​ಕ್ಕಿ​ಳಿ​ದಿ​ದ್ದಾರೆ. ಇದೊಂದು ಗಂಭೀರ ಪ್ರಕ​ರಣ ಎಂದು ಶುಕ್ರ​ವಾರ ಈ ಬಗ್ಗೆ ವಿಚಾ​ರಣೆ ನಡೆ​ಸು​ವು​ದಾಗಿ ತಿಳಿ​ಸಿ​ದರು. ಬಳಿಕ ಪ್ರಕ​ರ​ಣಕ್ಕೆ ಸಂಬಂಧಿ​ಸಿ​ದಂತೆ ನ್ಯಾಯಾ​ಲಯ, ಡೆಲ್ಲಿ ಪೊಲೀ​ಸ​ರಿಗೆ ನೋಟಿಸ್‌ ಜಾರಿ ಮಾಡಿ​ತು.

ಮೋದಿ ಏಕೆ ಮೌನ: ಭಜ​ರಂಗ್‌ ಆಕ್ರೋ​ಶ

ಇನ್ನು ಪ್ರಕ​ರ​ಣದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಯಾವುದೇ ಪ್ರತಿ​ಕ್ರಿಯೆ ನೀಡ​ದಕ್ಕೆ ಕುಸ್ತಿ​ಪಟು ಭಜ​ರಂಗ್‌ ಪೂನಿಯಾ ಆಕ್ರೋಶ ವ್ಯಕ್ತ​ಪ​ಡಿ​ಸಿದ್ದು, ಅಥ್ಲೀ​ಟ್‌​ಗಳು ಪದಕ ಗೆದ್ದಾಗ ನೀವು ಅವರ ಜೊತೆ​ಗಿ​ರು​ತ್ತೀರಿ. ಆದರೆ ಈಗ ಏಕೆ ಮೌನ​ವಾ​ಗಿ​ದ್ದೀರಿ ಎಂದು ಪ್ರಶ್ನಿ​ಸಿ​ದ್ದಾರೆ. ಅಲ್ಲದೇ, ಈಗ ಕ್ರೀಡಾ ಸಚಿ​ವಾ​ಲ​ಯ, ಭಾರ​ತೀಯ ಒಲಿಂಪಿಕ್ಸ್‌ ಸಂಸ್ಥೆ ಮೇಲೆ ವಿಶ್ವಾದ ಕಳೆ​ದು​ಕೊಂಡಿ​ದ್ದೇವೆ. ಆದರೆ ನ್ಯಾಯಾಂಗದ ಮೇಲೆ ನಂಬಿಕೆ ಇದೆ ಎಂದಿ​ದ್ದಾ​ರೆ.

ಡೆಲ್ಲಿ ಪೊ​ಲೀ​ಸ​ರಿಗೆ ಸುಪ್ರೀಂ ನೋಟಿಸ್‌

ಪ್ರಕ​ರ​ಣಕ್ಕೆ ಸಂಬಂಧಿ​ಸಿ​ದಂತೆ ಪೊಲೀ​ಸ​ರಿಗೆ ದೂರು ನೀಡಿ​ದ್ದರೂ ಈವ​ರೆಗೆ ಎಫ್‌​ಐ​ಆರ್‌ ದಾಖ​ಲಾ​ಗಿಲ್ಲ. ಹೀಗಾಗಿ ಸುಪ್ರೀಂಕೋರ್ಚ್‌ ಮಧ್ಯ​ಪ್ರ​ವೇ​ಶಿಸಿದ್ದು, ಡೆಲ್ಲಿ ಪೊಲೀ​ಸ​ರಿಗೆ ನೋಟಿಸ್‌ ನೀಡಿದೆ. ಮಂಗ​ಳ​ವಾರ 7 ಕುಸ್ತಿ​ಪ​ಟು​ಗಳು ಸುಪ್ರೀಂಗೆ ಅರ್ಜಿ ಸಲ್ಲಿ​ಸಿ​ದ್ದರು. ಅವರ ಪರ ವಾದಿ​ಸಿದ ಹಿರಿಯ ವಕೀಲ ಕಪಿಲ್‌ ಸಿಬಲ್‌, ಬ್ರಿಜ್‌​ಭೂ​ಷಣ್‌ ವಿರುದ್ಧ ಪೊಲೀ​ಸರು ಕೂಡಾ ಯಾವುದೇ ಕ್ರಮ​ಕೈ​ಗೊ​ಳ್ಳು​ತ್ತಿಲ್ಲ ಎಂದರು. ಇದಕ್ಕೆ ಪ್ರತಿ​ಕ್ರಿ​ಯಿ​ಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.​ಚಂದ್ರ​ಚೂಡ್‌, ಭಾರ​ತ​ವನ್ನು ಪ್ರತಿ​ನಿ​ಧಿಸಿದ ಅಥ್ಲೀ​ಟ್‌​ಗಳು ಈಗ ಹೋರಾ​ಟ​ಕ್ಕಿ​ಳಿ​ದಿ​ದ್ದಾರೆ. ಇದೊಂದು ಗಂಭೀರ ಪ್ರಕ​ರಣ ಎಂದು ಶುಕ್ರ​ವಾರ ಈ ಬಗ್ಗೆ ವಿಚಾ​ರಣೆ ನಡೆ​ಸು​ವು​ದಾಗಿ ತಿಳಿ​ಸಿ​ದರು.

Latest Videos
Follow Us:
Download App:
  • android
  • ios