ಕುಸ್ತಿ ಗುತ್ತಿಗೆ: ವಿನೇಶ್, ಭಜರಂಗ್‌ಗೆ ‘ಎ’ ದರ್ಜೆ
ಒಲಿಂಪಿಕ್ಸ್ ಪದಕ ವಿಜೇತ ಕುಸ್ತಿಪಟುಗಳಾದ ಸುಶೀಲ್ ಕುಮಾರ್ ಹಾಗೂ ಸಾಕ್ಷಿ ಮಲಿಕ್‌ಗೆ ‘ಬಿ’ ದರ್ಜೆಯಲ್ಲಿ ಸ್ಥಾನ ಸಿಕ್ಕಿದ್ದು, ಇವರಿಗೆ 20 ಲಕ್ಷ ರುಪಾಯಿ ನೆರವು ಸಿಗಲಿದೆ. ಇಬ್ಬರೂ ಸಹ ಇತ್ತೀಚಿನ ದಿನಗಳಲ್ಲಿ ಉತ್ತಮ ಪ್ರದರ್ಶನ ತೋರದಿರುವುದೇ ಇದಕ್ಕೆ ಕಾರಣ.
ಗೊಂಡಾ(ಉತ್ತರ ಪ್ರದೇಶ): ಇದೇ ಮೊದಲ ಬಾರಿಗೆ ಭಾರತೀಯ ಕುಸ್ತಿ ಫೆಡರೇಷನ್ ಕೇಂದ್ರ ಗುತ್ತಿಗೆ ನೀಡಿದ್ದು, ತಾರಾ ಕುಸ್ತಿಪಟುಗಳಾದ ಭಜರಂಗ್ ಪೂನಿಯಾ, ವಿನೇಶ್ ಫೋಗಾಟ್ ಹಾಗೂ ಪೂಜಾ ದಂಢಾ ‘ಎ’ ದರ್ಜೆಯಲ್ಲಿ ಸ್ಥಾನ ಪಡೆದಿದ್ದಾರೆ.
ಈ ಮೂವರಿಗೆ ವರ್ಷಕ್ಕೆ 30 ಲಕ್ಷ ರುಪಾಯಿ ನೆರವು ದೊರೆಯಲಿದೆ. ಇದೇ ವೇಳೆ ಒಲಿಂಪಿಕ್ಸ್ ಪದಕ ವಿಜೇತ ಕುಸ್ತಿಪಟುಗಳಾದ ಸುಶೀಲ್ ಕುಮಾರ್ ಹಾಗೂ ಸಾಕ್ಷಿ ಮಲಿಕ್‌ಗೆ ‘ಬಿ’ ದರ್ಜೆಯಲ್ಲಿ ಸ್ಥಾನ ಸಿಕ್ಕಿದ್ದು, ಇವರಿಗೆ 20 ಲಕ್ಷ ರುಪಾಯಿ ನೆರವು ಸಿಗಲಿದೆ. ಇಬ್ಬರೂ ಸಹ ಇತ್ತೀಚಿನ ದಿನಗಳಲ್ಲಿ ಉತ್ತಮ ಪ್ರದರ್ಶನ ತೋರದಿರುವುದೇ ಇದಕ್ಕೆ ಕಾರಣ.
ಗುತ್ತಿಗೆ ಒಂದು ವರ್ಷದ ಅವಧಿಗಾಗಿದೆ. ‘ಸಿ ಹಾಗೂ ‘ಡಿ’ ದರ್ಜೆಯನ್ನು ಪ್ರಕಟಿಸಲಾಗಿದೆ.