ನವದೆಹಲಿ[ಆ.25]: ಕೆಲದಿನಗಳ ಹಿಂದಷ್ಟೇ ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್’ನಲ್ಲಿ ಚಿನ್ನ ಗೆದ್ದು ಸಾಧನೆ ಮಾಡಿದ್ದ ಮಹಿಳಾ ಕುಸ್ತಿಪಟು ವಿನೀಶಾ ಪೋಗತ್ ಇದೀಗ ತಾವು ನಿಶ್ಚಿತಾರ್ಥ ಮಾಡಿಕೊಂಡಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮ ಹಂಚಿಕೊಂಡಿದ್ದಾರೆ.

ಹೌದು, ತನ್ನ ಬಹುಕಾಲದ ಗೆಳೆಯ ಸೋಮ್’ವೀರ್ ರಾತಿ ಜತೆ ನಿಶ್ಚಿತಾರ್ಥ ಮಾಡಿಕೊಂಡಿರುವುದಾಗಿ ಪೋಗತ್ ತಿಳಿಸಿದ್ದು, ಇದು ನಾನು ತೆಗೆದುಕೊಳ್ಳುತ್ತಿರುವ ಅತಿ ಮಹತ್ವದ ನಿರ್ಧಾರವಾಗಿದೆ ಎಂದು ಇನ್’ಸ್ಟಾಗ್ರಾಂನಲ್ಲಿ ತಿಳಿಸಿದ್ದಾರೆ.

 

The best decision I ever made! Glad you pinned me for life 😍❤️

A post shared by Vinesh Phogat (@vineshphogat) on Aug 22, 2018 at 12:12am PDT

ಈ ಮೊದಲು ಏಷ್ಯನ್ ಗೇಮ್ಸ್’ನಲ್ಲಿ ಯುವ ಜಾವಲಿನ್ ಪಟು ನೀರಜ್ ಛೋಪ್ರಾ ಅವರೊಂದಿಗೆ ವಿನೀಶಾ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದರು. ಇದಾದ ಬೆನ್ನಲ್ಲೇ ಖಾಸಗಿ ಪತ್ರಿಕೆಯೊಂದು ವಿನೀಶಾ ಹಾಗೂ ನೀರಜ್ ಇನ್ನಷ್ಟು ಹತ್ತಿರವಾಗುತ್ತಿದ್ದಾರೆ ಎಂದು ಸುದ್ದಿ ಮಾಡಿತ್ತು. ಇದಾದ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿದ್ದ ವಿನೀಶಾ, ಈ ಸುದ್ದಿ ಕೇಳಿ ನಿಜಕ್ಕೂ ನೋವಾಯಿತು. ದೇಶದ ಒಬ್ಬ ಸ್ಫರ್ಧಿ ಪ್ರದರ್ಶನ ತೋರುವಾಗ ಮತ್ತೊಬ್ಬ ಆಟಗಾರ ಸಪೋರ್ಟ್ ಮಾಡುವುದು ಸಹಜ. ಇದರ ಹೊರತಾಗಿ ಅನ್ಯ ಅರ್ಥ ಕಲ್ಪಸಿಕೊಳ್ಳುವ ಅಗತ್ಯ ಇಲ್ಲ ಎಂದಿದ್ದರು.

ಜಕಾರ್ತದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್’ನಲ್ಲಿ ವಿನೀಶಾ ಪೋಗತ್ ಮಹಿಳೆಯರ 50 ಕೆ.ಜಿ ಪ್ರೀಸ್ಟೈಲ್ ಕುಸ್ತಿಯಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಸೋಮವೀರ್ ರಾತಿ, ರಾಜಸ್ಥಾನದಲ್ಲಿ ರೈಲ್ವೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಷ್ಟ್ರೀಯ ಚಾಂಪಿಯನ್’ಶಿಪ್’ನಲ್ಲಿ ಕಂಚಿನ ಪದಕ ಜಯಿಸಿದ್ದಾರೆ.