Asianet Suvarna News Asianet Suvarna News

ಕುಸ್ತಿ ವಿಶ್ವ ಚಾಂಪಿಯನ್‌ಶಿಪ್‌: ಭಾರತೀಯರಿಗೆ ನಿರಾಸೆ!

ಫ್ರೀ ಸ್ಟೈಲ್‌ ವಿಭಾಗದಲ್ಲಿ ಭಾರತ ಪುರುಷರು ಬರಿಗೈನಲ್ಲಿ ವಾಪಸಾಗಲಿದ್ದಾರೆ. ಒಟ್ಟು 10 ಸ್ಪರ್ಧಿಗಳ ಪೈಕಿ ಯಾರೊಬ್ಬರೂ ಪದಕ ಗೆಲ್ಲಲಿಲ್ಲ. ಯಾರಿಗೂ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆಯೂ ದೊರೆಯಲಿಲ್ಲ. 

World Wrestling Championships Indian mens westlers fail to win medal kvn
Author
First Published Sep 20, 2023, 10:40 AM IST

ಬೆಲ್ಗ್ರೇಡ್‌(ಸರ್ಬಿಯಾ): ಇಲ್ಲಿ ನಡೆಯುತ್ತಿರುವ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಭಾರತೀಯರಿಂದ ನೀರಸ ಪ್ರದರ್ಶನ ಮುಂದುವರಿದಿದೆ. ಫ್ರೀ ಸ್ಟೈಲ್‌ ವಿಭಾಗದಲ್ಲಿ ಭಾರತ ಪುರುಷರು ಬರಿಗೈನಲ್ಲಿ ವಾಪಸಾಗಲಿದ್ದಾರೆ. ಒಟ್ಟು 10 ಸ್ಪರ್ಧಿಗಳ ಪೈಕಿ ಯಾರೊಬ್ಬರೂ ಪದಕ ಗೆಲ್ಲಲಿಲ್ಲ. ಯಾರಿಗೂ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆಯೂ ದೊರೆಯಲಿಲ್ಲ. 

Asian Games 2023: ಕಾಂಬೋಡಿಯಾ ಬಗ್ಗುಬಡಿದು ಶುಭಾರಂಭ ಮಾಡಿದ ಭಾರತ ವಾಲಿಬಾಲ್ ತಂಡ

ಇನ್ನು ಮಹಿಳಾ ವಿಭಾಗದಲ್ಲಿ ಮಂಗಳವಾರ ಭಾರತದ ನಾಲ್ವರು ಪದಕ ಸುತ್ತಿಗೆ ಪ್ರವೇಶಿಸಲು ವಿಫಲರಾದರು. 50 ಕೆ.ಜಿ. ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ ನೀಲಮ್‌, 65 ಕೆ.ಜಿ. ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ ಅಂತಿಮ್‌ ಕುಂಡು ಸೋಲು ಕಂಡರೆ, 57 ಕೆ.ಜಿ. ಹಾಗೂ 76 ಕೆ.ಜಿ. ವಿಭಾಗಗಳ 2ನೇ ಸುತ್ತಿನಲ್ಲಿ ಕ್ರಮವಾಗಿ ಸಾರಿಕಾ ಹಾಗೂ ದಿವ್ಯಾ ಕಾಕ್ರನ್‌ ಪರಾಭವಗೊಂಡರು. ಈ ನಾಲ್ವರಿಗೂ ರಿಪಿಕೇಜ್‌ ಸುತ್ತಿಗೆ ಪ್ರವೇಶಿಸುವ ಅವಕಾಶವೂ ಸಿಗಲಿಲ್ಲ. ಮಹಿಳಾ ವಿಭಾಗದಲ್ಲೂ ಭಾರತ 10 ಕುಸ್ತಿಪಟುಗಳನ್ನು ಕಣಕ್ಕಿಳಿಸಿದೆ.

ನನ್ನ ವಿರುದ್ಧ ಯಾರೋ ಪಿತೂರಿ ನಡೆಸುತ್ತಿದ್ದಾರೆ: ಕುಸ್ತಿಪಟು ಅಂತಿಮ್‌!

ಚಂಡೀಗಢ(ಸೆ.20): ತಾರಾ ಕುಸ್ತಿಪಟು ಅನ್ಶು ಮಲಿಕ್‌ರ ಫೋಟೋವನ್ನು ದುರ್ಬಳಕೆ ಮಾಡಿಕೊಂಡು ಸಾಮಾಜಿಕ ತಾಣಗಳಲ್ಲಿ ವಿಡಿಯೋ ಹರಿಬಿಟ್ಟು ವೈರಲ್‌ಗೊಳಿಸಿದ ಇಬ್ಬರು ಕಿಡಿಗೇಡಿಗಳನ್ನು ಪೊಲೀಸರು ಬಂಧಿಸಿದ್ದಾರೆ. ವಿಡಿಯೋದಲ್ಲಿ ಇರುವುದು ಅಂತಿಮ್‌ ಅಲ್ಲ ಎಂದು ಸ್ಪಷ್ಟಪಡಿಸಿರುವ ಪೊಲೀಸರು, ಈ ಕೃತ್ಯದ ಹಿಂದಿರುವ ಉದ್ದೇಶದ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕುತ್ತಿರುವುದಾಗಿ ತಿಳಿಸಿದ್ದಾರೆ. 

ಘಟನೆಗೆ ಸಂಬಂಧಿಸಿ ತಮಗಾಗಿರುವ ನೋವನ್ನು ಇನ್‌ಸ್ಟಾಂಗ್ರಾಂನಲ್ಲಿ ವಿಡಿಯೋವೊಂದನ್ನು ಹಾಕುವ ಮೂಲಕ ತೋಡಿಕೊಂಡಿರುವ ಅಂತಿಮ್‌, ‘ನನ್ನ ವಿರುದ್ಧ ಯಾರೋ ಪಿತೂರಿ ನಡೆಸುತ್ತಿದ್ದಾರೆ. ನನ್ನ ಹಾಗೂ ಕುಟುಂಬದ ಮಾನಹಾನಿ ನಡೆಸುವ ಯತ್ನ ಇದಾಗಿದ್ದು, ನಾವು ತೀವ್ರವಾಗಿ ನೊಂದಿದ್ದೇವೆ. ವಿಡಿಯೋದಲ್ಲಿರುವುದು ನಾನ್ನಲ್ಲ ಎನ್ನುವುದು ಸ್ಪಷ್ಟವಾಗಿ ಕಾಣುತ್ತಿದ್ದರೂ ಹಲವರು ಕೆಟ್ಟದಾಗಿ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಈ ಆಘಾತದಿಂದ ನಾನು ಹೊರಬರಲು ಸಾಕಷ್ಟು ಸಮಯ ಹಿಡಿಯಬಹುದು’ ಎಂದಿದ್ದಾರೆ.

ಹಾಕಿ ವಿಶ್ವ ರ್‍ಯಾಂಕಿಂಗ್‌: 3ನೇ ಸ್ಥಾನಕ್ಕೆ ಭಾರತ

ಲುಸ್ಸಾನ್‌(ಸ್ವಿಜರ್‌ಲೆಂಡ್‌): ಭಾರತ ಪುರುಷರ ಹಾಕಿ ತಂಡ ಒಂದು ವರ್ಷಕ್ಕೂ ಹೆಚ್ಚು ಸಮಯದ ಬಳಿಕ ವಿಶ್ವ ರ್‍ಯಾಂಕಿಂಗ್‌ ಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದೆ. 2022ರಲ್ಲಿ ಅಗ್ರ-3ರಿಂದ ಕೆಳಗಿಳಿದಿದ್ದ ತಂಡ, ಇತ್ತೀಚೆಗೆ ನಡೆದ ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಅಜೇಯವಾಗಿ ಚಾಂಪಿಯನ್‌ ಆದ ಪರಿಣಾಮ ಪಟ್ಟಿಯಲ್ಲಿ ಏರಿಕೆ ಕಂಡಿದೆ. ನೆದರ್‌ಲೆಂಡ್ಸ್‌ ಮೊದಲ ಸ್ಥಾನದಲ್ಲಿದ್ದು, ಬೆಲ್ಜಿಯಂ 2ನೇ ಸ್ಥಾನದಲ್ಲಿ ಮುಂದುವರಿದಿದೆ. ಮಹಿಳೆಯರ ವಿಶ್ವ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಭಾರತ ಒಂದು ಸ್ಥಾನ ಮೇಲೇರಿ 7ನೇ ಸ್ಥಾನ ಪಡೆದಿದೆ.

Latest Videos
Follow Us:
Download App:
  • android
  • ios