ವಿಶ್ವ ಸಸ್ಯಾಹಾರಿ ದಿನ: ಇಲ್ಲಿದೆ ದಿಗ್ಗಜ 6 ಸಸ್ಯಾಹಾರಿ ಕ್ರೀಡಾಪಟುಗಳು!
ಅಕ್ಟೋಬರ್ 1 ವಿಶ್ವ ಸಸ್ಯಾಹಾರಿಗಳ ದಿನ. ಸಸ್ಯಾಹಾರವನ್ನೇ ಸೇವಿಸಿ ಕ್ರೀಡೆಯಲ್ಲಿ ಹಲವು ದಿಗ್ಗಜ ಕ್ರೀಡಾಪಟುಗಳು ಸಾಧನೆ ಮಾಡಿದ್ದಾರೆ. ಸಂಪೂರ್ಣ ಸಸ್ಯಾಹಾರಿಯಾಗಿ ಕ್ರೀಡೆಯಲ್ಲಿ ಮಿಂಚಿದ 6 ಕ್ರೀಡಾಪಟುಗಳ ವಿವರ ಇಲ್ಲಿದೆ.
ಬೆಂಗಳೂರು(ಅ.01): ಅಕ್ಟೋಬರ್ 1 ವಿಶ್ವ ಸಸ್ಯಾಹಾರಿ ದಿನ. ವಿದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಸಸ್ಯಾಹಾರಿಗಳ ಸಂಖ್ಯೆ ಹೆಚ್ಚಿದೆ. ಇಂದಿನ ವಿಶ್ವ ಸಸ್ಯಾಹಾರಿ ದಿನದಂದು ಕ್ರೀಡೆಯಲ್ಲಿ ಸಾಧನೆ ಮಾಡಿದ ಕ್ರೀಡಾಪಟಗಳ ವಿವರ ಇಲ್ಲಿದೆ.
ವೀರೇಂದ್ರೆ ಸೆಹ್ವಾಗ್ -ಕ್ರಿಕೆಟಿಗ
ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅದೆಂತಾ ಸ್ಫೋಟಕ ಬ್ಯಾಟ್ಸ್‌ಮನ್ ಅನ್ನೋದನ್ನ ಬಿಡಿಸಿ ಹೇಳಬೇಕಾಗಿಲ್ಲ. ಆದರೆ ವೀರೂ ಸಸ್ಯಾಹಾರಿ ಅನ್ನೋದು ಹಲವರಿಗೆ ತಿಳಿದಿಲ್ಲ. ಸೆಹ್ವಾಗ್ ಭರ್ಜರಿ ಸಿಕ್ಸರ್ ಹಿಂದೆ ಸಸ್ಯಾಹಾರದ ಶಕ್ತಿ ಇದೆ.
ಸುಶೀಲ್ ಕುಮಾರ್ -ಕುಸ್ತಿಪಟು
ಭಾರತದ ಕುಸ್ತಿಪಟು ಸುಶೀಲ್ ಕುಮಾರ್ ಕೂಡ ಸಸ್ಯಾಹಾರಿ. ಹೆಚ್ಚಿನ ಕುಸ್ತಿಪಟುಗಳು ಮಾಂಸಾಹಾರಿಗಳಾಗಿರುತ್ತಾರೆ. ಕಾರಣ ಅವರ ದೇಹಕ್ಕೆ ಹೆಚ್ಚಿನ ಶಕ್ತಿ ಹಾಗೂ ಪ್ರೊಟಿನ್ ಅಗತ್ಯವಿದೆ. ಆದರೆ ಸುಶೀಲ್ ಇದಕ್ಕೆ ವಿರುದ್ಧ.
ವಿಶ್ವನಾಥ್ ಆನಂದ್- ಚೆಸ್
ಚೆಸ್ ಮಾಸ್ಟರ್ ವಿಶ್ವನಾಥ್ ಆನಂದ್ ಮೆದುಳಿ ಶಕ್ತಿ ಹಿಂದೆ ಸಸ್ಯಾಹಾರವಿದೆ. ವಿಶ್ವನಾಥ್ ಆನಂದ್ ಕೂಡ ಸಂಪೂರ್ಣ ಸಸ್ಯಾಹಾರಿಯಾಗಿದ್ದಾರೆ.
ಮೈಕ್ ಟೈಸನ್- ಬಾಕ್ಸರ್
ಅಮೇರಿಕಾದ ಖ್ಯಾತ ಬಾಕ್ಸರ್ ಮೈಕ್ ಟೈಸನ್ ಹೆಸರು ಕೇಳಿದರಿಲ್ಲ. ಒಂದೊಂದೇ ಪಂಚ್ ಮೂಲಕ ಎದುರಾಳಿನ್ನ ಹೊಡೆದುರುಳಿಸಿದ ಟೈಸನ್ ಕೂಡ ಸಂಪೂರ್ಣ ಸಸ್ಯಹಾರಿ.
ವೀನಸ್ ವಿಲಿಯಮ್ಸ್- ಟೆನಿಸ್
ಅಮೇರಿಕಾ ಟೆನಿಸ್ ತಾರೆ ಸೆರೆನಾ ವಿಲಿಯಮ್ಸ್ ಸಹೋದರಿ ವೀನಸ್ ವಿಲಿಯಮ್ಸ್ ಸಂಪೂರ್ಣ ಸಸ್ಯಾಹಾರಿಯಾಗಿದ್ದಾರೆ.
ಗ್ರೆಗ್ ಚಾಪೆಲ್- ಕ್ರಿಕೆಟಿಗ
ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಟೀಂ ಇಂಡಿಯಾ ಮಾಜಿ ಕೋಚ್ ಗ್ರೆಗ್ ಚಾಪೆಲ್ ಕೂಡ ಸಸ್ಯಾಹಾರಿಯಾಗಿದ್ದಾರೆ.