36 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಅನಾಯಾಸವಾಗಿ ಸಿಂಧು ಗೆಲುವಿನ ನಗೆ ಬೀರಿದರು. ‘ಎ’ ಗುಂಪಿನಲ್ಲಿರುವ ಸಿಂಧು, ಜಪಾನ್‌'ನ ಸಯಾಕ ಸಾಟೊ ವಿರುದ್ಧ 21-13, 21-12 ನೇರ ಗೇಮ್‌'ಗಳಲ್ಲಿ ಭರ್ಜರಿ ಜಯ ಸಾಧಿಸಿದರು.
ದುಬೈ(ಡಿ.14): ರಿಯೊ ಬೆಳ್ಳಿಪದಕ ವಿಜೇತೆ ಪಿ.ವಿ. ಸಿಂಧು ದುಬೈ ಸೂಪರ್ ಸೀರೀಸ್ ಫೈನಲ್ ಪಂದ್ಯಾವಳಿಯಲ್ಲಿ ನಾಲ್ಕರಘಟ್ಟಕ್ಕೆ ಲಗ್ಗೆಯಿಟ್ಟಿದ್ದಾರೆ.
36 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಅನಾಯಾಸವಾಗಿ ಸಿಂಧು ಗೆಲುವಿನ ನಗೆ ಬೀರಿದರು. ‘ಎ’ ಗುಂಪಿನಲ್ಲಿರುವ ಸಿಂಧು, ಜಪಾನ್'ನ ಸಯಾಕ ಸಾಟೊ ವಿರುದ್ಧ 21-13, 21-12 ನೇರ ಗೇಮ್'ಗಳಲ್ಲಿ ಭರ್ಜರಿ ಜಯ ಸಾಧಿಸಿದರು. ಇನ್ನು ಶುಕ್ರವಾರ ನಡೆಯಲಿರುವ ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಸಿಂಧು ಜಪಾನ್'ನ ಮತ್ತೋರ್ವ ಆಟಗಾರ್ತಿ ಅಕಾನೆ ಯಮಗುಚಿ ವಿರುದ್ಧ ಸೆಣಸಲಿದ್ದಾರೆ.
ಇದಕ್ಕೂ ಮೊದಲು ಪುರುಷರ ಸಿಂಗಲ್ಸ್'ನಲ್ಲಿ ಭಾರತದ ಅನುಭವಿ ಶಟ್ಲರ್ ಕೆ. ಶ್ರೀಕಾಂತ್ ಮತ್ತೊಮ್ಮೆ ನಿರಾಸೆ ಅನುಭವಿಸಿ ಟೂರ್ನಿಯಿಂದಲೇ ಹೊರಬಿದ್ದರು. ಇಂದು ನಡೆದ ‘ಬಿ’ ಗುಂಪಿನ 2ನೇ ಪಂದ್ಯದಲ್ಲಿ ಶ್ರೀಕಾಂತ್, ತೈಪೆಯ ಚೌ ಟಿಯಾನ್ ಚೆನ್ ವಿರುದ್ಧ 18-21, 18-21ರಲ್ಲಿ ರೋಚಕ ಸೋಲು ಕಂಡು ನಿರಾಸೆ ಅನುಭವಿಸಿದರು.
ನಿನ್ನೆ(ಬುಧವಾರ) ನಡೆದ ಮೊದಲ ಪಂದ್ಯದಲ್ಲಿ ಡೆನ್ಮಾರ್ಕ್ನ ವಿಕ್ಟರ್ ಅಕ್ಸೆಲ್ಸೆನ್ ವಿರುದ್ಧ ಶ್ರೀಕಾಂತ್ ಸೋಲು ಕಂಡಿದ್ದರು.
