ಹರ್ಮನ್ ಬ್ಯಾಟಿಂಗ್ ನೋಡಿದ ಕ್ರಿಕೆಟ್ ಜಗತ್ತು ಪ್ರತಿಕ್ರಿಯಿಸಿದ ಪರಿಯಿದು..
ಬೆಂಗಳೂರು(ಜು.21) ಹರ್ಮನ್ ಪ್ರೀತ್ ಕೌರ್ ಭರ್ಜರಿ ಶತಕದ ಮೂಲಕ ವನಿತೆಯರ ಟೀಂ ಇಂಡಿಯಾವನ್ನು ಫೈನಲ್'ಗೇರಿಸಿದ್ದಾರೆ. ಹರ್ಮನ್ ಬ್ಯಾಟಿಂಗ್'ಗೆ ಅಭಿನಂದನೆಗಳ ಮಹಾಪೂರವೇ ಹರಿಸು ಬರುತ್ತಿದೆ.
ಬಲಿಷ್ಟ ಆಸೀಸ್ ಬೌಲಿಂಗ್ ಪಡೆಯನ್ನು ನಿರಾಯಾಸವಾಗಿ ದಂಡಿಸಿದ ಹರ್ಮನ್'ಪ್ರೀತ್ ಅಜೇಯ 171 ರನ್ ಸಿಡಿಸಿದರು. ಅವರ ಸ್ಫೋಟಕ ಬ್ಯಾಟಿಂಗ್'ನಲ್ಲಿ 20 ಬೌಂಡರಿ ಹಾಗೂ 7 ಅತ್ಯಾಕರ್ಷಕ ಸಿಕ್ಸರ್'ಗಳೂ ಸೇರಿದ್ದವು.
ಹರ್ಮನ್'ಪ್ರೀತ್ ಶತಕದ ನೆರವಿನಿಂದ ಆಸ್ಟ್ರೇಲಿಯಾ ತಂಡವನ್ನು 36 ರನ್'ಗಳಿಂದ ಮಣಿಸಿದ ವನಿತೆಯರ ಟೀಂ ಭರ್ಜರಿಯಾಗಿ ಫೈನಲ್ ಪ್ರವೇಶಿಸಿದೆ. ಹರ್ಮನ್ ಬ್ಯಾಟಿಂಗ್ ನೋಡಿದ ಕ್ರಿಕೆಟ್ ಜಗತ್ತು ಪ್ರತಿಕ್ರಿಯಿಸಿದ ಪರಿಯಿದು...
