Asianet Suvarna News Asianet Suvarna News

2019ರ ವಿಶ್ವಕಪ್‌ ಆಡುತ್ತಿರುವ ಟಾಪ್ 5 ಹಿರಿಯ ಆಟಗಾರರಿವರು

12ನೇ ಆವೃತ್ತಿಯ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಹಲವು ಅನುಭವಿ ಕ್ರಿಕೆಟಿಗರು ಕಣಕ್ಕಿಳಿಯುತ್ತಿದ್ದಾರೆ. ಇವರಲ್ಲಿ ಅತಿ ಹಿರಿಯ ಟಾಪ್ 5 ಕ್ರಿಕೆಟಿಗರನ್ನು ಸುವರ್ಣನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ 

World Cup 2019 5 oldest players who will be featuring in this edition of the tournament
Author
Bengaluru, First Published May 30, 2019, 2:12 PM IST

2019ರ ಐಸಿಸಿ ಏಕದಿನ ವಿಶ್ವಕಪ್ ಹಲವು ಹಿರಿಯ, ಅನುಭವಿ ಆಟಗಾರರ ಆಟಕ್ಕೆ ಸಾಕ್ಷಿಯಾಗಲಿದೆ. ಆ ಪೈಕಿ ಅಗ್ರ 5 ಹಿರಿಯ ಆಟಗಾರರು ಯಾರು? ಯಾವ ತಂಡದವರು. ಇಲ್ಲಿದೆ ವಿವರ

1. ಇಮ್ರಾನ್ ತಾಹಿರ್

World Cup 2019 5 oldest players who will be featuring in this edition of the tournament
ದಕ್ಷಿಣ ಆಫ್ರಿಕಾದ ಲೆಗ್ ಸ್ಪಿನ್ನರ್ ಇಮ್ರಾನ್ ತಾಹಿರ್, 2019ರ ವಿಶ್ವಕಪ್‌ನಲ್ಲಿ ಆಡಲಿರುವ ಅತಿಹಿರಿಯ ಆಟಗಾರ. ತಾಹಿರ್‌ಗೀಗ 40 ವರ್ಷ ವಯಸ್ಸಾಗಿದ್ದು, ಈಗಲೂ ಅವರ ವಿಕೆಟ್ ಕಬಳಿಸುವ ಕಲೆ, ವಿಕೆಟ್ ಕಿತ್ತಾಗ ಸಂಭ್ರಮಿಸುವ ರೀತಿ ಎಲ್ಲರನ್ನೂ ಆಕರ್ಷಿಸುತ್ತದೆ. ಇಮ್ರಾನ್ ತಾಹಿರ್ 98 ಪಂದ್ಯಗಳನ್ನಾಡಿ 162 ವಿಕೆಟ್ ಕಬಳಿಸಿದ್ದಾರೆ.

2. ಕ್ರಿಸ್ ಗೇಲ್

World Cup 2019 5 oldest players who will be featuring in this edition of the tournament
ಕ್ರಿಕೆಟ್ ಲೋಕದ ಸಿಕ್ಸ್ ಮಷಿನ್ ವಿಂಡೀಸ್‌ನ ಕ್ರಿಸ್ ಗೇಲ್, ಈ ವಿಶ್ವಕಪ್‌ನಲ್ಲಿ ಆಡಲಿರುವ 2ನೇ ಅತಿ ಹಿರಿಯ ಆಟಗಾರ. 39 ವರ್ಷದ ಗೇಲ್ ಈಗಲೂ ಎದುರಾಳಿಗಳಲ್ಲಿ ನಡುಕ ಹುಟ್ಟಿಸಬಲ್ಲರು. ಅಭಿಮಾನಿಗಳು ಗೇಲ್ ಧಮಾಕಕ್ಕಾಗಿ ಕಾಯುತ್ತಿದ್ದಾರೆ. ಒಟ್ಟು 289 ಪಂದ್ಯಗಳನ್ನಾಡಿರುವ ಗೇಲ್ 10,151 ರನ್ ಚಚ್ಚಿದ್ದಾರೆ. ಇನ್ನು ಬೌಲಿಂಗ್ ನಲ್ಲಿ ಗೇಲ್ 167 ವಿಕೆಟ್ ಕಬಳಿಸಿ ಮಿಂಚಿದ್ದಾರೆ.

3. ಮೊಹಮದ್ ಹಫೀಜ್

World Cup 2019 5 oldest players who will be featuring in this edition of the tournament
ಪಾಕಿಸ್ತಾನದ ಮಾಜಿ ನಾಯಕ, ಹಿರಿಯ ಬ್ಯಾಟ್ಸ್‌ಮನ್ ಮೊಹಮದ್ ಹಫೀಜ್ ಸದ್ದಿಲ್ಲದೆ ಪಂದ್ಯ ಮುಗಿಸುವ ಕಲೆ ಹೊಂದಿರುವ ಆಟಗಾರ. ಹಲವು ವರ್ಷಗಳಿಂದ ಪಾಕ್ ಬ್ಯಾಟಿಂಗ್ ಬೆನ್ನೆಲುಬಾಗಿರುವ ಹಫೀಜ್ ತಂಡಕ್ಕೆ ಮತ್ತೆ ಆಸರೆಯಾಗುವ ವಿಶ್ವಾಸದಲ್ಲಿದ್ದಾರೆ. ಹಫೀಜ್ 210 ಪಂದ್ಯಗಳನ್ನಾಡಿ 6361 ರನ್ ಸಿಡಿಸಿದ್ದಾರೆ. ಇನ್ನು ಬೌಲಿಂಗ್ ನಲ್ಲಿ 137 ವಿಕೆಟ್ ಕಬಳಿಸಿದ್ದಾರೆ

4. ಎಂ.ಎಸ್.ಧೋನಿ

World Cup 2019 5 oldest players who will be featuring in this edition of the tournament
ಭಾರತ ತಂಡದ ವಿಶ್ವಕಪ್ ವಿಜೇತ ನಾಯಕ ಎಂ.ಎಸ್.ಧೋನಿ 37ನೇ ವಯಸ್ಸಿನಲ್ಲೂ, ವಿಶ್ವದ ಯಾವುದೇ ಯುವ ಕ್ರಿಕೆಟರ್‌ಗೆ ಕಮ್ಮಿ ಇಲ್ಲ ಎನ್ನುವಂತೆ ಫಿಟ್ನೆಸ್ ಕಾಯ್ದುಕೊಂಡಿದ್ದಾರೆ. ಭಾರತ ಕಪ್ ಗೆಲ್ಲಬೇಕಿದ್ದರೆ ಧೋನಿಯ ಸಲಹೆ, ಮಾರ್ಗದರ್ಶನ ಅವಶ್ಯಕ. ಧೋನಿ 341 ಪಂದ್ಯಗಳಲ್ಲಿ 10,500 ರನ್ ಬಾರಿಸಿದ್ದಾರೆ. ಇನ್ನು ವಿಕೆಟ್ ಹಿಂದೆ 314 ಕ್ಯಾಚ್ ಹಾಗೂ 120 ಸ್ಟಂಪಿಂಗ್ ಮಾಡಿದ್ದಾರೆ.

5. ಜೀವನ್ ಮೆಂಡಿಸ್

World Cup 2019 5 oldest players who will be featuring in this edition of the tournament
2015ರಲ್ಲಿ ಕೊನೆ ಬಾರಿಗೆ ಏಕದಿನ ಪಂದ್ಯವಾಡಿದ್ದ ಜೀವನ್ ಮೆಂಡಿಸ್‌ಗೆ ವಿಶ್ವಕಪ್ ತಂಡದಲ್ಲಿ ಸ್ಥಾನ ನೀಡಿ ಲಂಕಾ ಅಚ್ಚರಿ ನೀಡಿತ್ತು. ದೇಸಿ ಟೂರ್ನಿಯಲ್ಲಿ ಆಲ್ರೌಂಡ್ ಪ್ರದರ್ಶನ ತೋರಿ ಸ್ಥಾನ ಪಡೆದ ಮೆಂಡಿಸ್, ಅದೇ ಆಟ ಮುಂದುವರಿಸುವ ವಿಶ್ವಾಸದಲ್ಲಿದ್ದಾರೆ. 55 ಪಂದ್ಯಗಳಲ್ಲಿ 617 ರನ್ ಬಾರಿಸಿದ್ದಾರೆ. ಇನ್ನು ಬೌಲಿಂಗ್ ನಲ್ಲಿ 28 ವಿಕೆಟ್ ಕಬಳಿಸಿದ್ದಾರೆ. 
 
Follow Us:
Download App:
  • android
  • ios