ಬ್ರೆಜಿಲ್‌ನ ತಾರಾ ಆಟಗಾರನ ಸಹೋದರಿ ರಫೆಲಾ ಸ್ಯಾಂಟೋಸ್‌ ಸಂಭ್ರಮಾಚರಣೆ ವೇಳೆ ಭುಜದ ಮೂಳೆ ಮುರಿದುಕೊಂಡ ಪ್ರಸಂಗ ಬೆಳಕಿಗೆ ಬಂದಿದೆ. 

ರಿಯೋ ಡಿ ಜನೈರೋ[ಜೂ.28]: ಕೋಸ್ಟರಿಕಾ ವಿರುದ್ಧ ಬ್ರೆಜಿಲ್‌ ನಾಯಕ ನೇಯ್ಮರ್‌ ಗೋಲು ಬಾರಿಸಿ, ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟಿದ್ದರು. ಮೈದಾನದಲ್ಲಿ ಆನಂದಬಾಷ್ಪ ಸುರಿಸಿ ನೇಯ್ಮರ್ ಸಂಭ್ರಮಿಸಿದ್ದರು.

ತವರಿನಲ್ಲಿ ಪಂದ್ಯ ವೀಕ್ಷಿಸುತ್ತಿದ್ದ ಬ್ರೆಜಿಲ್‌ನ ತಾರಾ ಆಟಗಾರನ ಸಹೋದರಿ ರಫೆಲಾ ಸ್ಯಾಂಟೋಸ್‌ ಸಂಭ್ರಮಾಚರಣೆ ವೇಳೆ ಭುಜದ ಮೂಳೆ ಮುರಿದುಕೊಂಡ ಪ್ರಸಂಗ ಬೆಳಕಿಗೆ ಬಂದಿದೆ. ಬ್ರೆಜಿಲ್‌ ಗೆಲ್ಲುತ್ತಿದ್ದಂತೆ ಕುಣಿದು ಕುಪ್ಪಳಿಸಲು ಶುರು ಮಾಡಿದ ರಫೆಲಾ, ಸ್ನೇಹಿತನಿಗೆ ಡಿಕ್ಕಿ ಹೊಡೆದ ವೇಳೆ ಅವರ ಮೂಳೆ ಮುರಿದಿದೆ.

View post on Instagram
View post on Instagram

ಕೋಸ್ಟರಿಕಾ ವಿರುದ್ಧ ಬ್ರೆಜಿಲ್ 2-0 ಗೋಲುಗಳ ಅಂತರದಿಂದ ಜಯಭೇರಿ ಬಾರಿಸಿತ್ತು.