ನೀರಜ್ ಚೋಪ್ರಾ ಮೊದಲ ಪ್ರಯತ್ನದಲ್ಲೇ 88.77 ಮೀಟರ್ ದೂರ ಜಾವೆಲಿನ್ ಥ್ರೋ ಮಾಡುವ ಮೂಲಕ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದರು. ಇನ್ನು ಕನ್ನಡಿಗ ಡಿ.ಪಿ ಮನು ಮೊದಲ ಪ್ರಯತ್ನದಲ್ಲಿ 78.10 ಮೀಟರ್, ಎರಡನೇ ಪ್ರಯತ್ನದಲ್ಲಿ 81.31 ಮೀಟರ್ ದೂರ ಎಸೆಯುವ ಮೂಲಕ ಫೈನಲ್‌ಗೆ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಂಡರು. 

ಬುಡಾಪೆಸ್ಟ್(ಆ.25): ಟೋಕಿಯೋ ಒಲಿಂಪಿಕ್ಸ್ ಚಾಂಪಿಯನ್ ನೀರಜ್ ಚೋಪ್ರಾ, ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಇಂದು ಅದ್ಭುತ ಪ್ರದರ್ಶನ ತೋರುವ ಮೂಲಕ ಮುಂಬರುವ 2024ರ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇಂದು ನಡೆದ ಗ್ರೂಪ್ ಹಂತದ ಸ್ಪರ್ಧೆಯಲ್ಲಿ ನೀರಜ್ ಚೋಪ್ರಾ, 88.77 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ಈ ಋತುವಿನ ಶ್ರೇಷ್ಠ ಪ್ರದರ್ಶನ ತೋರುವುದರ ಮೂಲಕ ಫೈನಲ್‌ಗೆ ಲಗ್ಗೆಯಿಡುವುದರ ಜತೆಗೆ ಪ್ಯಾರಿಸ್ ಒಲಿಂಪಿಕ್ಸ್‌ಗೂ ಅರ್ಹತೆ ಪಡೆದಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು 83.00 ಮೀಟರ್ ಗುರಿ ನಿಗದಿ ಪಡಿಸಲಾಗಿದೆ.

'ಎ' ಗುಂಪಿನ ಸ್ಪರ್ಧೆಯಲ್ಲಿ ನೀರಜ್‌ ಚೋಪ್ರಾ 88.77 ಮೀಟರ್ ದೂರ ಜಾವೆಲಿನ್ ಎಸೆಯುವುದರ ಮೂಲಕ ಅಗ್ರಸ್ಥಾನದೊಂದಿಗೆ ಫೈನಲ್‌ಗೆ ಲಗ್ಗೆಯಿಟ್ಟರು. ಇನ್ನು ಕನ್ನಡಿಗ ಡಿ.ಪಿ ಮನು 81.31 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ 'ಎ' ಗುಂಪಿನಲ್ಲಿ ಮೂರನೇ ಸ್ಥಾನಿಯಾಗಿ ಹಾಗೂ ಒಟ್ಟಾರೆ 6ನೇ ಸ್ಥಾನಿಯಾಗಿ ಫೈನಲ್‌ಗೆ ಲಗ್ಗೆಯಿಡುವಲ್ಲಿ ಯಶಸ್ವಿಯಾಗಿದ್ದಾರೆ.

Scroll to load tweet…

ನೀರಜ್ ಚೋಪ್ರಾ ಮೊದಲ ಪ್ರಯತ್ನದಲ್ಲೇ 88.77 ಮೀಟರ್ ದೂರ ಜಾವೆಲಿನ್ ಥ್ರೋ ಮಾಡುವ ಮೂಲಕ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದರು. ಇನ್ನು ಕನ್ನಡಿಗ ಡಿ.ಪಿ ಮನು ಮೊದಲ ಪ್ರಯತ್ನದಲ್ಲಿ 78.10 ಮೀಟರ್, ಎರಡನೇ ಪ್ರಯತ್ನದಲ್ಲಿ 81.31 ಮೀಟರ್ ದೂರ ಎಸೆಯುವ ಮೂಲಕ ಫೈನಲ್‌ಗೆ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಂಡರು. 

Scroll to load tweet…

ಇನ್ನು 'ಬಿ' ಗುಂಪಿನಲ್ಲಿ ಸ್ಥಾನ ಪಡೆದಿದ್ದ ಮತ್ತೋರ್ವ ಜಾವೆಲಿನ್ ಥ್ರೋ ಪಟು ಕಿಶೋರ್ ಜೆನಾ ಕೂಡಾ ಫೈನಲ್‌ಗೆ ಅರ್ಹತೆಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಿಶೋರ್ ಜೆನಾ 80.55 ಮೀಟರ್ ದೂರ ಜಾವೆಲಿನ್ ಥ್ರೋ ಮಾಡುವಲ್ಲಿ ಸಫಲವಾಗುವ ಮೂಲಕ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್‌ಗೇರುವಲ್ಲಿ ಯಶಸ್ವಿಯಾಗಿದ್ದಾರೆ.

ಪುರುಷರ ಜಾವೆಲಿನ್ ಥ್ರೋನಲ್ಲಿ ಫೈನಲ್‌ಗೇರಿದ 12 ಅಥ್ಲೀಟ್‌ಗಳು ಹೀಗಿದ್ದಾರೆ ನೋಡಿ:

Scroll to load tweet…

1. ನೀರಜ್ ಚೋಪ್ರಾ(ಭಾರತ): 88.77 ಮೀಟರ್
2.ಆರ್ಶದ್ ನದೀಮ್‌(ಪಾಕಿಸ್ತಾನ): 86.79 ಮೀಟರ್
3. ಜೇಕೊಬ್ ವೆಡ್ಲ್‌ಜೆಕ್(ಜೆಕ್ ರಿಪಬ್ಲಿಕ್): 83.50 ಮೀಟರ್
4. ಜೂಲಿಯನ್ ವೇಬರ್(ಜರ್ಮನಿ): 82.39 ಮೀಟರ್
5. ಎಡಿಸ್ ಮ್ಯಾಥುಸೇವಿಸ್‌(ಲಿಥುನಿಯಾ): 82.35 ಮೀಟರ್
6. ಡಿ.ಪಿ.ಮನು(ಭಾರತ): 81.31 ಮೀಟರ್
7.ಡೇವಿಡ್ ವ್ಯಾಗ್ನರ್(ಪೋಲೆಂಡ್): 81.25 ಮೀಟರ್
8. ಇಹಾಬ್ ಅಬದೆಹ್ರಾಮನ್(ಈಜಿಪ್ಟ್): 80.75 ಮೀಟರ್
9. ಕಿಶೋರ್ ಜೆನಾ(ಭಾರತ): 80.55 ಮೀಟರ್
10. ಓಲಿವರ್ ಹೆಲಂದರ್(ಫಿನ್‌ಲ್ಯಾಂಡ್): 80.19 ಮೀಟರ್
11.ಟಿಮೊಥಿ ಹೆರ್ಮನ್‌(ಬೆಲ್ಜಿಯಂ): 80.11 ಮೀಟರ್
12. ಆಂಡ್ರಿನ್‌ ಮೆರ್ದಾರೆ(ಮಾಲ್ಡಾವಾ): 79.78 ಮೀಟರ್