ಇಂದು ಬೆಂಗಳೂರು ವಿಶ್ವ 10ಕೆ ಮ್ಯಾರಥಾನ್ ಓಟ

World 10K Marathon in Bengaluru today
Highlights

ವಿಶ್ವ 10ಕೆ ಬೆಂಗಳೂರು ಮ್ಯಾರಥಾನ್ ಓಟದ 11ನೇ ಆವೃತ್ತಿಗೆ ಭಾನುವಾರ ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ಚಾಲನೆ ದೊರೆಯಲಿದೆ. ಎಂದಿನಂತೆ ಈ ಬಾರಿಯೂ ಓಟಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸುಮಾರು 25000
ಸ್ಪರ್ಧಿಗಳು ಭಾಗವಹಿಸುತ್ತಿದ್ದಾರೆ.

(ಸಾಂದರ್ಭಿಕ ಚಿತ್ರ)

ಬೆಂಗಳೂರು(ಮೇ.27): ವಿಶ್ವ 10ಕೆ ಬೆಂಗಳೂರು ಮ್ಯಾರಥಾನ್ ಓಟದ 11ನೇ ಆವೃತ್ತಿಗೆ ಭಾನುವಾರ ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ಚಾಲನೆ ದೊರೆಯಲಿದೆ. ಎಂದಿನಂತೆ ಈ ಬಾರಿಯೂ ಓಟಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸುಮಾರು 25000
ಸ್ಪರ್ಧಿಗಳು ಭಾಗವಹಿಸುತ್ತಿದ್ದಾರೆ.

ಓಪನ್ 10ಕೆ ಬೆಳಗ್ಗೆ 5.30ಕ್ಕೆ ಕಂಠೀರವ ಕ್ರೀಡಾಂಗಣದಲ್ಲಿ ಆರಂಭವಾದರೆ, ವಿಶ್ವ 10ಕೆ ಎಲೈಟ್ ಪುರುಷರ ಸ್ಪರ್ಧೆ 8.50ಕ್ಕೆ ಶುರುವಾಗಿದೆ. 11ನೇ ಆವೃತ್ತಿಯ ಈ ಓಟದಲ್ಲಿ 6 ವಿಭಾಗಗಳನ್ನು ಮಾಡಲಾಗಿದೆ. ಓಪನ್ 10ಕೆಯಲ್ಲಿ 15000 ಮಜಾ ರನ್‌ನಲ್ಲಿ 8000, 1000 ಹಿರಿಯ ನಾಗರಿಕರು, 10ಕೆ ಎಲೈಟ್ ಮಹಿಳಾ ವಿಭಾಗದಲ್ಲಿ 40, ಅಂಗವಿಕಲರ ವಿಭಾಗದಲ್ಲಿ 750, 10ಕೆ ಎಲೈಟ್ ಪುರುಷರ ವಿಭಾಗದಲ್ಲಿ 50 ಸ್ಪರ್ಧಿಗಳು ಕಣಕ್ಕಿಳಿಯಲಿದ್ದಾರೆ.

46 ವಿಶ್ವ ಶ್ರೇಷ್ಠ ಅಥ್ಲೀಟ್‌ಗಳು ಭಾಗಿ: ಭಾರತದ ತಾರಾ ಅಥ್ಲೀಟ್‌ಗಳಾದ ಮೊನಿಕಾ ಆತ್ರೆ, ಸ್ವಾತಿ ಗದಾವೆ, ಸಂಜೀವಿನಿ, ಸ್ರೀನು ಬುಗಥಾ, ಶಂಕರ್ ಮನ ಥಾಪ, ಕರ್ನಾಟಕದ ಎ.ಬಿ. ಬೆಳ್ಳಿಯಪ್ಪ ಸೇರಿದಂತೆ 46 ಓಟಗಾರರು ಭಾಗವಹಿಸುತ್ತಿದ್ದಾರೆ. ಇದರಲ್ಲಿ 28 ಪುರುಷ ಮತ್ತು 18 ಮಹಿಳಾ ಅಥ್ಲೀಟ್‌ಗಳಿದ್ದಾರೆ. ಕೀನ್ಯಾ, ಇಥಿಯೋಪಿಯಾದ ಅಥ್ಲೀಟ್‌ಗಳು ಕಣದಲ್ಲಿದ್ದು, ಪ್ರಶಸ್ತಿ ಜಯಿಸುವ ನೆಚ್ಚಿನ ಓಟಗಾರರೆನಿಸಿದ್ದಾರೆ.

25 ವೈದ್ಯರ ತಂಡ: ಫೋರ್ಟಿಸ್ ಆಸ್ಪತ್ರೆಯ 25 ವೈದ್ಯರು ಮತ್ತು 200 ವೈದ್ಯಕೀಯ ಸಿಬ್ಬಂದಿ ಓಟದ ಮಾರ್ಗ ಮಧ್ಯೆ ಇರಲಿದ್ದಾರೆ. ಜತೆಯಲ್ಲಿ ೬ ಮೊಬೈಲ್ ಆ್ಯಂಬುಲೆನ್ಸ್ ಹಾಗೂ ೩ ವೈದ್ಯಕೀಯ ಕೇಂದ್ರಗಳನ್ನು ನಿಯೋಜಿಸಲಾಗಿದೆ. ಇನ್ನುಳಿದಂತೆ ಓಟದ ಮಾರ್ಗದಲ್ಲಿ ನೀರಿನ ಕೇಂದ್ರಗಳು ಇರಲಿವೆ.

loader