Asianet Suvarna News Asianet Suvarna News

ಮಹಿಳಾ ಟಿ20 ವಿಶ್ವಕಪ್: ಪಾಕಿಸ್ತಾನವನ್ನು ಬಗ್ಗುಬಡಿದ ಟೀಂ ಇಂಡಿಯಾ

ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಮಾಡಲು ನಿರ್ಧರಿಸಿದ ಭಾರತ, ಕಳಪೆ ಫೀಲ್ಡಿಂಗ್ ಪ್ರದರ್ಶಿಸಿತು. ಭಾರತೀಯರು 4 ಕ್ಯಾಚ್‌ಗಳನ್ನು ಕೈಚೆಲ್ಲಿದ ಪರಿಣಾಮ ಪಾಕಿಸ್ತಾನ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 133 ರನ್‌ಗಳ ಗೌರವ ಮೊತ್ತ ಕಲೆಹಾಕಲು ಸಾಧ್ಯವಾಯಿತು. ಆದರೆ, 10 ಪೆನಾಲ್ಟಿ ರನ್ ಪಡೆದ ಭಾರತ, 19 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 137 ರನ್ ಕಲೆಹಾಕಿ ಜಯದ ಕೇಕೆ ಹಾಕಿತು. ಮಿಥಾಲಿ ರಾಜ್ ಆಕರ್ಷಕ ಶತಕ ಬಾರಿಸಿದರು.

Womens WorldCup T20 Mithali Raj stars as India beat Pakistan by seven wickets
Author
Guyana, First Published Nov 12, 2018, 10:55 AM IST

ಗಯಾನ[ನ.12]: ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಭಾರತ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿ, ಐಸಿಸಿ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಸತತ 2ನೇ ಗೆಲುವು ದಾಖಲಿಸಿದೆ. ಭಾನುವಾರ ಲ್ಲಿ ನಡೆದ ‘ಬಿ’ಗುಂಪಿನ ಪಂದ್ಯದಲ್ಲಿ ಪಾಕಿಸ್ತಾನ ನೀಡಿದ್ದ 134 ರನ್ ಗುರಿಯನ್ನು ಭಾರತ ಇನ್ನೂ ಒಂದು ಓವರ್ ಬಾಕಿ ಇರುವಂತೆಯೇ ತಲುಪಿತು.

ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಮಾಡಲು ನಿರ್ಧರಿಸಿದ ಭಾರತ, ಕಳಪೆ ಫೀಲ್ಡಿಂಗ್ ಪ್ರದರ್ಶಿಸಿತು. ಭಾರತೀಯರು 4 ಕ್ಯಾಚ್‌ಗಳನ್ನು ಕೈಚೆಲ್ಲಿದ ಪರಿಣಾಮ ಪಾಕಿಸ್ತಾನ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 133 ರನ್‌ಗಳ ಗೌರವ ಮೊತ್ತ ಕಲೆಹಾಕಲು ಸಾಧ್ಯವಾಯಿತು. ಆದರೆ, 10 ಪೆನಾಲ್ಟಿ ರನ್ ಪಡೆದ ಭಾರತ, 19 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 137 ರನ್ ಕಲೆಹಾಕಿ ಜಯದ
ಕೇಕೆ ಹಾಕಿತು. ಮಿಥಾಲಿ ರಾಜ್ ಆಕರ್ಷಕ ಶತಕ ಬಾರಿಸಿದರು.

ಸ್ಮತಿ ಮಂಧನಾ(26) ಹಾಗೂ ಮಿಥಾಲಿ ಮೊದಲ ವಿಕೆಟ್‌ಗೆ 73 ರನ್ ಜೊತೆಯಾಟವಾಡಿದರು. ಸ್ಮತಿ ವಿಕೆಟ್ ಪತನಗೊಂಡ ಬಳಿಕ, ಮಿಥಾಲಿ ಜತೆ ಸೇರಿದ ಜೆಮಿಮಾ ರೋಡ್ರಿಗಾಸ್(16) ತಂಡದ ಮೊತ್ತವನ್ನು 100 ರನ್ ಗಡಿ ದಾಟಿಸಿದರು. ಅಂ.ರಾ.ಟಿ20ಯಲ್ಲಿ 16ನೇ ಅರ್ಧಶತಕ ಪೂರೈಸಿದ ಮಿಥಾಲಿ 47 ಎಸೆತಗಳಲ್ಲಿ 7 ಬೌಂಡರಿಗಳೊಂದಿಗೆ 56 ರನ್ ಗಳಿಸಿದರು. ಕೊನೆಯಲ್ಲಿ ಹರ್ಮನ್‌ಪ್ರೀತ್ ಕೌರ್ (14) ಹಾಗೂ ವೇದಾ ಕೃಷ್ಣಮೂರ್ತಿ (08) ಭಾರತವನ್ನು ಗೆಲುವಿನ ದಡ ಮುಟ್ಟಿಸಿದರು. 2016ರ ಟಿ20 ವಿಶ್ವಕಪ್‌ನಲ್ಲಿ ಅನುಭವಿಸಿದ್ದ ಸೋಲಿಗೆ, ಭಾರತ ಸೇಡು ತೀರಿಸಿಕೊಂಡಿತು. 

ಪಾಕ್‌ಗೆ ಆರಂಭಿಕ ಆಘಾತ: ಪಾಕಿಸ್ತಾನಿ ಆಟಗಾರ್ತಿಯರು ಸ್ಪಿನ್ ಬೌಲಿಂಗ್ ಅನ್ನು ಸಮರ್ಥವಾಗಿ ಎದುರಿಸಲಿದ್ದಾರೆ ಎನ್ನುವ ಅಂಶ ತಿಳಿದಿದ್ದರೂ, ಭಾರತ ಯಾವುದೇ ಬದಲಾವಣೆ ಇಲ್ಲದೆ ಕಣಕ್ಕಿಳಿಯಿತು. ನಾಲ್ವರು ತಜ್ಞ ಸ್ಪಿನ್ನರ್‌ಗಳು, ಏಕೈಕ ವೇಗಿಯೊಂದಿಗೆ ಆಡಲು ನಿರ್ಧರಿಸಿತು. ಮೊದಲ ಓವರ್‌ನಲ್ಲೇ ಭಾರತಕ್ಕೆ ಯಶಸ್ಸು ದೊರೆಯಿತು. ವೇಗದ ಬೌಲರ್ ಅರುಂಧತಿ ರೆಡ್ಡಿ, ಆರಂಭಿಕ ಆಟಗಾರ್ತಿ ಆಯೇಷಾರನ್ನು ಔಟ್ ಮಾಡಿದರು. ಉಮೈಮಾ ಸೋಹೆಲ್ (03) ಹಾಗೂ ನಾಯಕಿ ಜವೇರಿಯಾ ಖಾನ್ (17) ರನೌಟ್ ಬಲೆಗೆ ಬಿದ್ದರು. ಪಾಕಿಸ್ತಾನ 30 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಭಾರೀ ಸಂಕಷ್ಟಕ್ಕೆ ಸಿಲುಕಿತು. 

ಭರ್ಜರಿ ಜೊತೆಯಾಟ: 4ನೇ ವಿಕೆಟ್‌ಗೆ ಕ್ರೀಸ್ ಹಂಚಿಕೊಂಡ ಬಿಸ್ಮಾ ಮರೂಫ್ ಹಾಗೂ ನಿದಾದರ್, ಭಾರತೀಯ ಮೇಲೆ ಪ್ರಾಬಲ್ಯ ಸಾಧಿಸಿದರು. ಇವರಿಬ್ಬರಿಗೆ ಭಾರತೀಯ ಫೀಲ್ಡರ್‌ಗಳು ಜೀವದಾನ ನೀಡಿದರು. 11ನೇ ಓವರ್‌ನಲ್ಲಿ ಬೌಂಡರಿ ಲೈನ್ ಬಳಿ ವೇದಾ ಕೃಷ್ಣಮೂರ್ತಿ, ನಿದಾ ದರ್ ನೀಡಿದ ಸುಲಭ ಕ್ಯಾಚ್ ಕೈಚೆಲ್ಲಿದರು. ಬಳಿಕ 12.4 ಓವರ್‌ಗಳಲ್ಲಿ ಪೂನಮ್ ಯಾದವ್ ಕ್ಯಾಚ್ ಬಿಟ್ಟು ನಿದಾಗೆ 2ನೇ ಜೀವದಾನ ನೀಡಿದರು. 13.4 ಓವರಲ್ಲಿ ಬಿಸ್ಮಾಗೂ ಜೀವದಾನ ಸಿಕ್ಕಿತು. ಇದರ ಲಾಭವೆತ್ತಿದ ಈ ಜೋಡಿ 94 ರನ್‌ಗಳ ಜೊತೆಯಾಟವಾಡಿತು. ಬಿಸ್ಮಾ ಹಾಗೂ ನಿದಾ ಇಬ್ಬರೂ 19ನೇ ಓವರ್‌ನಲ್ಲಿ ದಯಾಳನ್ ಹೇಮಲತಾಗೆ ವಿಕೆಟ್ ಒಪ್ಪಿಸಿದರು. 49 ಎಸೆತಗಳಲ್ಲಿ ಬಿಸ್ಮಾ 4 ಬೌಂಡರಿಗಳೊಂದಿಗೆ 53 ರನ್ ಗಳಿಸಿದರೆ, ನಿದಾ ದರ್ 35 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್‌ಗಳೊಂದಿಗೆ 52 ರನ್ ಸಿಡಿಸಿದರು. ಇವರಿಬ್ಬರ ವಿಕೆಟ್ ಪತನದಿಂದಾಗಿ 150 ರನ್ ದಾಟುವ ಪಾಕಿಸ್ತಾನ ಗುರಿ ಈಡೇರಲಿಲ್ಲ.

Follow Us:
Download App:
  • android
  • ios