ಇಂದು ತನ್ನ 2ನೇ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಬಾಂಗ್ಲಾದೇಶ ವಿರುದ್ಧ ಸೆಣಸಿದರೆ, ಶ್ರೀಲಂಕಾ ತಂಡ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ.
ಸೇಂಟ್ ಲೂಸಿಯಾ[ನ.12]: ಇಂಗ್ಲೆಂಡ್ ಹಾಗೂ ಶ್ರೀಲಂಕಾ ನಡುವಿನ ಐಸಿಸಿ ಮಹಿಳಾ ಟಿ20 ‘ಎ’ ಗುಂಪಿನ ಪಂದ್ಯ ಮಳೆಗೆ ಬಲಿಯಾಯಿತು.
ಇಲ್ಲಿನ ಡರೆನ್ ಸ್ಯಾಮಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಪಂದ್ಯ ಟಾಸ್ ಕೂಡ ಕಾಣದೆ ರದ್ದಾಯಿತು. ಉಭಯ ತಂಡಗಳು ತಲಾ ಒಂದು ಪಡೆದುಕೊಂಡವು. ಸೇಂಟ್ ಲೂಸಿಯಾದಲ್ಲಿ ಮಳೆ ಮುಂದುವರಿಯಲಿರುವ ಕಾರಣ, ಇಲ್ಲಿ ನಿಗದಿಯಾಗಿರುವ ಪಂದ್ಯಗಳನ್ನು ಆ್ಯಂಟಿಗಾಗೆ ಸ್ಥಳಾಂತರಗೊಳಿಸುವ ಬಗ್ಗೆ ಸ್ಥಳೀಯ ಆಯೋಜಕರು ಹಾಗೂ ಐಸಿಸಿ ಚಿಂತನೆ ನಡೆಸಿದೆ ಎನ್ನಲಾಗಿದೆ.
ಇಂದು ತನ್ನ 2ನೇ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಬಾಂಗ್ಲಾದೇಶ ವಿರುದ್ಧ ಸೆಣಸಿದರೆ, ಶ್ರೀಲಂಕಾ ತಂಡ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ.